Terrorist Attack: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ನಾಯಕರ ಮನೆಯ ಮೇಲೆ ಉಗ್ರರ ದಾಳಿ, 5 ಜನರಿಗೆ ಗಾಯ; 1 ಮಗು ಮೃತ

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ಕ್ರಮದಿಂದ ಪಾಕಿಸ್ತಾನಕ್ಕೆ ತೊಂದರೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ವಿಧಿ 35 ಎ ಮತ್ತು 370 ಅನ್ನು ತೆಗೆದುಹಾಕಿದ ನಂತರ, ಪಾಕಿಸ್ತಾನವು ಕಣಿವೆಯಲ್ಲಿ ಶಾಂತಿ ಕದಡಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಈ ಭಯೋತ್ಪಾದಕ ದಾಳಿಗಳು ಅದಕ್ಕೆ ಕನ್ನಡಿ ಹಿಡಿದಂತಿದೆ.  

Written by - Zee Kannada News Desk | Last Updated : Aug 13, 2021, 08:20 AM IST
  • ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ
  • ರಾಜೌರಿಯಲ್ಲಿ ಬಿಜೆಪಿ ನಾಯಕನ ಮನೆ ಗುರಿಯಾಗಿಸಿ ಉಗ್ರರ ದಾಳಿ
  • ದಾಳಿಯಲ್ಲಿ 5 ಜನರು ಗಾಯಗೊಂಡಿದ್ದಾರೆ; 1 ಮಗು ಮೃತಪಟ್ಟಿದೆ
Terrorist Attack: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ನಾಯಕರ ಮನೆಯ ಮೇಲೆ ಉಗ್ರರ ದಾಳಿ, 5 ಜನರಿಗೆ ಗಾಯ; 1 ಮಗು ಮೃತ  title=
Terrorist attack on BJP leader's house in J&K

ರಾಜೌರಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋತ್ಪಾದಕ ದಾಳಿ ನಡೆದಿದೆ. ರಾಜೌರಿಯಲ್ಲಿರುವ ಬಿಜೆಪಿ ಮಂಡಲದ ಅಧ್ಯಕ್ಷರ ಮನೆಗೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದಾರೆ. ದಾಳಿಯಲ್ಲಿ 5 ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ರಾಜೌರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಒಂದು ಮಗು ಕೂಡ ಮೃತಪಟ್ಟಿರುವುದಾಗಿ ವರದಿಯಾಗಿದೆ. 

ಬಿಎಸ್‌ಎಫ್ ಬೆಂಗಾವಲನ್ನು ಹಗಲಿನಲ್ಲಿ ಗುರಿಯಾಗಿಸಲಾಯಿತು:
ಗುರುವಾರ (ಆ.12) ಭಯೋತ್ಪಾದಕರು (Terrorist) ಕುಲ್ಗಾಂನ ಕಾಜಿಗುಂಡ್ ಪ್ರದೇಶದ ಮೀರ್ ಬಜಾರ್‌ನಲ್ಲಿ ಬಿಎಸ್‌ಎಫ್‌ನ ಬೆಂಗಾವಲಿನ ಮೇಲೆ ದಾಳಿ ನಡೆಸಿದರು. ಆದರೆ, ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ವರದಿಯಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಲ್ಪೊರಾ ಪ್ರದೇಶದಲ್ಲೂ ಗುಂಡಿನ ಸದ್ದು ಕೇಳಿಬಂದಿದೆ.

ಇದನ್ನೂ ಓದಿ- Free Bus Service : ರಕ್ಷಾ ಬಂಧನ ದಿನ ಮಹಿಳೆಯರಿಗೆ ಭರ್ಜರಿ ಗಿಫ್ಟ್ : ಈ ರಾಜ್ಯಗಳಲ್ಲಿ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಿ!

ಎನ್‌ಕೌಂಟರ್‌ನಲ್ಲಿ ಸಿಆರ್‌ಪಿಎಫ್ ಜವಾನ ಸೇರಿದಂತೆ 3 ಮಂದಿ ಗಾಯಗೊಂಡಿದ್ದಾರೆ:
ಕುಲ್ಗಾಮ್ ಜಿಲ್ಲೆಯಲ್ಲಿ ಬಿಎಸ್‌ಎಫ್ ಬೆಂಗಾವಲಿನ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ (Security Force) ನಡುವೆ ನಡೆದ ಎನ್ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ದಾಳಿ ನಡೆದಾಗ ಬಿಎಸ್‌ಎಫ್ ಬೆಂಗಾವಲು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು. ಕುಲ್ಗಾಮ್ ಜಿಲ್ಲೆಯ ಕಾಜಿಗುಂಡ್ ಪ್ರದೇಶದ ಮಲ್ಪೊರಾದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಎಸ್‌ಎಫ್ ಬೆಂಗಾವಲಿನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು.

ಇದನ್ನೂ ಓದಿ- Independence day 2021 : ಆ.15 ರಂದು ಭಾರತದಲ್ಲಿ ಅಷ್ಟೇ ಅಲ್ಲದೆ ಈ 5 ದೇಶಗಳಲ್ಲಿ ಕೂಡ ಸ್ವಾತಂತ್ರ್ಯ ದಿನವನ್ನ ಆಚರಿಸಲಾಗುತ್ತದೆ!

ಸೇನೆಯು ಭಯೋತ್ಪಾದಕರನ್ನು ಸುತ್ತುವರಿದಿದೆ:
ಆರಂಭಿಕ ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ ಮತ್ತು ನಂತರ ಭಯೋತ್ಪಾದಕರನ್ನು ಸುತ್ತುವರಿಯಲಾಯಿತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಘಟನಾ ಪ್ರದೇಶದಿಂದ ನಾಗರಿಕರನ್ನು ಸ್ಥಳಾಂತರಿಸಿದ ನಂತರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಕಡೆಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್ ಜವಾನ ಗಾಯಗೊಂಡಿದ್ದಾನೆ ಎಂದು ಅವರು ಹೇಳಿದರು. ಅಧಿಕಾರಿಗಳ ಪ್ರಕಾರ, ಬುಲೆಟ್ ಗಾಯಗಳಿಂದ ಗಾಯಗೊಂಡ ಇಬ್ಬರು ನಾಗರಿಕರನ್ನು ಅನಂತನಾಗ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News