Watch: ಮೋದಿ ವಿರುದ್ದ ಅಸಭ್ಯ ಘೋಷಣೆ ಕೂಗುತ್ತಿದ್ದ ಮಕ್ಕಳಿಗೆ ಬುದ್ದಿ ಹೇಳಿದ ಪ್ರಿಯಾಂಕಾ ಗಾಂಧಿ!

 ವೈರಲ್ ಆಗಿರುವ ವೀಡಿಯೋದಲ್ಲಿ ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಘೋಷಣೆ ಕೂಗಿದ ಮಕ್ಕಳಿಗೆ ಪ್ರಿಯಾಂಕಾ ಗಾಂಧಿ  ತಡೆಯೊಡ್ಡಿ ಬುದ್ದಿ ಹೇಳಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Last Updated : May 1, 2019, 05:16 PM IST
Watch: ಮೋದಿ ವಿರುದ್ದ ಅಸಭ್ಯ ಘೋಷಣೆ ಕೂಗುತ್ತಿದ್ದ ಮಕ್ಕಳಿಗೆ ಬುದ್ದಿ ಹೇಳಿದ ಪ್ರಿಯಾಂಕಾ ಗಾಂಧಿ! title=
Photo courtesy: Facebook

ನವದೆಹಲಿ: ವೈರಲ್ ಆಗಿರುವ ವೀಡಿಯೋದಲ್ಲಿ ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಘೋಷಣೆ ಕೂಗಿದ ಮಕ್ಕಳಿಗೆ ಪ್ರಿಯಾಂಕಾ ಗಾಂಧಿ  ತಡೆಯೊಡ್ಡಿ ಬುದ್ದಿ ಹೇಳಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೋವೊಂದರಲ್ಲಿ ಮಕ್ಕಳು ಪ್ರಧಾನಿ ಮೋದಿ ವಿರುದ್ಧ ಚೌಕಿದಾರ್ ಚೋರ್ ಹೈ ಎಂದು ನಿರಂತರವಾಗಿ ಘೋಷಣೆ ಕೂಗುತ್ತಿದ್ದರು.ಈ ಸಂದರ್ಭದಲ್ಲಿ ತಕ್ಷಣ ಮಧ್ಯ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ 'ಯೇ ವಾಲಾ ನಹಿ' ಯೇ ವಾಲಾ ನಹಿ, ಅಚ್ಚಾ ನಹಿನ್ ಲಗ್ ರಹಾ ಹೈ'( ಇದು ಸರಿ ಕಾಣುತ್ತಿಲ್ಲ ) ಎಂದು ಬೆರಳು ಮಾಡಿ ಮಕ್ಕಳಿಗೆ ಬುದ್ದಿವಾದ ಹೇಳಿದರು. ಇದಾದ ನಂತರ ಮಕ್ಕಳು ತಕ್ಷಣ ಆ ಘೋಷಣೆಯನ್ನು ನಿಲ್ಲಿಸಿ ರಾಹುಲ್ ಗಾಂಧಿ ಜಿಂದಾಬಾದ್ ಎನ್ನುವ ಘೋಷಣೆಯನ್ನು ಕೂಗಿದರು.

ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಪ್ರಿಯಾಂಕಾರ ಈ ನಡೆ ಈಗ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.

Trending News