Good News:ತನ್ನ ಅಸಲಿ ದಮ್ ತೋರಿಸಿದ ಸ್ವದೇಶಿ ವ್ಯಾಕ್ಸಿನ್ Covaxin, ಕೊರೊನಾ ವಿರುದ್ಧ ಶೇ.77.8ರಷ್ಟು ಪ್ರಭಾವಶಾಲಿ ಎಂದು ಒಪ್ಪಿಕೊಂಡ The Lancet

Good News: ಭಾರತದ ಸ್ವದೇಶಿ ಲಸಿಕೆ 'ಕೋವಾಕ್ಸಿನ್' ಗೆ ಮತ್ತೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಮೊದಲು ಅನುಮೋದನೆ ಪಡೆದ ನಂತರ ಇದೀಗ 'ದಿ ಲ್ಯಾನ್ಸೆಟ್' (The Lancet) ಭಾರತ್ ಬಯೋಟೆಕ್‌ನ (Bharat Biotech) ಕೋವ್ಯಾಕ್ಸಿನ್ (Covaxin) ಅನ್ನು 'ಹೆಚ್ಚು ಪರಿಣಾಮಕಾರಿ' ಎಂದು ರೇಟ್ ಮಾಡಿದೆ. 

Written by - Nitin Tabib | Last Updated : Nov 12, 2021, 10:41 AM IST
  • ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆ ಲಸಿಕೆ ಪಟ್ಟಿ ಸೇರಿದ ಕೊವ್ಯಾಕ್ಸಿನ್ ಗೆ ಮತ್ತೊಂದು ಗುಡ್ ನ್ಯೂಸ್
  • ಕೊವ್ಯಾಕ್ಸಿನ್ ರೋಗಲಕ್ಷಣದ ಕರೋನಾ ರೋಗಿಗಳ ವಿರುದ್ಧ 77.8% ಪರಿಣಾಮಕಾರಿಯಾಗಿದೆ ಎಂದ ಲ್ಯಾನ್ಸೆಟ್ .
  • ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಜಂಟಿಯಾಗಿ ಕೋವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿವೆ ಎಂಬುದು ಇಲ್ಲಿ ಉಲ್ಲೇಖನೀಯ.
Good News:ತನ್ನ ಅಸಲಿ ದಮ್ ತೋರಿಸಿದ ಸ್ವದೇಶಿ ವ್ಯಾಕ್ಸಿನ್ Covaxin, ಕೊರೊನಾ ವಿರುದ್ಧ ಶೇ.77.8ರಷ್ಟು ಪ್ರಭಾವಶಾಲಿ ಎಂದು ಒಪ್ಪಿಕೊಂಡ The Lancet title=
Covid-19 Vaccine (File Photo)

Good News: ಭಾರತದ ಸ್ವದೇಶಿ ಲಸಿಕೆ 'ಕೋವಾಕ್ಸಿನ್' ಗೆ ಮತ್ತೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಮೊದಲು ಅನುಮೋದನೆ ಪಡೆದ ನಂತರ ಇದೀಗ 'ದಿ ಲ್ಯಾನ್ಸೆಟ್' (The Lancet) ಭಾರತ್ ಬಯೋಟೆಕ್‌ನ (Bharat Biotech) ಕೋವ್ಯಾಕ್ಸಿನ್ (Covaxin) ಅನ್ನು 'ಹೆಚ್ಚು ಪರಿಣಾಮಕಾರಿ' ಎಂದು ರೇಟ್ ಮಾಡಿದೆ. ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್-19  ಲಸಿಕೆ (Covid-19 Vaccine) 'ಹೆಚ್ಚು ಪರಿಣಾಮಕಾರಿ' ಮತ್ತು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಹೊಸ ಅಧ್ಯಯನವು ಗುರುವಾರ ಹೇಳಿದೆ. ಕೊವ್ಯಾಕ್ಸಿನ್‌ನ ಹಂತ III ಪ್ರಾಯೋಗಿಕ ಡೇಟಾವು ಯಾವುದೇ ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸುವುದಿಲ್ಲ ಎಂದು ವರದಿ ಹೇಳಿದೆ.

ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ರೋಗಲಕ್ಷಣದ ಕರೋನಾ ರೋಗಿಗಳ ವಿರುದ್ಧ 77.8% ಪರಿಣಾಮಕಾರಿಯಾಗಿದೆ ಎಂದು ಲ್ಯಾನ್ಸೆಟ್ ಹೇಳಿದೆ. ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಿದ ಎರಡು ವಾರಗಳ ನಂತರ ಲಸಿಕೆ ಪ್ರಬಲವಾದ ಪ್ರತಿಕಾಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಎಂದು ಲ್ಯಾನ್ಸೆಟ್ ತನ್ನ ವರದಿಯಲ್ಲಿ ತಿಳಿಸಿದೆ. ನವೆಂಬರ್ 2020 ಮತ್ತು ಮೇ 2021 ರ ನಡುವೆ ಭಾರತದಲ್ಲಿ 18-97 ವರ್ಷ ವಯಸ್ಸಿನ 24419 ವಾಲಂಟೀಯರ್ ಗಳನ್ನು ಒಳಗೊಂಡ ಕೋವಾಕ್ಸಿನ್ ಪ್ರಯೋಗದ ಸಮಯದಲ್ಲಿ ಯಾವುದೇ ಲಸಿಕೆ-ಸಂಬಂಧಿತ ಸಾವುಗಳು ಅಥವಾ ಯಾವುದೇ ಗಂಭೀರ ಪ್ರತಿಕೂಲ ಘಟನೆಗಳು ವರದಿಯಾಗಿಲ್ಲ ಎಂದು ವೈದ್ಯಕೀಯ ಜರ್ನಲ್ ಹೇಳಿದೆ.

ಇದನ್ನೂ ಓದಿ-Corona Vaccine: ಭಾರತ್ ಬಯೋಟೆಕ್‌ನ Covaxinಗೆ ಇನ್ನೂ 5 ದೇಶಗಳ ಮನ್ನಣೆ

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ನ ಹಂತ IIIರ ದತ್ತಾಂಶಗಳನ್ನು ಲ್ಯಾನ್ಸೆಟ್ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಭಾರತದ ಸ್ಥಳೀಯ ಲಸಿಕೆಯು ಕೋವಿಡ್ -19 ವಿರುದ್ಧ ಸುರಕ್ಷಿತ ಮತ್ತು ಪರಿಣಾಮಕಾರಿ ಮಾತ್ರವಲ್ಲ, ಇದು ಡೆಲ್ಟಾ ರೂಪಾಂತರದ ವಿರುದ್ಧ ಶೇಕಡಾ 65.2 ರಷ್ಟು ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ತೀವ್ರತರವಾದ ರೋಗಲಕ್ಷಣದ ಕೋವಿಡ್-19 ವಿರುದ್ಧ ಲಸಿಕೆ ಶೇ.93.4 ರಷ್ಟು ಪರಿಣಾಮಕಾರಿಯಾಗಿದೆ. ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಜಂಟಿಯಾಗಿ ಕೋವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಈಗ 2 ರಿಂದ 18 ವರ್ಷದ ಮಕ್ಕಳಿಗೂ ಭಾರತದಲ್ಲಿ ಕರೋನಾ ಲಸಿಕೆ, ಅನುಮೋದನೆ ನೀಡಿದ ಡಿಸಿಜಿಐ

ಇತ್ತೀಚೆಗಷ್ಟೇ ಕೊವ್ಯಾಕ್ಸಿನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಅನುಮೋದನೆ ಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ಅದರ ಬಳಕೆಯನ್ನು ಇದುವರೆಗೆ 17 ದೇಶಗಳು ಅನುಮೋದಿಸಿವೆ ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ ಇದೀಗ ಕೋವಾಕ್ಸಿನ್ ವಿಶ್ವ ಅರೋಗ್ಯ ಸಂಸ್ಥೆ ಅನುಮೋದಿತ  ಕೋವಿಡ್ ವಿರೋಧಿ ಲಸಿಕೆಗಳ ಪಟ್ಟಿಯಲ್ಲಿ ಫೈಜರ್ /ಬಯೋಎನ್‌ಟೆಕ್, ಮಾಡರ್ನಾ, ಅಸ್ಟ್ರಾಜೆನೆಕಾ, ಜಾನ್ಸನ್ ಮತ್ತು ಜಾನ್ಸನ್, ಸಿನೋಫಾರ್ಮ್ ಮತ್ತು ಸಿನೋವಾಕ್ ಗಳ ಜೊತೆಗೆ ಶಾಮೀಲಾಗಿದೆ.

ಇದನ್ನೂ ಓದಿ-'ಕೋವಾಕ್ಸಿನ್ ಲಸಿಕೆಯು ಮಕ್ಕಳಲ್ಲಿ ಬಹುತೇಕ ವಯಸ್ಕರಂತೆ ಒಂದೇ ರೀತಿ ಪರಿಣಾಮ ಬೀರಿದೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News