BJP ಜೊತೆ ಒಪ್ಪಂದ ಮಾಡಿಕೊಂಡು Payments ಸೇವೆ ಆರಂಭಿಸಲು ಬಯಸುತ್ತಿದೆ WhatsApp: ರಾಹುಲ್

ಅಮೆರಿಕದ ಟೈಮ್ ನಿಯತಕಾಲಿಕದಲ್ಲಿ ಪ್ರಕಟಗೊಂಡ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ವಾಟ್ಸಾಪ್ ಮೇಲೆ ಬಿಜೆಪಿ ನಿಯಂತ್ರಣ ಹೊಂದಿದೆ ಎಂದು ಆರೋಪಿಸಿದ್ದಾರೆ.

Last Updated : Aug 29, 2020, 06:08 PM IST
BJP ಜೊತೆ ಒಪ್ಪಂದ ಮಾಡಿಕೊಂಡು Payments ಸೇವೆ ಆರಂಭಿಸಲು ಬಯಸುತ್ತಿದೆ WhatsApp: ರಾಹುಲ್  title=

ನವದೆಹಲಿ: ರಾಹುಲ್ ಗಾಂಧಿ(Rahul Gandhi) ಮತ್ತೊಮ್ಮೆ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ. ಅಮೆರಿಕದ ಟೈಮ್ ನಿಯತಕಾಲಿಕವು ಬಿಜೆಪಿ ಮತ್ತು ವಾಟ್ಸಾಪ್ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ವಾಟ್ಸಾಪ್ ಮೇಲೆ ಬಿಜೆಪಿ ನಿಯಂತ್ರಣ ಹೊಂದಿದೆ ಎಂಬ ವಿಷಯವನ್ನು ಅವರು ಮತ್ತೊಮ್ಮೆ ಉಲ್ಲೇಖಿಸಿದ್ದಾರೆ.

ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ರಾಹುಲ್ ಗಾಂಧಿ “ಅಮೆರಿಕದ ಟೈಮ್ ನಿಯತಕಾಲಿಕವು ವಾಟ್ಸಾಪ್-ಬಿಜೆಪಿಯ ಸಂಬಂಧವನ್ನು ಬಹಿರಂಗಪಡಿಸಿದೆ. ವಾಟ್ಸಾಪ್ ಅನ್ನು ಭಾರತದ 40 ಕೋಟಿ ಜನರು ಬಳಸುತ್ತಾರೆ ಮತ್ತು ಇದು ದೇಶದಲ್ಲಿ ತನ್ನ ಪೇಮೆಂಟ್ಸ್  ಸೇವೆಯನ್ನು ಪ್ರಾರಂಭಿಸಲು ಬಯಸುತ್ತಿದೆ. ಇದಕ್ಕಾಗಿ ಮೋದಿ ಸರ್ಕಾರದ ಅನುಮೋದನೆ ಅಗತ್ಯ. ಈ ರೀತಿಯಾಗಿ, ವಾಟ್ಸಾಪ್ ಮೇಲೆ ಬಿಜೆಪಿ ನಿಯಂತ್ರಣ ಹೊಂದಿದೆ" ಎಂದಿದ್ದಾರೆ.

ಈ ಮೊದಲು ಕೂಡ ರಾಹುಲ್ ಗಾಂಧಿ ಅವರು ಫೇಸ್‌ಬುಕ್ ಮತ್ತು ವಾಟ್ಸಾಪ್‌ ಕುರಿತು ಬಿಜೆಪಿಯನ್ನು ಗುರಿಯಾಗಿಸಿದ್ದರು. ಭಾರತದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ನಿಯಂತ್ರಿಸುತ್ತವೆ ಎಂದು ಅವರು ಆರೋಪಿಸಿದ್ದರು. ಇದರೊಂದಿಗೆ ಫೇಸ್‌ಬುಕ್ ಮತ್ತು ವಾಟ್ಸಾಪ್ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಕಲಿ ಸುದ್ದಿ ಮತ್ತು ದ್ವೇಷವನ್ನು ಹರಡಲು ಕೆಲಸ ಮಾಡುತ್ತವೆ ಎಂದು ಅವರು ಆರೋಪಿಸಿದ್ದರು. 

ರಾಹುಲ್ ಅವರ ಈ ಹೇಳಿಕೆಗೆ ತಿರುಗೇಟು ನೀಡಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕೇವಲ ಸೋತ ಜನರು ಮಾತ್ರ ಇಡೀ ವಿಶ್ವದ ಮೇಲೆ ಬಿಜೆಪಿ ಹಾಗೂ ಆರ್.ಎಸ್.ಎಸ್ ನಿಯಂತ್ರಣವಿದೆ ಎಂದು ಹೇಳುತ್ತಾರೆ ಎಂದಿದ್ದರು.

ಕೆಲ ದಿನಗಳ ಹಿಂದೆ ಫೇಸ್ ಬುಕ್ ಮೇಲೆ ಆರೋಪ ಮಾಡಿದ್ದ ಕಾಂಗ್ರೆಸ್ ಮುಖಂಡ, ಬಿಜೆಪಿಯ ಹೆಟ್ ಸ್ಪೀಚ್ ಒಳಗೊಂಡ ಪೋಸ್ಟ್ ಗಳ ಮೇಲೆ ಫೇಸ್ ಬುಕ್ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದಿದ್ದರು. ಬಳಿಕ ಫೇಸ್ ಬುಕ್ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸ್ಪಷ್ಟನೆಯನ್ನು ನೀಡಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ಫೇಸ್ಬುಕ್, ಕಂಪನಿ ತನ್ನ ಪಾಲಸಿಯ ಪ್ರಕಾರ ಯಾವುದೇ ಪಕ್ಷವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿತ್ತು.

Trending News