ಮುಂಬೈನಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ನಟಿಯರು..!

 ಕಿರುತೆರೆಯಲ್ಲಿ ಕೆಲಸ ಮಾಡಿದ ಇಬ್ಬರು ನಟಿಯರನ್ನು ಶುಕ್ರವಾರ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. 

Last Updated : Jun 18, 2021, 03:36 PM IST
  • ಕಿರುತೆರೆಯಲ್ಲಿ ಕೆಲಸ ಮಾಡಿದ ಇಬ್ಬರು ನಟಿಯರನ್ನು ಶುಕ್ರವಾರ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
  • ಪೊಲೀಸರ ಪ್ರಕಾರ, ಕೆಲಸದ ಕೊರತೆಯಿಂದಾಗಿ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ಇಬ್ಬರೂ ನಟಿಯರು ಕೆಲವು ದಿನಗಳ ಹಿಂದೆ ಆರೆ ಕಾಲೋನಿಯ ರಾಯಲ್ ಪಾಮ್ ಪ್ರದೇಶದಲ್ಲಿರುವ ಕಟ್ಟಡವೊಂದಕ್ಕೆ ಸ್ಥಳಾಂತರಗೊಂಡಿದ್ದರು.
ಮುಂಬೈನಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ನಟಿಯರು..!  title=
Photo Courtesy: ANI

ಮುಂಬೈ:  ಕಿರುತೆರೆಯಲ್ಲಿ ಕೆಲಸ ಮಾಡಿದ ಇಬ್ಬರು ನಟಿಯರನ್ನು ಶುಕ್ರವಾರ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ದೇಶಾದ್ಯಂತ ಕನ್ನಡ ಭಾಷಾ ದಿನವನ್ನು ಯಾವಾಗ ಆಚರಿಸುತ್ತೀರಿ ಮೋದಿಯವರೇ ?- ಕುಮಾರಸ್ವಾಮಿ

ಪೊಲೀಸರ ಪ್ರಕಾರ, ಕೆಲಸದ ಕೊರತೆಯಿಂದಾಗಿ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ಇಬ್ಬರೂ ನಟಿಯರು ಕೆಲವು ದಿನಗಳ ಹಿಂದೆ ಆರೆ ಕಾಲೋನಿಯ ರಾಯಲ್ ಪಾಮ್ ಪ್ರದೇಶದಲ್ಲಿರುವ ಕಟ್ಟಡವೊಂದಕ್ಕೆ ಸ್ಥಳಾಂತರಗೊಂಡಿದ್ದರು.

ಮೇ 18 ರಂದು, ಈ ಇಬ್ಬರು ನಟಿರು ಅದೇ ಪಿಜಿಯಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದ ಮಹಿಳೆಯ ಲಾಕರ್‌ನಿಂದ 3,28,000 ರೂಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಆರೆ ಕಾಲೋನಿಯಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಅಲ್ಲಿ ಉಳಿದುಕೊಂಡಿದ್ದ ಮಹಿಳೆಯು  ಆರೆ ಪೊಲೀಸರಿಗೆ ಟಿವಿ ನಟಿಯರಾದ ಸುರಭಿ ಸುರೇಂದ್ರ ಲಾಲ್ ಶ್ರೀವಾಸ್ತವ (25) ಮತ್ತು ಮೋಸಿನಾ ಮುಖ್ತಾರ್ ಶೇಖ್ (19) ತನ್ನ ಹಣವನ್ನು ಕದ್ದಿದ್ದಾರೆ ಎಂದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: ಹಿಂದಿ ಎಲ್ಲಾ ಭಾರತೀಯರ ಮಾತೃಭಾಷೆ ಅಲ್ಲ: ಒವೈಸಿ

ತನಿಖೆಯ ವೇಳೆ, ನಟಿಯರಿಬ್ಬರೂ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಟ್ಟಡದಿಂದ ಹೊರಗೆ ಹೋಗುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿಯರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತೋರಿಸಿದಾಗ ಅದರಲ್ಲಿ ಹಣದ ಕಟ್ಟು ಹೊತ್ತುಕೊಂಡು ಹೋಗುವುದನ್ನು ಸ್ಪಷ್ಟವಾಗಿ ಕಾಣಬಹುದು, ಅವರು  ಈಗ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಆರೆ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ನೂತನ್ ಪವರ್ "ಜನಪ್ರಿಯ ಟಿವಿ ಕಾರ್ಯಕ್ರಮಗಳಾದ ಕ್ರೈಮ್ ಪೆಟ್ರೋಲ್ ಮತ್ತು ಸವ್ಧಾನ್ ಇಂಡಿಯಾದ ಹೊರತಾಗಿ, ನಟಿಯರು ಅನೇಕ ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!

ಪೊಲೀಸರು ಅವರಿಂದ 50,000 ರೂ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಜೂನ್ 23 ರವರೆಗೆ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News