SBI ಗ್ರಾಹಕರಿಗೆ ಗುಡ್ ನ್ಯೂಸ್: ವಿವಿಧ ಸಾಲಗಳ ಬಡ್ಡಿ ದರದಲ್ಲಿ ಇಳಿಕೆ!

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೆಪ್ಟೆಂಬರ್ 4, 2019 ರಂದು ಹೊರಡಿಸಿದ ಅಧಿಸೂಚನೆಯ ಬಳಿಕ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ವಲಯದ ಕಂಪನಿಗಳಿಗೆ ಲಾಭವಾಗಲಿದೆ.

Last Updated : Sep 23, 2019, 04:02 PM IST
SBI ಗ್ರಾಹಕರಿಗೆ ಗುಡ್ ನ್ಯೂಸ್: ವಿವಿಧ ಸಾಲಗಳ ಬಡ್ಡಿ ದರದಲ್ಲಿ ಇಳಿಕೆ! title=

ನವದೆಹಲಿ: ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಮಹತ್ವದ ಘೋಷಣೆ ಮಾಡಿದ್ದು, ಗೃಹ, ಎಂಎಸ್ಎಂಇ ಮತ್ತು ರೀಟೇಲ್ ಸಾಲ ಸೇರಿದಂತೆ ಎಲ್ಲ ಸಾಲಗಳಿಗೆ ರೆಪೋ ದರವನ್ನು ಮಾನದಂಡವಾಗಿ ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ವಿವಿಧ ಸಾಲಗಳ ಮೇಲಿನ ಬಡ್ಡಿದರ ಕಡಿಮೆ ಆಗಲಿದ್ದು, ಅಕ್ಟೋಬರ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೆಪ್ಟೆಂಬರ್ 4, 2019 ರಂದು ಹೊರಡಿಸಿದ ಅಧಿಸೂಚನೆಯ ಬಳಿಕ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ವಲಯದ ಕಂಪನಿಗಳಿಗೆ ಲಾಭವಾಗಲಿದೆ.

ಈ ಹಿಂದೆ ಜುಲೈ 1, 201ರಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರ ಆಧಾರದ ಮೇಲೆ ಸಾಲದ ಬಡ್ಡಿ ದರ(ಫ್ಲೋಟಿಂಗ್ ರೇಟ್ ಗೃಹ ಸಾಲ) ನಿರ್ಧರಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೀರ್ಮಾನ ಕೈಗೊಂಡಿತ್ತು. 

ಅಕ್ಟೋಬರ್ 1 ರಿಂದ ಹೊಸ ಸೇವಾ ಶುಲ್ಕ!
2019 ರ ಅಕ್ಟೋಬರ್‌ 1 ರಿಂದ ಬ್ಯಾಂಕ್ ಸೇವೆಗೆ ಬದಲಾಗಿ ತನ್ನ ಗ್ರಾಹಕರಿಗೆ ಹೊಸ ಶುಲ್ಕ ವಿಧಿಸಲು ಸಿದ್ಧತೆ ನಡೆಸುತ್ತಿದೆ. ಒಂದು ವೇಳೆ ನೀವು ಮಹಾನಗರ ಅಥವಾ ಮಟ್ರೋಪಾಲಿಟನ್ ನಗರಗಳಲ್ಲಿನ ಎಸ್‌ಬಿಐನ ಯಾವುದೇ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರೆ, ಕನಿಷ್ಟ 5000 ರೂ. ಹಾಗೂ ಇತರ ಪ್ರದೇಶದ ಶಾಖೆಗಳಲ್ಲಿಕನಿಷ್ಠ 3000 ರೂ. ಬ್ಯಾಲೆನ್ಸ್ ಇಡಬೇಕಾಗಿತ್ತು. ಆದರೀಗ ಎಲ್ಲಾ ಶಾಖೆಗಳಲ್ಲಿ 3000 ರೂ. ಮಿನಿಮಮ್ ಬ್ಯಾಲೆನ್ಸ್ ನಿಗದಿ ಪಡಿಸಲಿದೆ. ಇದರಿಂದ ಮಹಾನಗರಗಳ ಗ್ರಾಹಕರಿಗೆ ಅನುಕೂಲವಾಗಲಿದೆ.  ಅಕ್ಟೋಬರ್ 1 ರಿಂದ ಈ ನಿಯಮವೂ ಜಾರಿಯಾಗಲಿದೆ. 

ಮೆಟ್ರೊದಲ್ಲಿನ ಯಾವುದೇ ಶಾಖೆಯಲ್ಲಿ ನೀವು ಎಸ್‌ಬಿಐನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಅಂದರೆ ಈ ಸಮಯದಲ್ಲಿ ನೀವು ಕನಿಷ್ಟ 5000 ರೂ. ಅಂತೆಯೇ, ನೀವು ಸಂಪೂರ್ಣವಾಗಿ ನಗರ ಪ್ರದೇಶದಲ್ಲಿ ಎಸ್‌ಬಿಐನ ಯಾವುದೇ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದರೆ, ನೀವು ಕನಿಷ್ಟ 3000 ರೂ. ಈಗ ಅಕ್ಟೋಬರ್ 1, 2019 ರಿಂದ ಎರಡೂ ಪ್ರದೇಶಗಳಿಗೆ 3000 ರೂಪಾಯಿ ಇರುತ್ತದೆ.

ಒಂದು ವೇಳೆ ಖಾತೆಯಲ್ಲಿ ನಿಗದಿಪಡಿಸಿದ ಹಣ ಇಡಲು ಗ್ರಾಹಕರಿ ವಿಫಲವಾದಲ್ಲಿ, ಅದಕ್ಕೆ ದಂಡ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. 

Trending News