ಈ ರಾಜ್ಯಗಳಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಶಾಪಿಂಗ್ ಮಾಲ್‌ಗಳು ಇಂದಿನಿಂದ ತೆರೆಯುತ್ತಿಲ್ಲ! ಕಾರಣ...

ಈ ರಾಜ್ಯಗಳಲ್ಲಿ ಪ್ರಾರ್ಥನಾ ಸ್ಥಳಗಳು ಮತ್ತು ಹೋಟೆಲ್‌ಗಳನ್ನು ಜೂನ್ 30 ರವರೆಗೆ ಮುಚ್ಚಲಾಗುವುದು.

Last Updated : Jun 8, 2020, 08:30 AM IST
ಈ ರಾಜ್ಯಗಳಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಶಾಪಿಂಗ್ ಮಾಲ್‌ಗಳು ಇಂದಿನಿಂದ ತೆರೆಯುತ್ತಿಲ್ಲ! ಕಾರಣ... title=

ಕೊಹಿಮಾ: ಇಂದು ಜೂನ್ 8 ರಿಂದ ದೇಶಾದ್ಯಂತ ಧಾರ್ಮಿಕ ಸ್ಥಳಗಳು, ಹೋಟೆಲ್‌ಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ತೆರೆಯಲಾಗುವುದು. ಆದರೆ ಇತ್ತೀಚೆಗೆ ನಾಗಾಲ್ಯಾಂಡ್‌ನಲ್ಲಿ ಕೊರೊನಾವೈರಸ್ ಪ್ರಕರಣಗಳಲ್ಲಿ ಭರಾಟೆ ಕಂಡುಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು,  ಪ್ರಾರ್ಥನಾ ಸ್ಥಳಗಳು ಮತ್ತು ಹೋಟೆಲ್‌ಗಳನ್ನು ಜೂನ್ 30 ರವರೆಗೆ ಮುಚ್ಚಲು ನಾಗಾಲ್ಯಾಂಡ್ (Nagaland) ಸರ್ಕಾರ ನಿರ್ಧರಿಸಿದೆ. ಅದೇ ಸಮಯದಲ್ಲಿ ಕರೋನಾ ವೈರಸ್ ಸೋಂಕಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಒಡಿಶಾ (Odisha) ದ ಬಿಜೆಡಿ ಸರ್ಕಾರವೂ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಜೂನ್ 30 ರವರೆಗೆ ಒಡಿಶಾದಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಹೋಟೆಲ್‌ಗಳು ಮುಚ್ಚಲ್ಪಡುತ್ತವೆ.

Unlock 1: ಮಾಲ್‌ಗಳು, ಹೋಟೆಲ್‌ಗಳು ಮತ್ತು ಧಾರ್ಮಿಕ ಸ್ಥಳಗಳು ಇಂದಿನಿಂದ ಓಪನ್, ಇಲ್ಲಿವೆ ನಿಯಮಗಳು

ಇಂದಿನಿಂದ ಜೂನ್ 8 ರಿಂದ ಧಾರ್ಮಿಕ ಸ್ಥಳಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಹೊರಡಿಸಿದೆ. ಇದರ ಅಡಿಯಲ್ಲಿ ಇಂದಿನಿಂದ ದೇಶದ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕ ಜೀವನವು ಮತ್ತೆ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ. ಜನರು ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ ಮತ್ತು ವಿಹರಿಸಲು ಶಾಪಿಂಗ್ ಮಾಲ್‌ಗೆ ಹೋಗಬಹುದು.

ಮೇ 4 ರಂದು ಲಾಕ್‌ಡೌನ್ (Lockdown)  ಬಗ್ಗೆ ನಾಗಾಲ್ಯಾಂಡ್ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಮಾರ್ಗಸೂಚಿಗಳು ಮುಂದಿನ ಆದೇಶದವರೆಗೂ ಹಾಗೇ ಇರುತ್ತವೆ ಎಂದು ನಾಗಾಲ್ಯಾಂಡ್ ಪ್ರಧಾನ ಕಾರ್ಯದರ್ಶಿ (ಗೃಹ) ಅಭಿಜೀತ್ ಸಿನ್ಹಾ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ಮೇ 4 ರಂದು ಮುಖ್ಯ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆಯಲ್ಲಿ ಸಾರ್ವಜನಿಕರಿಗಾಗಿ ಎಲ್ಲಾ ಪ್ರಾರ್ಥನಾ ಸ್ಥಳಗಳು ಮುಚ್ಚಲ್ಪಡುತ್ತವೆ ಮತ್ತು ಧಾರ್ಮಿಕ ಸಮಾರಂಭಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು ಎಂದು ಹೇಳಲಾಗಿದೆ. 

ಭಕ್ತಾಧಿಗಳಿಗೆ ಇಂದಿನಿಂದ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ, ಇಲ್ಲಿದೆ ಟಿಟಿಡಿ ಮಾರ್ಗಸೂಚಿ

ಅಧಿಸೂಚನೆಯ ಪ್ರಕಾರ ಪೊಲೀಸರು, ಸರ್ಕಾರಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಜನರನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಆತಿಥ್ಯ ಸೇವೆಗಳನ್ನು ನಿಷೇಧಿಸಲಾಗುವುದು ಎಂದು ಹೇಳಲಾಗಿದೆ.

ಗಮನಾರ್ಹವಾಗಿ ಮೇ ಅಂತ್ಯದವರೆಗೆ ನಾಗಾಲ್ಯಾಂಡ್‌ನಲ್ಲಿ ಯಾವುದೇ ಕರೋನಾವೈರಸ್ (Coronavirus) ಪ್ರಕರಣಗಳು ಕಂಡುಬಂದಿಲ್ಲ, ಆದರೆ ನಾಗಾಲ್ಯಾಂಡ್ ನಿವಾಸಿಗಳು ದೇಶದ ಇತರ ಭಾಗಗಳಿಂದ ಹಿಂದಿರುಗಿದ ನಂತರ ಪ್ರಕರಣಗಳು ವೇಗವಾಗಿ ಹೆಚ್ಚಿವೆ. ಮೇ 25 ರವರೆಗೆ ರಾಜ್ಯದಲ್ಲಿ ಮೂರು ಪ್ರಕರಣಗಳಿದ್ದು, ಜೂನ್ 7 ರಂದು ಅವರ ಸಂಖ್ಯೆ 118 ಕ್ಕೆ ಏರಿದೆ. 110 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಎಂಟು ಮಂದಿ ಗುಣಮುಖರಾಗಿದ್ದಾರೆ.

Trending News