ಅಹ್ಮದಾಬಾದ್: ಗುಜರಾತ್ನಲ್ಲಿ ಇಂದು ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಪ್ರಧಾನಿ ಮೋದಿ ತಾಯಿ ಹೀರಾಬೇನ್ ಮತ್ತು ಗುಜರಾತ್ನ ಮಾಜಿ ಮುಖ್ಯಮಂತ್ರಿ ಆನಂದಿ ಬೇನ್ ತಮ್ಮ ಮತ ಚಲಾಯಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ಮತ ಚಲಾಯಿಸಲು ಗುಜರಾತ್ಗೆ ತೆರಳಲಿದ್ದಾರೆ. ಕೊನೆಯ ಹಂತದಲ್ಲಿ, 851 ಅಭ್ಯರ್ಥಿಗಳು ಮತದಾನದಲ್ಲಿದ್ದಾರೆ, ಅವರ ಭವಿಷ್ಯವನ್ನು 2.22 ಕೋಟಿ ಮತದಾರು ನಿರ್ಧರಿಸುತ್ತಾರೆ.
ಕೊನೆಯ ಹಂತದ ಮತದಾನ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದೆ ಮತ್ತು ಸಂಜೆ 5 ಗಂಟೆವರೆಗೆ ನಡೆಯಲಿದೆ. ಅಹಮದಾಬಾದ್ ಜಿಲ್ಲೆಯ ನರನ್ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್ ಶಾ ಅವರು ಮತ ಚಲಾಯಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಬೇನ್ ಅವರು ಗಾಂಧಿನಗರ ಮತಗಟ್ಟೆಯಲಿ ತಮ್ಮ ಮತ ಚಲಾಯಿಸಿದರು. ಮತ ಚಲಾಯಿಸಿದ ನಂತರ, ಮೋದಿ ಅವರ ತಾಯಿ ತನ್ನ ಬೆರಳಿನ ಮೇಲೆ ಮತದಾನ ಚಿಹ್ನೆಯನ್ನು ತೋರಿಸಿದರು. ಈ ಸಮಯದಲ್ಲಿ ಹೀರಾಬೇನ್ "ಓ ದೇವರೇ, ಗುಜರಾತ್ಗೆ ಒಳ್ಳೆಯದನ್ನು ಮಾಡು" ಎಂದು ಹೇಳಿದರು.
PM Modi's mother Heeraben cast her vote in a polling booth in Gandhinagar #GujaratElection2017 pic.twitter.com/5PJxvGbf91
— ANI (@ANI) December 14, 2017
ಗುಜರಾತ್ನ ಮಾಜಿ ಮುಖ್ಯಮಂತ್ರಿ ಆನಂದಿ ಬೇನ್ ಪಟೇಲ್ ಅವರು ಅಹ್ಮದಾಬಾದ್ನಲ್ಲಿ ಘಾಲ್ಡೊಡಿಯ ಅಸೆಂಬ್ಲಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಈ ಸ್ಥಾನದಲ್ಲಿ ಬಿಜೆಪಿಯ ಭೂಪಿಂದರ್ ಪಟೇಲ್ ಮತ್ತು ಕಾಂಗ್ರೆಸ್ನ ಶಶಿಕಾಂತ್ ಪಟೇಲ್ ನಡುವಿನ ಸ್ಪರ್ಧೆ ಇದೆ.
Former Gujarat CM Anandiben Patel casts her vote in Ahmedabad's Ghatlodia. BJP's Bhupendra Patel is up against Congress's Shashikant Patel on this seat #GujaratElection2017 pic.twitter.com/4uVYtOf2bg
— ANI (@ANI) December 14, 2017
ಅಂತಿಮ ಹಂತದ ಮತದಾನಕ್ಕೆ ಮುಂಚಿತವಾಗಿ ಪಟೀದಾರ್ ಸಮುದಾಯದ ನಾಯಕರಾದ ಹಾರ್ದಿಕ್ ಪಟೇಲ್ ಅವರ ಪೋಷಕರು ತಮ್ಮ ಮನೆಯಲ್ಲಿ ಪೂಜೆಸಲ್ಲಿಸಿದ್ದಾರೆ. ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ ಅತಿದೊಡ್ಡ ಅಂಶವಾಗಿ ಹೊರಹೊಮ್ಮಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ರಾಜ್ಯದ ಪಟಿದರ್ ಸಮಾಜಕ್ಕೆ ಒಬಿಸಿ ವಿಭಾಗದಲ್ಲಿ ಮೀಸಲಾತಿ ನೀಡಬೇಕೆಂದು ಹಾರ್ದಿಕ್ ಒತ್ತಾಯಿಸಿದರು. ಅದರ ನಂತರ ರಾಜ್ಯದ ಆಡಳಿತಾರೂಢ ಬಿಜೆಪಿ ಅವರ ಮೇಲೆ ಮತ್ತು ರಾಷ್ಟ್ರದ ಅನೇಕ ಪಾಟೀದರ್ ಸಮಾಜದ ಜನರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದೆ. ಅಂದಿನಿಂದ, ಹಾರ್ದಿಕ್ ರಾಜ್ಯದಾದ್ಯಂತ ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದಾರೆ.
Hardik Patel's parents pray as voting for second phase of #GujaratElection2017 begins pic.twitter.com/YZAaAtMWL6
— ANI (@ANI) December 14, 2017
ಹಾರ್ದಿಕ್ ಪಟೇಲ್ ಪೋಷಕರಾದ ಭಾರತಿ ಪಟೇಲ್ ಮತ್ತು ಉಷಾ ಪಟೇಲ್ ಅವರು ವಿರಾಮ್ಗಂನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.
Parents of Hardik Patel Bharat Patel and Usha Patel cast their votes in Viramgam #GujaratElection2017 pic.twitter.com/pCiNOgB9Oa
— ANI (@ANI) December 14, 2017
ಬಿಜೆಪಿ ವಿರೋಧಿ ಚಳವಳಿಯಲ್ಲಿ ಹಾರ್ದಿಕ್ ಗೆ ಜಯ ಲಭಿಸುವುದೇ ಎಂಬುದು ಈ ದಿನ ನಿರ್ಣಯವಾಗಲಿದೆ. ಫಲಿತಾಂಶ ಡಿಸೆಂಬರ್ 18 ರಂದು ತಿಳಿಯಲಿದೆ.