Viral Video: ಆನೆ ಮರಿ ಬೇಟೆಯಾಡಿದ ಸಿಂಹಕ್ಕೆ ತಕ್ಕ ಶಾಸ್ತಿ ಮಾಡಿತ್ತು ಎಮ್ಮೆ: ಕಾಡಿನ ರಾಜನ ಸ್ಥಿತಿ ಏನಾಯ್ತು? ವಿಡಿಯೋ ನೋಡಿ

Viral Video: ಈ ವೀಡಿಯೊ ಕಾಡಿನ ರಾಜ ಸಿಂಹ ಮತ್ತು ಎಮ್ಮೆಗಳ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ. ಸಿಂಹಗಳ ಹಿಂಡು ಒಟ್ಟಾಗಿ ಆನೆಯನ್ನು ಸುತ್ತುವರೆದು ಬೇಟೆಯಾಡಲು ಪ್ರಾರಂಭಿಸುತ್ತವೆ. ಆಗ ಒಂದು ಎಮ್ಮೆ ಅಲ್ಲಿಗೆ ಬಂದು ಇಡೀ ಚಿತ್ರಣವನ್ನೇ ತಿರುಗಿಸುತ್ತದೆ.

Written by - Bhavishya Shetty | Last Updated : Feb 28, 2023, 09:06 PM IST
    • ಕಾಡಿನ ರಾಜ ಸಿಂಹ ಮತ್ತು ಎಮ್ಮೆಗಳ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ.
    • ಸಿಂಹಗಳ ಹಿಂಡು ಒಟ್ಟಾಗಿ ಆನೆಯನ್ನು ಸುತ್ತುವರೆದು ಬೇಟೆಯಾಡಲು ಪ್ರಾರಂಭಿಸುತ್ತವೆ.
    • ಆಗ ಒಂದು ಎಮ್ಮೆ ಅಲ್ಲಿಗೆ ಬಂದು ಇಡೀ ಚಿತ್ರಣವನ್ನೇ ತಿರುಗಿಸುತ್ತದೆ.
Viral Video: ಆನೆ ಮರಿ ಬೇಟೆಯಾಡಿದ ಸಿಂಹಕ್ಕೆ ತಕ್ಕ ಶಾಸ್ತಿ ಮಾಡಿತ್ತು ಎಮ್ಮೆ: ಕಾಡಿನ ರಾಜನ ಸ್ಥಿತಿ ಏನಾಯ್ತು? ವಿಡಿಯೋ ನೋಡಿ  title=
lion buffalo viral video

Viral Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ವಿಡಿಯೋಗಳು ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತದೆ. ಕೆಲವೊಂದು ವಿಡಿಯೋಗಳು ಜೀವನದ ಪಾಠ ಕಲಿಸಿದರೆ, ಮತ್ತೂ ಕೆಲವು ಎಂದಿಗೂ ಇಂತಹ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿಸುತ್ತದೆ. ಇಂದೂ ಕೂಡ ನಾವು ಹೇಳಹೊರಟಿರೋದು ಅಂತಹದ್ದೇ ಒಂದು ವಿಡಿಯೋದ ವಿಶ್ಲೇಷಣೆ.

ಇದನ್ನೂ ಓದಿ: Viral Video: ಪುಟ್ಟ ಪೋರನ ಬೆನ್ನಮೇಲೆ ಮೊಸಳೆ… ಹೊತ್ತುಕೊಂಡು ಸಾಗುತ್ತಿದ್ದಂತೆ ಆಗಿದ್ದೇನು…? ಈ ವಿಡಿಯೋ ನೋಡಿ!

ವೀಡಿಯೊ ಕಾಡಿನ ರಾಜ ಸಿಂಹ ಮತ್ತು ಎಮ್ಮೆಗಳ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ. ಸಿಂಹಗಳ ಹಿಂಡು ಒಟ್ಟಾಗಿ ಆನೆಯನ್ನು ಸುತ್ತುವರೆದು ಬೇಟೆಯಾಡಲು ಪ್ರಾರಂಭಿಸುತ್ತವೆ. ಆಗ ಒಂದು ಎಮ್ಮೆ ಅಲ್ಲಿಗೆ ಬಂದು ಇಡೀ ಚಿತ್ರಣವನ್ನೇ ತಿರುಗಿಸುತ್ತದೆ.

ಸಿಂಹಗಳ ಹಿಂಡು ಮರಿ ಆನೆಯನ್ನು ತನ್ನ ಚೂಪಾದ ಉಗುರುಗಳಿಂದ ಹಿಡಿದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಮತ್ತೊಂದು ಸಿಂಹ ತನ್ನ ಚೂಪಾದ ಹಲ್ಲುಗಳಿಂದ ಕುತ್ತಿಗೆಯನ್ನು ಕಚ್ಚಿ ಹಿಡಿದಿದೆ. ಇನ್ನು ಸ್ವಲ್ಪ ಸಮಯದಲ್ಲೇ ಆ ಮರಿ ಆನೆಯ ಪ್ರಾಣ ಹೋಗಲಿದೆ ಎಂದು ಕಾಣುತ್ತದೆ. ಆದರೆ ಅದೆಲ್ಲಿತ್ತೋ ಏನೋ,,, ಎಮ್ಮೆ ಅಲ್ಲಿಗೆ ಬಂದು ಬೇಟೆಯಾಡುವ ಸಿಂಹಗಳನ್ನು ಎಚ್ಚರಿಕೆಯಿಂದ ವೀಕ್ಷಿಸಲು ಪ್ರಾರಂಭಿಸುತ್ತದೆ. ಆ ಬಳಿಕ ಎಮ್ಮೆಗೆ ಇತರ 3-4 ಎಮ್ಮೆಗಳು ಸಾಥ್ ಕೊಡುತ್ತವೆ. ಇದರ ನಂತರ ಎಮ್ಮೆಗಳು ಒಂದಾಗಿ ಸಿಂಹಗಳ ಕಡೆಗೆ ದಾಳಿ ನಡೆಸಲು ಮುಂದಾಗುತ್ತವೆ.

ಎಮ್ಮೆಗಳು ದೈಹಿಕವಾಗಿ ಶಕ್ತಿಶಾಲಿ ಪ್ರಾಣಿಗಳು. ಆದ್ದರಿಂದ ಸಿಂಹಗಳಿಗೆ ಅದರ ಭಾರವನ್ನು ತಡೆಯಲು ಸಾಧ್ಯವಾಗುವುದಿಲ್ಲ.  ಆದ್ದರಿಂದಲೇ ಸಿಂಹಗಳ ಹಿಂಡು ಈ ರೀತಿ ತಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ಹೆದರಿ ಆನೆಯನ್ನು ಬಿಟ್ಟು ದೂರ ಸರಿಯುತ್ತವೆ. ಸ್ವಲ್ಪ ದೂರ ಹೋದರೂ ಎಮ್ಮೆಗಳ ಹಿಂಡು ಅವುಗಳಿಗೆ ಹೆದರದೆ ಒಗ್ಗಟ್ಟಾಗಿ ಹಿಂಬಾಲಿಸುತ್ತದೆ. ಎಮ್ಮೆಗಳ ಈ ಆಕ್ರಮಣಕಾರಿ ವರ್ತನೆಗೆ ಹೆದರಿ ಸಿಂಹಗಳ ಹಿಂಡು ಅಲ್ಲಿಂದ ಓಡಿಹೋಗುತ್ತವೆ. ಇದಾದ ನಂತರ ಮರಿ ಆನೆ ತತ್ತರಿಸಿಕೊಂಡು ಅಲ್ಲಿಂದ ಹೊರಡುತ್ತದೆ.

ವಿಡಿಯೋ ನೋಡಿ:

 

ಈ ವೀಡಿಯೊವನ್ನು YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದುವರೆಗೆ ಹಲವಾರು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವೀಡಿಯೋ ನೋಡಿದ ಜನರು ಆಶ್ಚರ್ಯಚಕಿತರಾಗಿದ್ದು, ತಮ್ಮದೇ ಆದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: ‘ನಾಟು ನಾಟು’ ಹಾಡಿಗೆ ನಾಚುತ್ತಾ ಕುಣಿದ ಕೊರಿಯಾ ರಾಯಭಾರಿ: ಡ್ಯಾನ್ಸ್ ಕಂಡು ಮೋದಿ ಏನಂದ್ರು ಗೊತ್ತಾ?

“ನಾನು ನನ್ನ ಜೀವನದಲ್ಲಿ ಅನೇಕ ವೀಡಿಯೊಗಳನ್ನು ನೋಡಿದ್ದೇನೆ. ಅದರಲ್ಲಿ ಸಿಂಹಗಳು ತಮ್ಮ ಬೇಟೆಯನ್ನು ಅಟ್ಟಿಸಿಕೊಂಡು ಹೋಗುವುದನ್ನು ನೋಡಿದೆ. ಆದರೆ ಇದು ಮೊದಲ ವೀಡಿಯೊವಾಗಿದೆ. ಇದರಲ್ಲಿ ಎಮ್ಮೆಗಳು ಸಿಂಹಗಳನ್ನು ಓಡಿಸುತ್ತಿವೆ” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರನು “ಒಗ್ಗಟ್ಟಿನಲ್ಲಿ ಶಕ್ತಿ ಇದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News