ನವದೆಹಲಿ: ಇಂದಿನಿಂದ ರಾಹುಲ್ ಯುಗಾರಂಭಕ್ಕೆ ಭಾರತೀಯ ಕಾಂಗ್ರೆಸ್ ಪಕ್ಷ ಸಾಕ್ಷಿಯಾಗಲಿದೆ. ಹೌದು ಕಳೆದ 19 ವರ್ಷಗಳಿಂದ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶ್ರೀಮತಿ ಸೋನಿಯಾ ಗಾಂಧೀ ಇಂದು ರಾಹುಲ್ ಗಾಂಧೀ ಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
1998 ರಲ್ಲಿ ಸೋನಿಯಾರವರು ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡಾಗ ಕಾಂಗ್ರೆಸ್ ಪಕ್ಷವು ನಾಯಕತ್ವದ ಕೊರತೆಯಿಂದ ಬಳಲುತಿತ್ತು. ಅಂತಹ ಸಂದರ್ಭದಲ್ಲಿ ಏಕಮೇವ ವ್ಯಕ್ತಿಯಾಗಿ ಪಕ್ಷವನ್ನು ಕಟ್ಟಿದ್ದಲ್ಲದೆ ಯುಪಿಎ ನೇತೃತ್ವದಲ್ಲಿ 10 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಆಡಲಿತದಲ್ಲಿರುವಂತೆ ಮಾಡಿದ್ದರು. ಆದರೆ ಕಳೆದ 2014 ರಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತುಹೋಗಿತ್ತು. ಒಂದು ಕಡೆ ಅನಾರೋಗ್ಯ ಇನ್ನೊಂದು ಕಡೆ ಪಕ್ಷವು ಕ್ಷಿಣಿಸುತ್ತಿರುವುದು ಬಹುತೇಕ ಪಕ್ಷದ ಕಾರ್ಯಕರ್ತರನ್ನು ಹತಾಶಗೊಳಿಸಿತ್ತು.
ಆದರೆ ಈಗ ಈ ಎಲ್ಲ ಆತಂಕಗಳಿಗೆ ತೆರೆ ಎಳೆಯುವ ಸಮಯ ಬಂದಿದೆ. ಕಾರಣ ರಾಹುಲ್ ಗಾಂಧೀ ಈಗ ಪಕ್ಷದ ಚುಕ್ಕಾಣೆ ಹಿಡಿಯುತ್ತಿದ್ದಾರೆ. ವಿಶೇಷ ಸಂಗತಿ ಏನೆಂದರೆ ಈ ಹಿಂದಿಗಿಂತ ತಮ್ಮ ಕಾರ್ಯಶೈಲಿ ಮತ್ತು ನಾಯಕತ್ವದದಲ್ಲಿ ಅಗಾದವಾದ ಬದಲಾವಣೆಯನ್ನು ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿನ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರನ್ನು ದಂಗು ಬಡಿಸುವಂತೆ ಮಾಡಿತ್ತು. ಆದ್ದರಿಂದಲೇ ಪ್ರಧಾನ ಮಂತ್ರಿಗಳು ಗುಜರಾತನಲ್ಲೇ ಸುಮಾರು 30 ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಿದ್ದು ನಿಜಕ್ಕೂ ರಾಹುಲ್ ಗಾಂಧಿಯವರ ಬದಲಾಗಿರುವ ಚಹರೆಯನ್ನು ತೋರಿಸುತ್ತದೆ.
ಇಂತಹ ಸಂಧರ್ಭದಲ್ಲಿ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕಾರ ಸೋನಿಯಾ ಗಾಂಧೀ ರಾಹುಲ್ ಗೆ ಅಧಿಕಾರ ಹಸ್ತಾಂತರ ಮಾಡುತ್ತಾ ಮಾತನಾಡಿದ ಅವರು ರಾಹುಲ್ ಗಾಂಧೀ ನನ್ನ ಮಗ ಆದರೆ ಈ ಸಂಧರ್ಭದಲ್ಲಿ ಅವನನ್ನು ಕುರಿತು ಹೊಗಳುವುದು ಸರಿಯಲ್ಲ, ಆದರೆ ಒಂದಂತು ನಿಜ ಇಂತಹ ಅಪಾಯಕಾರಿ ಸಂದರ್ಭದಲ್ಲಿ ಅವನು ಈ ಎಲ್ಲ ಸವಾಲುಗಳ ಜೊತೆ ಎತ್ತೆಚ್ಚುಕೊಂಡಿರುವುದುಕ್ಕೆ ಮೆಚ್ಚುಗೆ ಸೂಚಿಸಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಕಾಂಗ್ರೆಸ್ ಪಕ್ಷವು ಭಾರತವನ್ನು 21 ನೇ ಶತಮಾನಕ್ಕೆ ಕೊಂಡೊಯ್ದ್ದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಮಧ್ಯಕಾಲಕ್ಕೆ ಕೊಂಡ್ಯೋತ್ತಿದ್ದಾರೆ ಎಂದು ಈ ಸಂಧರ್ಭದಲ್ಲಿ ಟೀಕಿಸಿದರು.