ನವದೆಹಲಿ: ರಷ್ಯಾ ದಾಳಿಯಿಂದ ನಲುಗುತ್ತಿರುವ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ(Operation Ganga) ನಡೆಯುತ್ತಿದೆ. ಭಾನುವಾರ(ಫೆ.27) ಬೆಳಗ್ಗೆ ಉಕ್ರೇನ್ನಲ್ಲಿ ಸಿಲುಕಿದ್ದ 250 ಭಾರತೀಯರನ್ನು ಹೊತ್ತ ಏರ್ ಇಂಡಿಯಾದ 2ನೇ ವಿಮಾನವು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ನಿಂದ ದೆಹಲಿ ತಲುಪಿತು ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.
#FlyAI: HMCA @JM_Scindia receiving the Indian nationals who were flown back to Delhi from Bucharest by AI 1942 on 27th Feb, '22 early morning, operated to evacuate Indians stranded at war-ravaged Ukraine. Thank you for guiding us on this mission @MoCA_GoI pic.twitter.com/y1DuYcjJTW
— Air India (@airindiain) February 26, 2022
ಉಕ್ರೇನ್ನಿಂದ ಏರ್ ಇಂಡಿಯಾ(Air India)ದ 2ನೇ ಸ್ಥಳಾಂತರಿಸುವ ವಿಮಾನ ಭಾನುವಾರ ದೆಹಲಿ ತಲುಪಿದೆ. ಇದರಲ್ಲಿ 250 ಮಂದಿ ಮನೆಗೆ ಮರಳಿದ್ದಾರೆ. ಈ ವಿಮಾನವು ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಇಂದು ಮತ್ತೊಂದು ವಿಮಾನ ದೆಹಲಿ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಗೊಂಡವರನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿದರು.
ಇದನ್ನೂ ಓದಿ: Ukraine Russia War: ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಶ್ಲಾಘಿಸಿದ ರಷ್ಯಾ
ಶನಿವಾರ ಭಾರತಕ್ಕೆ ಆಗಮಿಸಿದ್ದ ಮೊದಲ ವಿಮಾನ
#WATCH| Civil Aviation Minister Jyotiraditya Scindia interacting with Indian nationals who arrived at Delhi airport from Ukraine via Bucharest
"PM Modi is in touch with Ukrainian President, conservations are on to ensure that everyone is brought home safely," says Scindia pic.twitter.com/pfhH3kh4Z6
— ANI (@ANI) February 26, 2022
ರಷ್ಯಾ ಸೇನಾ ದಾಳಿ(Russia Ukraine War)ಯ ನಡುವೆ ಉಕ್ರೇನ್ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯವನ್ನು ಭಾರತ ಶನಿವಾರವಷ್ಟೇ ಆರಂಭಿಸಿತ್ತು. ಮೊದಲ ಪಾರುಗಾಣಿಕಾ ವಿಮಾನ AI1944 ಶನಿವಾರ ಸಂಜೆ ಬುಕಾರೆಸ್ಟ್ನಿಂದ 219 ಜನರನ್ನು ವಾಣಿಜ್ಯ ನಗರಿ ಮುಂಬೈಗೆ ಕರೆತಂದಿತು. ಸುಮಾರು 250 ಭಾರತೀಯರಿದ್ದ AI1942 ಎಂಬ 2ನೇ ನಿರ್ಗಮನ ವಿಮಾನವು ದೆಹಲಿ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಬಂದಿಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನಲ್ಲಿ 16 ಸಾವಿರ ಭಾರತೀಯರು
ಫೆ.24ರಂದು ಮಾತನಾಡಿದ್ದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ವಿದ್ಯಾರ್ಥಿಗಳು ಸೇರಿದಂತೆ ಸುಮಾರು 16 ಸಾವಿರ ಭಾರತೀಯರು ಉಕ್ರೇನ್(Ukraine)ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದರು.
ಉಕ್ರೇನ್ ಸಹಾಯಕ್ಕೆ 28 ದೇಶಗಳು
ಅಮೆರಿಕ, ಬ್ರಿಟನ್ ಸೇರಿದಂತೆ 28 ದೇಶಗಳು ಉಕ್ರೇನ್ಗೆ ಸಹಾಯ ಮಾಡಲು ಮುಂದೆ ಬಂದಿವೆ. ಉಕ್ರೇನ್ಗೆ 1000 anti-tank ಮತ್ತು 500 Stinger surface-to-air ಕ್ಷಿಪಣಿಗಳನ್ನು ಪೂರೈಸಲು ಜರ್ಮನಿ ನಿರ್ಧರಿಸಿದೆ.
ಖ್ಯಾತ ಉದ್ಯಮಿ ಎಲೋನ್ ಮಸ್ಕ್(Elon Musk) ಉಕ್ರೇನ್ಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಉಕ್ರೇನ್ನ ಮನವಿಯ ಮೇರೆಗೆ ಅವರು ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: Russia Ukraine War: ಎಲ್ಲಾ ದಿಕ್ಕುಗಳಿಂದಲೂ ಉಕ್ರೇನ್ ನ್ನು ಆಕ್ರಮಿಸಿದ ರಷ್ಯಾ ಸೈನ್ಯ...!
ಉಕ್ರೇನ್ ಮೇಲಿನ ರಷ್ಯಾ ದಾಳಿ ಪ್ರಕರಣ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಬಹುದೊಡ್ಡ ಹೇಳಿಕೆ ನೀಡಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ರಷ್ಯಾ ಏನನ್ನೂ ಮಾಡಲು ಸಾಧ್ಯವಾಗಲಿಲ್ಲವೆಂದು ಟ್ರಂಪ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಪ್ರಕಾರ, ಅವರು ಅಧ್ಯಕ್ಷರಾಗಿದ್ದಾಗ ಅಮೆರಿಕವು ತುಂಬಾ ಪ್ರಬಲವಾಗಿತ್ತು ಎಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸಭೆಯನ್ನು ಕರೆದಿದ್ದಾರೆ. ಫ್ರಾನ್ಸ್ನ ಉನ್ನತ ಅಧಿಕಾರಿಗಳು ಮತ್ತು ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಕ್ಷಣಾ ಮಂಡಳಿಯ ಈ ಸಭೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.