ಪ್ರಿಯಾಂಕಾ ಗಾಂಧಿ ತನ್ನ ಪುತ್ರಿ ಮಿರಾಯಾಗೆ ಬರ್ತ್ ಡೇ ಶುಭ ಕೋರಿದ್ದು ಹೀಗೆ..!

ಇಂದು ತಮ್ಮ ಪುತ್ರಿ ಮಿರಾಯಾ ವಾದ್ರಾ ಹುಟ್ಟುಹಬ್ಬಕ್ಕೆ ಶುಭಕೋರಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಹಳೆಯ ವೀಡಿಯೋವೊಂದನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Jun 24, 2021, 05:24 PM IST
  • ಇಂದು ತಮ್ಮ ಪುತ್ರಿ ಮಿರಾಯಾ ವಾದ್ರಾ ಹುಟ್ಟುಹಬ್ಬಕ್ಕೆ ಶುಭಕೋರಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಹಳೆಯ ವೀಡಿಯೋವೊಂದನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
  • ಇದರಲ್ಲಿ ಅವರು ಅವರು ಯಾಕೆ ಇಷ್ಟು ಬೇಗ ಬೆಳೆಯುತ್ತಾರೋ ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಗಾಂಧಿ ತನ್ನ ಪುತ್ರಿ ಮಿರಾಯಾಗೆ ಬರ್ತ್ ಡೇ ಶುಭ ಕೋರಿದ್ದು ಹೀಗೆ..! title=
Photo Courtesy: Instagram

ನವದೆಹಲಿ: ಇಂದು ತಮ್ಮ ಪುತ್ರಿ ಮಿರಾಯಾ ವಾದ್ರಾ ಹುಟ್ಟುಹಬ್ಬಕ್ಕೆ ಶುಭಕೋರಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಹಳೆಯ ವೀಡಿಯೋವೊಂದನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲಿ ಅವರು ಅವರು ಯಾಕೆ ಇಷ್ಟು ಬೇಗ ಬೆಳೆಯುತ್ತಾರೋ ಎಂದು ಬರೆದುಕೊಂಡಿದ್ದಾರೆ.ಹದಿಹರೆಯದವರಾಗಿ ಮಿರಾಯಾ (Miraya Vadra) ಅವರ ಜೊತೆಗೆ ಥ್ರೋ ಬ್ಯಾಕ್ ವೀಡಿಯೋ ಜೊತೆಗೆ ಇತ್ತೀಚಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.ಮಿರಾಯಾ ವಾದ್ರಾ ತಾಯಿ ಮತ್ತು ಹಿರಿಯ ಸಹೋದರ ರೈಹಾನ್ ಜೊತೆ ಹಾಸಿಗೆಯಲ್ಲಿ ಮಲಗಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. 

 
 
 
 

 
 
 
 
 
 
 
 
 
 
 

A post shared by Priyanka Gandhi Vadra (@priyankagandhivadra)

ಇದನ್ನೂ ಓದಿ: ಉತ್ತರ ಪ್ರದೇಶದ ಸಿಎಂ ಆಗುತ್ತಾರೆಯೇ ಪ್ರಿಯಾಂಕಾ ಗಾಂಧಿ?

19 ನೇ ವರ್ಷಕ್ಕೆ ಕಾಲಿಡುತ್ತಿರುವ ಮಿರಾಯಾಗೆ ಶುಭಕೋರಿರುವ ಈ ಪೋಸ್ಟ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈ ವೀಡಿಯೋಗೆ ಸಾಕಷ್ಟು ಜನರು ಲೈಕ್ ಮಾಡಿ ಪ್ರತಿಕ್ರಿಯಿಸಿದ್ದಾರೆ.ಏತನ್ಮಧ್ಯೆ, 20 ವರ್ಷದ ರೈಹಾನ್ ರಾಜೀವ್ ವಾದ್ರಾ ಸಹ ತನ್ನ ಸಹೋದರಿಗೆ ಇನ್ಸ್ಟಾಗ್ರಾಂ ನಲ್ಲಿ ಶುಭಾಕೊರೀದ್ದಾರೆ.ಇದರಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟು ನಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

'ಜನ್ಮದಿನದ ಶುಭಾಶಯಗಳು ಮಿನಿ! ಯಾವಾಗಲೂ ಸಮುದ್ರದಂತೆ ಮುಕ್ತವಾಗಿರು. ನನ್ನೆಲ್ಲರ ಪ್ರೀತಿ ಯಾವಾಗಲೂ" ಎಂದು ಉದಯೋನ್ಮುಖ ಫೋಟೋಗ್ರಾಪರ್ ರೈಹಾನ್ ವಾದ್ರಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಆಗ್ತಾರಾ ಪ್ರಿಯಾಂಕಾ ಗಾಂಧಿ..? ಇಲ್ಲಿದೆ ಮೆಗಾ ಪ್ಲಾನ್

ರೈಹಾನ್ ಮತ್ತು ಮಿರಾಯಾಇಬ್ಬರು ರಾಬರ್ಟ್ ವಾದ್ರಾ-ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಮಕ್ಕಳು, ಇನ್ನೊಂದೆಡೆಗೆ ರಾಬರ್ಟ್ ವಾದ್ರಾ ಕೂಡ ತಮ್ಮ ಮಗಳಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. "ನನ್ನ ಡಾರ್ಲಿಂಗ್ ಮಗಳು ಮಿರಾಯಾಗೆ ಜನ್ಮದಿನದ ಶುಭಾಶಯಗಳು! ಇಂದು 19 ನೇ ವರ್ಷಕ್ಕೆ ಕಾಲಿಡುತ್ತಿದಾಳೆ"ಎಂದು ಅವರು ಬರೆದುಕೊಂಡಿದ್ದಾರೆ.

ರೈಹಾನ್ ಮತ್ತು ಮಿರಾಯಾ ವಾದ್ರಾ ಸಾಮಾನ್ಯವಾಗಿ ಮಾಧ್ಯಮಗಳಿಂದ ದೂರವಿರುತ್ತಾರೆ ಮತ್ತು ತಾಯಿಯ ಸಾಮಾಜಿಕ ಮಾಧ್ಯಮದಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ, ಆದರೂ ಪ್ರಿಯಾಂಕಾ ಗಾಂಧಿ ಕಳೆದ ವರ್ಷ ಮಹಿಳಾ ಸಬಲೀಕರಣ ಅಭಿಯಾನದ ಭಾಗವಾಗಿ ತನ್ನ ಮಗಳು ಮತ್ತು ತಾಯಿ ಸೋನಿಯಾ ಗಾಂಧಿಯವರ ಚಿತ್ರವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: Video: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಲಿಸ್ ಲಾಠಿಚಾರ್ಜ್ ನಿಂದ ರಕ್ಷಿಸಿದ ಪ್ರಿಯಾಂಕಾ ಗಾಂಧಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News