ಹೆದ್ದಾರಿ ದಾಟುತ್ತಿದೆ ದೈತ್ಯ ಅನಕೊಂಡ, ಉಸಿರು ಬಿಗಿ ಹಿಡಿದುಕೊಳ್ಳುವಂಥ ವಿಡಿಯೋ ಇಲ್ಲಿದೆ

ಸುಮಾರು 25 ಅಡಿ ಉದ್ದದ ದೈತ್ಯ ಹಾವು ಹೆದ್ದಾರಿಗೆ ಬಂದು ರಸ್ತೆ ದಾಟುತ್ತಿದೆ. ಇದರ ಮಧ್ಯೆ, ಹೆದ್ದಾರಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುವುದನ್ನು ಕೂಡಾ ಕಾಣಬಹುದು.

Written by - Ranjitha R K | Last Updated : Dec 9, 2021, 01:45 PM IST
  • ಹೆದ್ದಾರಿ ದಾಟುತ್ತಿದೆ ದೈತ್ಯ ಹಾವು
  • ಮೈ ಜುಮ್ಮೆನಿಸುವಂಥಹ ವಿಡಿಯೋ
  • ವೀಕ್ಷಕರಿಂದ ಸಿಗುತ್ತಿದೆ ಭಾರೀ ಪ್ರತಿಕ್ರಿಯೆ
ಹೆದ್ದಾರಿ ದಾಟುತ್ತಿದೆ ದೈತ್ಯ ಅನಕೊಂಡ, ಉಸಿರು ಬಿಗಿ ಹಿಡಿದುಕೊಳ್ಳುವಂಥ ವಿಡಿಯೋ ಇಲ್ಲಿದೆ title=
ಹೆದ್ದಾರಿ ದಾಟುತ್ತಿದೆ ದೈತ್ಯ ಹಾವು (phoro instagram)

ನವದೆಹಲಿ : ನೀವು ವಾಹನದಲ್ಲಿ ಕುಳಿತು ಆರಾಮವಾಗಿ, ಪ್ರಯಾಣಿಸುತ್ತಿರುವಾಗ ಎದುರಿಗೆ  ಸುಮಾರು 25 ಅಡಿ ಉದ್ದದ ದೈತ್ಯ ಹಾವು (Snake video) ಬಂದರೆ? ಕೈ ಕಾಲು ನಡುಗಿ ಹೋಗುತ್ತದೆ. ಎದೆ ಜೋರಾಗಿ ಹೊಡೆದುಕೊಳ್ಳುತ್ತದೆ. ಏನು ಮಾಡಬೇಕು ಎನ್ನುವುದು ಕೂಡಾ ತೋಚುವುದಿಲ್ಲ.  ಘಟನೆಯನ್ನು ನೆನೆಸಿದ ಮಾತ್ರಕ್ಕೆ ಭಯ ವರಿಸಿಕೊಳ್ಳುತ್ತದೆ. ಆದರೆ ಇಂಥಹ ಘಟನೆ ನಿಜವಾಗಿಯೂ ನಡೆದಿದೆ. ಹೌದು ಹೆದ್ದಾರಿಯಲ್ಲಿ ದೈತ್ಯ ಹಾವು ಹರಿದಾಡುವ ವಿಡಿಯೋವೊಂದು ವೈರಲ್ (Viral video) ಆಗುತ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ (Social media) ವಿವಿಧ ವೇದಿಕೆಗಳಲ್ಲಿ ಶೇರ್ ಮಾಡಲಾಗಿದೆ. ಹಾಗೆಯೇ ಈ ವಿಡಿಯೋಗೆ ಭಾರೀ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ.  

ಸುಮಾರು 25 ಅಡಿ ಉದ್ದದ ದೈತ್ಯ ಹಾವು (Snake video) ಹೆದ್ದಾರಿಗೆ ಬಂದು ರಸ್ತೆ ದಾಟುತ್ತಿದೆ. ಇದರ ಮಧ್ಯೆ, ಹೆದ್ದಾರಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುವುದನ್ನು ಕೂಡಾ ಕಾಣಬಹುದು. ಈ ಕೆಲ ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿದೆ. 

ಇದನ್ನೂ ಓದಿ : ಕೋಳಿಯನ್ನು ದುರ್ಬಲ ಎಂದುಕೊಂಡು ಜಗಳಕ್ಕೆ ನಿಂತ ಬೆಕ್ಕು, ಆದರೆ ಆಗಿದ್ದೇನು ? ಫೈಟಿಂಗ್ ನ full video ಇಲ್ಲಿದೆ

ಹೆದ್ದಾರಿಯಲ್ಲಿ ಹಾವು ಏಕಾಏಕಿ  ಬರುತ್ತಿರುವುದನ್ನು ಕಾಣಬಹುದು. ಈ ಹಾವನ್ನು ಕಂಡು, ವಾಹನ ಚಲಾಯಿಸುತ್ತಿದ್ದವರೂ ಗಾಬರಿಗೊಂಡು ಕಾರನ್ನು ಸುರಕ್ಷಿತ ದೂರದಲ್ಲಿ ನಿಲ್ಲಿಸುವುದನ್ನು ನೋಡಬಹುದು. ಇನ್ನು ಕೆಲವರು,  ಹಾವಿಗೆ ಏನೂ ತೊಂದರೆ ಆಗದಂತೆ, ಸುರಕ್ಷಿತವಾಗಿ ರಸ್ತೆ ದಾಟುವಂತೆ ಇತರ ವಾಹನಗಳನ್ನು ನಿಲ್ಲಿಸುತ್ತಾರೆ. ಇನ್ನು ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ (Mobile) ಸೆರೆಹಿಡಿಯುವುದನ್ನು ಕಾಣಬಹುದು.  ಇದೀಗ ಭಾರೀ ವೈರಲ್ (Viral video) ಆಗಿದೆ. 

 

ಸ್ನೇಕ್.ವೈಲ್ಡ್ ಎಂಬ ಹೆಸರಿನ ಪೇಜ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ (instagram) ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಯಾವಾಗ ಸೆರೆ ಹಿಡಿಯಲಾಗಿದೆ ಮತ್ತು ಇದು ಎಲ್ಲಿಯ video ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ : Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News