ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಪ್ರಕೋಪದ ಬಳಿಕ ಲಡಾಕ್ ನಲ್ಲಿ ಗಡಿ ವಿವಾದದ ಹಿನ್ನೆಲೆ ಚೀನಾ ವಿರುದ್ಧ ಭಾವನೆಗಳು ಇದೀಗ ಹೆಚ್ಚಾಗುತ್ತಿದೆ. ಜನರು ಭಾರತದಲ್ಲಿ ಚೀನಾ ಮೂಲದ ಅಪ್ಲಿಕೇಶನ್ ಹಾಗೂ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ಆರಂಭಿಸಿದ್ದಾರೆ. ಈ ನಡುವೆ ಭಾರತದಲ್ಲಿ ಚೀನಾ ಆಪ್ ಗಳನ್ನು ಮೊಬೈಲ್ ನಿಂದ ತೆಗೆದುಹಾಕಲು ಆಪ್ ವೊಂದನ್ನು ಬಿಡುಗಡೆಗೊಳಿಸಲಾಗಿದ್ದು, ಇದು ಇದೀಗ ಭಾರಿ ಜನಪ್ರೀಯತೆ ಪಡೆಯುತ್ತಿದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಈ ಅಪ್ಲಿಕೇಶನ್ ಹೆಸರು "Remove China Apps". ಮೇ 17 ರಂದು ಬಿಡುಗಡೆಯಾಗಿರುವ ಈ ಆಪ್ ನ ಯಾವ ರೀತಿ ಡೌನ್ ಲೋಡ್ ಆಗಿದೆ ಎಂದರೆ ಸದ್ಯ ಈ ಆಪ್ ಗೂಗಲ್ ಪ್ಲೇ ಸ್ಟೋರ್ ನ ಟಾಪ್ ಫ್ರೀ ಆಪ್ ಗಳ ಪಟ್ಟಿ ಸೇರಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆಪ್ 1 ಮಿಲಿಯನ್ ಅಂದರೆ 10 ಲಕ್ಷ ಬಳಕೆದಾರರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ.
Remove China Apps ಪ್ರಸ್ತುತ ಅಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. 3.5ಎಂಬಿ ಗಾತ್ರದ ಈ ಅಪ್ಲಿಕೇಶನ್ ಇಂಟರ್ಫೆಸ್ ತುಂಬಾ ಸುಲಭವಾಗಿದೆ. ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ಬಳಕೆದಾರರು ಒಮ್ಮೆ ಸ್ಕ್ಯಾನ್ ಬಟನ್ ಅನ್ನು ಕ್ಲಿಕ್ಕಿಸಬೇಕು. ನಂತರ ಈ ಆಪ್ ನಿಮ್ಮ ಮೊಬೈಲ್ ಅನ್ನು ಸ್ಕ್ಯಾನ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಯಾವ ಯಾವ ಚೈನೀಸ್ ಆಪ್ ಗಲಿವೆ ಎಂಬುದನ್ನು ನಿಮಗೆ ತಿಳಿಸಲಿದೆ. ಒಂದು ವೇಳೆ ಆ ಎಲ್ಲ ಆಪ್ ಗಳನ್ನು ಡಿಲೀಟ್ ಮಾಡಲು ನೀವು ಅನುಮತಿ ನೀಡಿದರೆ, ಅದು ನಿಮ್ಮ ಮೊಬೈಲ್ ನಿಂದ ಎಲ್ಲ ಚೈನೀಸ್ ಆಪ್ ಗಳನ್ನು ತೆಗೆದುಹಾಕಲಿದೆ.
Remove China Apps ಈ ಆಪ್ ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ನಲ್ಲಿ 4.8 ಬಳಕೆದಾರರ ರೇಟಿಂಗ್ ಪಡೆದಿದೆ. ಈ ಅಪ್ಲಿಕೇಶನ್ ಐಕಾನ್ ನಲ್ಲಿ ನೀವು ಡ್ರ್ಯಾಗನ್ ಕಾಣಬಹುದು. ಜೊತೆಗೆ ಡ್ರ್ಯಾಗನ್ ಹಿಂದಿನ ಭಾಗದಲ್ಲಿ ನಿಮಗೆ ಎರಡು ಪೊರಕೆಗಳಿಂದ ನಿರ್ಮಿಸಲಾಗಿರುವ ಕ್ರಾಸ್ ಇರಲಿದೆ. ಈ ಆಪ್ ಗೆ ಹೆಚ್ಚಿನ ಗೂಗಲ್ ಬಳಕೆದಾರರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.