ಸೋನಭದ್ರ ಸಂತ್ರಸ್ತರ ಭೇಟಿಗೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಬಂಧನ

ಉತ್ತರ ಪ್ರದೇಶದ ಸೋನಭದ್ರದಲ್ಲಿ ಭೂವಿವಾದ ಹಿನ್ನಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 9 ಜನರು ಸಾವನ್ನಪ್ಪಿದ್ದರಲ್ಲದೆ 19 ಜನರು ಗಾಯಗೊಂಡಿದ್ದರು. ಈ ಘಟನೆಯ ಹಿನ್ನಲೆಯಲ್ಲಿ ಈ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144ನ್ನು ಜಾರಿ ಮಾಡಲಾಗಿತ್ತು.ಈ ವೇಳೆ ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ್ದ ಪ್ರಿಯಾಂಕಾ ಗಾಂಧಿಗೆ ಪೊಲೀಸರು ತಡೆಯೋಡ್ಡಿದರು. 

Last Updated : Jul 19, 2019, 01:01 PM IST
ಸೋನಭದ್ರ ಸಂತ್ರಸ್ತರ ಭೇಟಿಗೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಬಂಧನ title=
Photo Courtesy: ANI

ನವದೆಹಲಿ: ಉತ್ತರ ಪ್ರದೇಶದ ಸೋನಭದ್ರದಲ್ಲಿ ಭೂವಿವಾದ ಹಿನ್ನಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 9 ಜನರು ಸಾವನ್ನಪ್ಪಿದ್ದರಲ್ಲದೆ 19 ಜನರು ಗಾಯಗೊಂಡಿದ್ದರು. ಈ ಘಟನೆಯ ಹಿನ್ನಲೆಯಲ್ಲಿ ಈ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144ನ್ನು ಜಾರಿ ಮಾಡಲಾಗಿತ್ತು.ಈ ವೇಳೆ ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ್ದ ಪ್ರಿಯಾಂಕಾ ಗಾಂಧಿಗೆ ಪೊಲೀಸರು ತಡೆಯೋಡ್ಡಿದರು. 

ಈ ಹಿನ್ನಲೆಯಲ್ಲಿ ನಾರಾಯಣಪುರದಲ್ಲಿ ಈಗ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ 'ಸೋನಾಭದ್ರ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳನ್ನು ಭೇಟಿ ಮಾಡಬೇಕಾಗಿತ್ತು, ನಾನು ಆ ಸ್ಥಳಕ್ಕೆ ಕೇವಲ ನಾಲ್ಕು ಜನರನ್ನು ಮಾತ್ರ ಕರೆದುಕೊಂಡು ಹೋಗುವುದಾಗಿ ಹೇಳಿದೆನು.ಆದರು ಆಡಳಿತವು ನಮಗೆ ಅಲ್ಲಿಗೆ ಹೋಗಲು ಅವಕಾಶ ನೀಡಲಿಲ್ಲ. ನಮಗೆ ಏಕೆ ತಡೆಯೊಡ್ಡಲಾಯಿತು ಎನ್ನುವುದನ್ನು ಅವರು ಹೇಳಬೇಕು. ನಾವು ಇಲ್ಲಿಯೇ ಶಾಂತವಾಗಿ ಕುಳಿತುಕೊಳ್ಳುತ್ತೇವೆ ಎಂದು ಹೇಳಿದರು. ಆಗ ಶಾಂತವಾಗಿ ಪ್ರತಿಭಟನೆಗೆ ಕೂರಲು ಮುಂದಾಗಾಗ ಉತ್ತರಪ್ರದೇಶದ ಪೋಲಿಸರು ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ " ನಾವು ಸುಮ್ಮನೆ ಶರಣಾಗತರಾಗುವುದಿಲ್ಲ, ನಾವು ಶಾಂತಿಯುತವಾಗಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಹೋಗುತ್ತಿದ್ದೆವು. ಆದರೆ ಈಗ ಅವರು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ನಮಗೆ ಗೊತ್ತಿಲ್ಲ, ಆದರೆ ನಾವು ಎಲ್ಲಿಗಾದರೂ ಹೋಗಲು ಸಿದ್ಧ 'ಎಂದು ಹೇಳಿದರು. ಇನ್ನೊಂದೆಡೆ ಈ ಘಟನೆ ವಿಚಾರವಾಗಿ ಮಾತನಾಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 'ಇದುವರೆಗೆ 29 ಅಪರಾಧಿಗಳನ್ನು ಬಂಧಿಸಲಾಗಿದೆ. ಒಂದು ಬ್ಯಾರೆಲ್ ಗನ್, ಮೂರು ಡಬಲ್ ಬ್ಯಾರೆಲ್ ಗನ್ ಹಾಗೂ ರೈಫಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಗೆ ಕಾರನಕರ್ತರಾದವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

Trending News