Viral Video: ಗೋವಾದಲ್ಲಿ ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ನೃತ್ಯ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ 43 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ ಕೆಂಪು ಸೀರೆಯನ್ನು ಉಟ್ಟಿರುವ ಕಾಂಗ್ರೆಸ್ ನಾಯಕಿ ಬುಡಕಟ್ಟು ಮಹಿಳೆಯರೊಂದಿಗೆ ಹೆಜ್ಜೆ ಹಾಕುವುದನ್ನು ಕಾಣಬಹುದಾಗಿದೆ.

Written by - Zee Kannada News Desk | Last Updated : Dec 11, 2021, 07:03 AM IST
  • ಕೆಂಪು ಸೀರೆ ಉಟ್ಟು ಬುಡಕಟ್ಟು ಮಹಿಳೆಯರೊಂದಿಗೆ ನೃತ್ಯ ಮಾಡಿದ ಪ್ರಿಯಾಂಕಾ ಗಾಂಧಿ
  • ಬುಡಕಟ್ಟು ನೃತ್ಯ ಮಾಡಿದ ಕಾಂಗ್ರೆಸ್ ನಾಯಕಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ಪ್ರಿಯಾಂಕಾ ಗಾಂಧಿ ವಾದ್ರಾರ ಬುಡಕಟ್ಟು ನೃತ್ಯವನ್ನು ಟೀಕಿಸಿದ ನೆಟಿಜನ್ ಗಳು
Viral Video: ಗೋವಾದಲ್ಲಿ ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ನೃತ್ಯ title=
ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ನೃತ್ಯ

ಪಣಜಿ: ಕೆಲಸ ಮಾಡುವಾಗಲೂ ಮೋಜು-ಮಸ್ತಿ ಮಾಡಬಹುದು ಎಂಬುದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಸಾಬೀತುಪಡಿಸಿದ್ದಾರೆ. ಕೆಲಸವೂ ಇರಬೇಕು ಜೊತೆ ಜೊತೆಗೆ ಖುಷಿಯೂ ಇರಬೇಕೆಂದು ಅವರು ಬುಡಕಟ್ಟು ಮಹಿಳೆಯರಿಗೆ ತೋರಿಸಿಕೊಟ್ಟಿದ್ದಾರೆ. ಹೌದು, ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಗೋವಾಕ್ಕೆ ಬಂದಿದ್ದ ಪ್ರಿಯಾಂಕಾ ಅವರು, ಮತದಾನದ ನಿಮಿತ್ತ ರಾಜ್ಯದ ಮೊರ್ಪಿರ್ಲಾದಲ್ಲಿ ಬುಡಕಟ್ಟು ಮಹಿಳೆಯರೊಂದಿಗೆ ಹೆಜ್ಜೆ ಹಾಕುವ ಮೂಲಕ ಜಾನಪದ ನೃತ್ಯ ಪ್ರದರ್ಶಿಸಿದರು.

ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿರುವ 43 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ ಕೆಂಪು ಸೀರೆಯನ್ನು ಉಟ್ಟಿರುವ ಕಾಂಗ್ರೆಸ್ ನಾಯಕಿ ಬುಡಕಟ್ಟು ಮಹಿಳೆಯರೊಂದಿಗೆ ಹೆಜ್ಜೆ(Folk Dance) ಹಾಕುವುದನ್ನು ಕಾಣಬಹುದಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪ್ರಿಯಾಂಕಾರ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 

ಇದನ್ನೂ ಓದಿ: ಘಾಜಿಯಾಬಾದ್ ಮಾದಕ ದ್ರವ್ಯ ದಂಧೆ: 3 ಡ್ರಗ್ ದಂಧೆಕೋರರ ಬಂಧನ, 100 ಕೆಜಿ ಗಾಂಜಾ ವಶ

ಕರಾವಳಿ ರಾಜ್ಯಕ್ಕೆ ತಮ್ಮ ಪ್ರವಾಸದ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಬುಡಕಟ್ಟು ಮಹಿಳೆಯರೊಂದಿಗೆ ಸಂವಾದ ನಡೆಸಿದರು. ‘ಮೊರ್ಪಿರ್ಲಾದ ಬಲವಾದ ಮತ್ತು ಆತ್ಮವಿಶ್ವಾಸದ ಮಹಿಳೆಯರೊಂದಿಗೆ ವಿಶೇಷ ಕ್ಷಣಗಳನ್ನು ಕಳೆದಿರುವುದು ನನಗೆ ಖುಷಿ ನೀಡಿದೆ. ಈ ಮಹಿಳೆಯರು ಗೋವಾದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು. ಭಾರತದಲ್ಲಿನ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಕಾಂಗ್ರೆಸ್ ಪಕ್ಷವು 1 ಲಕ್ಷ ರೂ.ಗಳನ್ನು ನೀಡುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಪ್ರಿಯಾಂಕಾ ಗಾಂಧಿ(Priyanka Gandhi ) ವಾದ್ರಾ ಅವರು ರಾಜ್ಯದಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ(Goa Election 2022)ವನ್ನು ಪ್ರಾರಂಭಿಸಲು ಗೋವಾಕ್ಕೆ ಬಂದಿದ್ದರು. ನಂತರದ ದಿನದಲ್ಲಿ ಅವರು ಅಕ್ವೆಮ್‌ನಲ್ಲಿ ನಡೆದ ಮಹಿಳಾ ಸಮಾವೇಶ ‘ಪ್ರಿಯದರ್ಶಿನಿ’ಯನ್ನು ಉದ್ದೇಶಿಸಿ ಮಾತನಾಡಿದರು. ಗೋವಾದಲ್ಲಿ ಮಹಿಳಾ ಮತದಾರರನ್ನು ಓಲೈಸುವ ಮತ್ತು ಪಕ್ಷದ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವ ಗುರಿಯೊಂದಿಗೆ ತಮ್ಮ ಪಕ್ಷಕ್ಕೆ ಮತ ಹಾಕಿದರೆ ಮಹಿಳೆಯರಿಗೆ ಉದ್ಯೋಗಗಳಲ್ಲಿ ಶೇ.30ರಷ್ಟು ಮೀಸಲಾತಿಯ ಭರವಸೆ ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದಾಗಿ ಅವರು ಇದೇ ವೇಳೆ ತಿಳಿಸಿದರು. 2022ರ ಆರಂಭದಲ್ಲಿ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಮುಂಬೈನಲ್ಲಿ ಬೃಹತ್ ಕೂಟಗಳ ಮೇಲೆ ಎರಡು ದಿನಗಳ ನಿಷೇಧ ಹೇರಿಕೆ

ಟೀಕೆಗೆ ಗುರಿಯಾದ ಪ್ರಿಯಾಂಕಾ ನೃತ್ಯ!

ತಮಿಳುನಾಡಿನ ಕೂನೂರು ಬಳಿ ಬುಧವಾರ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆ ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನೆರವೇರಿತು. ಅತ್ತ ದೆಹಲಿಯಲ್ಲಿ ಬಿಪಿನ್ ರಾವತ್ ಅಂತ್ಯಕ್ರಿಯೆ ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬುಡಕಟ್ಟು ಮಹಿಳೆಯರೊಂದಿಗೆ ನೃತ್ಯ ಮಾಡಿ ಸಂಭ್ರಮ ಪಟ್ಟಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಇದು ಬೇಕಿತ್ತಾ ಅಂತಾ ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ಗಳು ಪ್ರಿಯಾಂಕಾರನ್ನು ಪ್ರಶ್ನಿಸಿ ಟ್ರೋಲ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News