ನವದೆಹಲಿ: ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಬಿಜೆಪಿ ಆಳ್ವಿಕೆಯಲ್ಲಿರುವ ಉತ್ತರ ಪ್ರದೇಶದ ಆಡಳಿತದ ಬಗ್ಗೆ ಚರ್ಚೆ ನಡೆಸಿದರು. ಅದರ ಗಾತ್ರ ಮತ್ತು ದೊಡ್ಡ ಜನಸಂಖ್ಯೆಯ ಕಾರಣ ರಾಜ್ಯದ ವಿಭಜನೆಯು ಅನಿವಾರ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು .
ಭಾರತದ ಜನಸಂಖ್ಯಾ ಭವಿಷ್ಯದ ಕುರಿತ ವಿಚಾರವಾಗಿ ಕೇರಳದ ತಿರುವನಂತಪುರದ ಆಡಳಿತಾತ್ಮಕ ಅಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಲ್ಪಟ್ಟ ಎರಡನೇ ವಿ ರಾಮಚಂದ್ರನ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ರಮೇಶ್, ಈಗಾಗಲಿ ಅಥವಾ ಅನಂತರವಾಗಲಿ ಉತ್ತರ ಪ್ರದೇಶದ ವಿಂಗಡಣೆ ಅತಿ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಇದು ಈ ಶತಮಾನದ ಮಧ್ಯಭಾಗಲ್ಲಿ 400 ಮಿಲಿಯನ್ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ಆದ್ದರಿಂದ ಇದು ಯಾವುದೇ ಪಕ್ಷ ಸಂಪೂರ್ಣ ಬಹುಮತ ಹೊಂದಿದರು ಕೂಡ ಇದರ ಆಡಳಿತ ನಿರ್ವಹಿಸಲು ಕಷ್ಟಕರವಾಗುತ್ತದೆ ಎಂದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅಧಿಕಾರಾವಧಿಯಲ್ಲಿ ಆಂಧ್ರಪ್ರದೇಶದ ವಿಭಜನೆ ಮತ್ತು ತೆಲಂಗಾಣ ರಚನೆಯಲ್ಲಿ ಜೈರಾಮ್ ರಮೇಶ್ ಅವರು ಪ್ರಮುಖ ಪಾತ್ರ ವಹಿಸಿದ್ದರು.