ಅಗರ್ತಲಾ / ಸಿಲ್ಚಾರ್: ಕ್ಯಾನ್ಸರ್ ಪೀಡಿತ ತಾಯಿಯನ್ನು ನೋಡಲು ಆಸ್ಪತ್ರೆಗೆ ತೆರಳಿದ್ದ ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರು ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ತ್ರಿಪುರದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ 6 ಜನರನ್ನು ಅಸ್ಸಾಂ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ಇಬ್ಬರು ಸಹೋದರಿಯರು ಶನಿವಾರ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿಂದ ಹಿಂದಿರುಗುವಾಗ ಕಾರಿನ ಚಾಲಕ ತನ್ನ ಸಹಚರರೊಂದಿಗೆ ಸೇರಿ ಇಬ್ಬರೂ ಬಾಲಿಕಿಯರ ಮೇಲೆ ಅತ್ಯಾಚಾರ (Rape) ಎಸಗಿರುವ ಅಮಾನವೀಯ ಘಟನೆ ನಡೆದಿದೆ.
ದಲಿತ ಮಹಿಳೆಯನ್ನು ಮದುವೆಯಾಗಿದ್ದ ಗುರಗಾಂವ್ ಯುವಕನ ಹತ್ಯೆ
ಯುವತಿಯರು ಮೊದಲು ಟ್ರಕ್ ಚಾಲಕನ ಸಹಾಯದಿಂದ ಸುರಕ್ಷಿತ ಸ್ಥಳವನ್ನು ತಲುಪಿ ನಂತರ ಕರೀಮ್‌ಗಂಜ್ ಜಿಲ್ಲೆಯ ಪಠಾರ್ಖಂಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಇಬ್ಬರು ತ್ರಿಪುರ ಮತ್ತು ಉಳಿದವರು ಅಸ್ಸಾಂನ ಕರೀಮ್‌ಗಂಜ್ ಮೂಲದವರು ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ದಕ್ಷಿಣ ಅಸ್ಸಾಂ (Assam) ಪಕ್ಕದ ಉತ್ತರ ತ್ರಿಪುರ ಪ್ರದೇಶಕ್ಕೆ ಕಾರ್ ಡ್ರೈವರ್ ಇಬ್ಬರು ಬಾಲಕಿಯರನ್ನು ಕರೆದೊಯ್ದಿದ್ದಾನೆ. ನಂತರ ವಾಹನದ ಚಾಲಕ ಮತ್ತು ಅವನ ಐದು ಸಹಚರರು ನೀಲಂಬಜಾರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಕರೀಮ್‌ಗಂಜ್ ಪೊಲೀಸ್ ಮುಖ್ಯಸ್ಥ ಮಾಯಾಂಕ್ ಕುಮಾರ್ ತಿಳಿಸಿದ್ದಾರೆ.
ಒಡಿಶಾದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಇಬ್ಬರಿಂದ ಸಾಮೂಹಿಕ ಅತ್ಯಾಚಾರ
ಈ ಆರೋಪಿಗಳನ್ನು ಹಿಡಿಯಲು ಪೊಲೀಸ್ ಮುಖ್ಯಸ್ಥ ಮಾಯಾಂಕ್ ಕುಮಾರ್ ಅವರೇ ಅಭಿಯಾನ ನಡೆಸಿದರು ಎಂಬುದು ಉಲ್ಲೇಖನೀಯ.