ಉತ್ತರ ಪ್ರದೇಶ: 2019 ರ ಚುನಾವಣೆಗೆ ಸೀಟು ಹಂಚಿಕೊಂಡ ಕಾಂಗ್ರೆಸ್, ಬಿಎಸ್ಪಿ,ಎಸ್ಪಿ

    

Last Updated : Jun 13, 2018, 08:27 PM IST
 ಉತ್ತರ ಪ್ರದೇಶ: 2019 ರ ಚುನಾವಣೆಗೆ ಸೀಟು ಹಂಚಿಕೊಂಡ ಕಾಂಗ್ರೆಸ್, ಬಿಎಸ್ಪಿ,ಎಸ್ಪಿ title=

ನವದೆಹಲಿ: ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳು 2019 ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿದೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಪ್ರತಿ 30 ಸ್ಥಾನಗಳಲ್ಲಿ ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎನ್ನಲಾಗಿದೆ. 

ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ, ಉಳಿದ 10 ಸೀಟು ಗಳನ್ನು ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಮತ್ತು ಇತರ ಸಣ್ಣ ಪಕ್ಷಗಳ ಮಧ್ಯ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

 ಇತ್ತೀಚಿಗೆ ಬಿಎಸ್ಪಿ, ಎಸ್ಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಆರ್ಎಲ್ಡಿ ಅಭ್ಯರ್ಥಿ ತಬಾಸ್ಸಮ್ ಹಸನ್ ಅವರು ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮರಿಗಂಕಾ ಸಿಂಗ್ ಅವರನ್ನು ಸೋಲಿಸಿದರು. ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈಗ ಹೊಸ ಸೂತ್ರದ ಮೂಲಕ ಬಿಜೆಪಿಯನ್ನು ಚುನಾವಣೆಯಲ್ಲಿ ಎದುರಿಸಲು ಸಜ್ಜಾಗಿವೆ ಎಂದು ತಿಳಿದುಬಂದಿದೆ. ಇದೇ ಮಾರ್ಚ್ ತಿಂಗಳಲ್ಲಿ,ಗೋರಖ್ಪುರ್ ಮತ್ತು ಫುಲ್ಪುರ್  ಉಪ ಚುನಾವಣೆಯಲ್ಲಿಯೂ  ಇದೇ ಮಾದರಿಯ ಮೈತ್ರಿಕೂಟದ ಮೂಲಕ ಬಿಜೆಪಿಯನ್ನು ಸೋಲಿಸಿದ್ದವು.

Trending News