ಯುವಕನ ಹತ್ಯೆಗೈದ ಇಬ್ಬರು ಆರೋಪಿಗಳನ್ನು ಬಂಧಿಸಿ, ಮೆರವಣಿಗೆ ಮಾಡಿದ ಇಂಧೋರ್ ಪೋಲಿಸ್

ಜುಲೈ 22 ರ ರಾತ್ರಿ ಅರ್ಪಿತ್ ಎಂಬ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ ರಾಜ ಕಚೋರಿ ಮತ್ತು ಆಶಿಶ್ ಶರ್ಮಾ ಎಂಬ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

Updated: Jul 24, 2019 , 01:42 PM IST
ಯುವಕನ ಹತ್ಯೆಗೈದ ಇಬ್ಬರು ಆರೋಪಿಗಳನ್ನು ಬಂಧಿಸಿ, ಮೆರವಣಿಗೆ ಮಾಡಿದ ಇಂಧೋರ್ ಪೋಲಿಸ್
Pic Courtesy: ANI

ಇಂದೋರ್: 20 ವರ್ಷದ ಯುವನೋರ್ವನನ್ನು ಬರ್ಬರವಾಗಿ ಇರಿದು ಹತ್ಯೆಗೈದ ಆರೋಪದ ಮೇಲೆ ಇಬ್ಬರನು ಬಂಧಿಸಿರುವ ಇಂಧೋರ್ ಪೊಲೀಸರು ರಸ್ತೆಗಳಲ್ಲಿ ಆರೋಪಿಗಳ ಮೆರವಣಿಗೆ ಮಾಡಿಸಿದ ಘಟನೆ ನಡೆದಿದೆ.

ಜುಲೈ 22 ರ ರಾತ್ರಿ ಅರ್ಪಿತ್ ಎಂಬ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ ರಾಜ ಕಚೋರಿ ಮತ್ತು ಆಶಿಶ್ ಶರ್ಮಾ ಎಂಬ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

"ಇಂದೋರ್‌ನ ನಂದಾ ನಗರದಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೆಲವು ಗಂಟೆಗಳ ನಂತರ ಸಂತ್ರಸ್ತೆ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307, 323, 294, 506 ಮತ್ತು 302ರ ಅಡಿಯಲ್ಲಿ ಪರದೇಸಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಇಂದೋರ್ ಎಸ್‌ಎಸ್‌ಪಿ ರುಚಿ ವರ್ಧನ್ ಮಿಶ್ರಾ ಮಾಹಿತಿ ನೀಡಿದ್ದಾರೆ.