ಪ್ರಧಾನಿ ಮೋದಿ ಮುಂದೆ ರಾಹುಲ್ ಗಾಂಧಿ ಇರುವೆ ಇದ್ದಂತೆ: ಪ್ರಕಾಶ್ ಸಿಂಗ್ ಬಾದಲ್

ಮಹಾಘಟಬಂಧನ್ ಬಗ್ಗೆ ಮಾತನಾಡಿದ ಪ್ರಕಾಶ್ ಸಿಂಗ್ ಬಾದಲ್, ಈ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬಾದಲ್ ಅಭಿಪ್ರಾಯಪಟ್ಟಿದ್ದಾರೆ. 

Last Updated : Apr 26, 2019, 04:15 PM IST
ಪ್ರಧಾನಿ ಮೋದಿ ಮುಂದೆ ರಾಹುಲ್ ಗಾಂಧಿ ಇರುವೆ ಇದ್ದಂತೆ: ಪ್ರಕಾಶ್ ಸಿಂಗ್ ಬಾದಲ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ಇರುವೆ ಇದ್ದಂತೆ ಎಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ.

ಇಂದು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ವೇಳೆ ಸಾಥ್ ನೀಡಿದ ಎನ್ಡಿಎ ಮೈತ್ರಿ ಕೂಟದ ಪ್ರಕಾಶ್ ಸಿಂಗ್ ಬಾದಲ್, ಪ್ರಧಾನಿ ಮೋದಿಗೆ ಶುಭ ಹಾರೈಸಿದರು. ಬಳಿಕ ಮಾತನಾಡಿದ ಬಾದಲ್, "ಭಾರತದ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ಜನತೆ ಆಲೋಚಿಸಬೇಕಿದೆ. ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ರಾಹುಲ್, ಆನೆ ಮುಂದೆ ಇರುವೆ ಇದ್ದಂತೆ" ಎಂದಿದ್ದಾರೆ.

ಮಹಾಘಟಬಂಧನ್ ಬಗ್ಗೆ ಮಾತನಾಡಿದ ಪ್ರಕಾಶ್ ಸಿಂಗ್ ಬಾದಲ್, ಈ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

"ಶಿರೋಮಣಿ ಅಕಾಲಿ ದಳ ಪಕ್ಷ ಭಾರತದ ಬಹಳ ಪುರಾತನ ರಾಜಕೀಯ ಪಕ್ಷವಾಗಿದ್ದು, ಬಿಜೆಪಿ ಜೊತೆ ಆತ್ಮೀಯ ಸಂಬಂಧ ಹೊಂದಿದೆ.  ಇದು ಕೇವಲ ರಾಜಕೀಯ ಸಂಬಂಧವಲ್ಲ, ನಿಜವಾದ ಸಂಬಂಧ. ಬಿಜೆಪಿಗೆ ಮೊದಲು ಬೆಂಬಲ ನೀಡಿದ್ದೇ ನಮ್ಮ ಪಕ್ಷ. ಅಂದಿನಿಂದ ಇಂದಿನವರೆಗೂ ಬಿಜೆಪಿ ಜೊತೆ ನಿಂತಿದ್ದೇವೆ, ಬೆಂಬಲಿಸಿದ್ದೇವೆ" ಎಂದು ಪ್ರಕಾಶ್ ಸಿಂಗ್ ಬಾದಲ್ ಹೇಳಿದರು.

More Stories

Trending News