ಅಮರಾವತಿ:ಆಂಧ್ರಪ್ರದೇಶ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪೆಟ್ರೋಲ್ ದರ ಮತ್ತು ಡಾಲರ್ ವಿರುದ್ದ ರೂಪಾಯಿ ಸದ್ಯದಲ್ಲಿ ಶತಕ ಬಾರಿಸಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಪೆಟ್ರೋಲ್ ದಲ್ಲಿ ತೀವ್ರ ಹೆಚ್ಚಳವಾಗುತ್ತಿರುವುದಕ್ಕೆ ಎನ್ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದ ನಾಯ್ಡು ಇದಕ್ಕೆಲ್ಲ ಸರ್ಕಾರದ ನೀತಿಗಳೇ ಕಾರಣ ಎಂದು ತಿಳಿಸಿದರು.
"ಪೆಟ್ರೋಲ್ ಸದ್ಯದಲ್ಲಿ ನೂರು ರೂಪಾಯಿಯಾಗಲಿದೆ.ರೂಪಾಯಿ ಕೂಡ ಶತಕ ಗಳಿಸಲಿದೆ ಆಗ ನೀವು ಡಾಲರ್ ನೀಡುವುದರ ಮೂಲಕ ಪೆಟ್ರೋಲ್ ಖರೀದಿಸಬಹುದು" ಎಂದು ಚಂದ್ರಬಾಬು ನಾಯ್ಡು ವ್ಯಂಗವಾಡಿದರು.ಸೋಮವಾರದಂದು ಕಚ್ಚಾ ತೈಲದರ ಹೆಚ್ಚಳವಾಗಿದ್ದರಿಂದ ಡಾಲರ್ ವಿರುದ್ದ ರೂಪಾಯಿ ಮೌಲ್ಯ ಕುಸಿದಿತ್ತು ಈ ಹಿನ್ನಲೆಯಲ್ಲಿ ಪೆಟ್ರೋಲ್ ದರದ ಹೆಚ್ಚಳ ನಿರಂತರವಾಗಿ ಮುಂದುವರೆದಿದೆ.ಅದೇ ರೀತಿಯಾಗಿ ರೂಪಾಯಿಕೂಡ ಕುಸಿಯುತ್ತಿದೆ. ಸರ್ಕಾರದ ಅದಕ್ಷತೆಯಿಂದಾಗಿ ಈ ರೀತಿಯಾಗಿದೆ ಎಂದು ನಾಯ್ಡು ತಿಳಿಸಿದರು.
ಡಿಜಿಟಲ್ ಆರ್ಥಿಕತೆಗೆ ಒತ್ತು ನಿಡುವ ತಮ್ಮ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳದಿರುವುದಕ್ಕೆ ನಾಯ್ಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.