ಹೊಸ ಬ್ಯಾಂಕ್‌ಗಳಿಗೆ ಪರವಾನಗಿ ನೀಡದಿರಲು ಆರ್‌ಬಿಐ ನಿರ್ಧಾರ!

ಜೂನ್ 6 ರಂದು ಆರ್‌ಬಿಐ ನೂತನ ಆರ್ಥಿಕ ನೀತಿ ಘೋಷಿಸಲಿದೆ. ಈ ವೇಳೆ ರೆಪೋ ದರವು 25 ಪಾಯಿಂಟ್ ಗಳಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.

Last Updated : Jun 4, 2019, 02:25 PM IST
ಹೊಸ ಬ್ಯಾಂಕ್‌ಗಳಿಗೆ ಪರವಾನಗಿ ನೀಡದಿರಲು ಆರ್‌ಬಿಐ ನಿರ್ಧಾರ! title=

ನವದೆಹಲಿ:  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ನೀತಿಯ ವಿಮರ್ಶೆ ನಡೆಯುತ್ತಿದೆ. ಸೋಮವಾರ ಆರಂಭವಾದ ಸಭೆಯು ಜೂನ್ 6 ರಂದು(ಗುರುವಾರ) ಕೊನೆಗೊಳ್ಳುತ್ತದೆ. ಉನ್ನತ ಬ್ಯಾಂಕ್ ಗುರುವಾರ ಬಡ್ಡಿದರಗಳ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ. ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಘೋಷಣೆಗೂ ಮುನ್ನ ಆರ್‌ಬಿಐ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೊಸ ಬ್ಯಾಂಕ್‌ಗಳಿಗೆ ಪರವಾನಗಿ ನೀಡದಿರಲು ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ.

ಉನ್ನತ ಬ್ಯಾಂಕಿನ ಮೂಲಗಳ ಮಾಹಿತಿಯ ಪ್ರಕಾರ, ರಿಸರ್ವ್ ಬ್ಯಾಂಕ್ನ ಹಣಕಾಸು ಮೇಲ್ವಿಚಾರಣೆಯ ಮಂಡಳಿಯಲ್ಲಿ ನೂತನ ಬ್ಯಾಂಕಿಂಗ್ ಪರವಾನಗಿ ನೀಡದಿರಲು ನಿರ್ಧರಿಸಿದ್ದು, ಮುಂದಿನ 2-3 ವರ್ಷಗಳಲ್ಲಿ ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡದಿರಲು ಆರ್‌ಬಿಐ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗಿದೆ.

ಬ್ಯಾಂಕಿನ ಟಾಪ್ ಮ್ಯಾನೇಜ್ಮೆಂಟ್ ನೂತನ ಬ್ಯಾಂಕ್‌ಗಳಿಗೆ ಪರವಾನಗಿ ನೀಡದಿರಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮುಂದಿನ 2-3 ವರ್ಷಗಳಲ್ಲಿ ಹೊಸ ಬ್ಯಾಂಕುಗಳಿಗೆ ಪರವಾನಗಿಗಳನ್ನು ನೀಡದಿರಲು ಒಪ್ಪಿಕೊಂಡಿವೆ ಎಂದು ಹೇಳಲಾಗುತ್ತಿದೆ. ಬ್ಯಾಂಕಿನ ಪ್ರಸಕ್ತ ಸ್ಥಿತಿಯನ್ನು ಪರಿಗಣಿಸಿ ಹಣಕಾಸು ಮೇಲ್ವಿಚಾರಣೆ ಮಂಡಳಿ ಈ ತೀರ್ಮಾನವನ್ನು ತೆಗೆದುಕೊಂಡಿದೆ. 

ಹೊಸ ಪರವಾನಗಿ ಪಡೆದ ಬ್ಯಾಂಕುಗಳ ಸ್ಥಿತಿಯನ್ನು ಗಮನಿಸಿದ ಬಳಿಕ ಆರ್‌ಬಿಐ ಈ ದಿಕ್ಕಿನಲ್ಲಿ ಯೋಚಿಸಬೇಕಾಯಿತು. ಕೇಂದ್ರೀಯ ಬ್ಯಾಂಕ್ ಅಲ್ಲದ ಬ್ಯಾಂಕಿಂಗ್ ಹಣಕಾಸು ನಿಗಮ (NBFC) ಮತ್ತು ಬ್ಯಾಂಕ್ ವಿಲೀನಕ್ಕಾಗಿ ಕೇಸ್-ಟು-ಕೇಸ್ ಆಧಾರದ ಮೇಲೆ ನಿರ್ಧರಿಸುತ್ತದೆ.

IDFC ಬ್ಯಾಂಕ್, ಬಾಂಡ್ ಬ್ಯಾಂಕ್ 2015 ರಲ್ಲಿ ಪೂರ್ಣ ಬ್ಯಾಂಕ್ ಪರವಾನಗಿ ಪಡೆದಿದೆ. IDFC ಬ್ಯಾಂಕ್ ಅಂತಿಮವಾಗಿ Capital First ಜೊತೆಗೆ ವಿಲೀನಗೊಂಡಿತು. 

Trending News