Actor Darshan: ಮಡಿಕೇರಿಯಲ್ಲಿ ಡಿ-ಬಾಸ್ ಕ್ರಿಕೆಟ್ ಆಟ: ಮೋಜಿನ ಕ್ಷಣಗಳ ವಿಡಿಯೋ ಶೇರ್ ಮಾಡಿದ ದಾಸ

Actor Darshan Cricket: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಕೆಸಿಸಿ ಸ್ಥಗಿತಗೊಂಡಿತ್ತು. ಈ ಬಾರಿ ಕಿಚ್ಚ ಸುದೀಪ್ ಪಂದ್ಯಾವಳಿ ಇದೆ ಎಂದು ಘೋಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ಕನ್ನಡ ಇಂಡಸ್ಟ್ರಿಯ ಎಲ್ಲರನ್ನೂ ಈ ಪಂದ್ಯಾವಳಿಯ ಭಾಗವಾಗಲು ಆಹ್ವಾನಿಸುತ್ತೀರಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, “ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೇ, ಬೇಡವೇ ಎಂಬುದು ಅವರವರ ಇಚ್ಛೆಗೆ ಬಿಟ್ಟಿದ್ದು” ಎಂದು ಹೇಳಿದ್ದರು.

Written by - Bhavishya Shetty | Last Updated : Feb 28, 2023, 08:22 PM IST
    • ಮಡಿಕೇರಿಯಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿರುವ ವಿಡಿಯೋ
    • ದಾಸ ಮೋಜಿನ ಕ್ಷಣಗಳನ್ನು ಕಳೆಯುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿತ್ತು.
    • ಫೆಬ್ರವರಿ 25 ರಂದು ಶೇರ್ ಆದ ವಿಡಿಯೋವನ್ನು ದಚ್ಚು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ
Actor Darshan: ಮಡಿಕೇರಿಯಲ್ಲಿ ಡಿ-ಬಾಸ್ ಕ್ರಿಕೆಟ್ ಆಟ: ಮೋಜಿನ ಕ್ಷಣಗಳ ವಿಡಿಯೋ ಶೇರ್ ಮಾಡಿದ ದಾಸ title=
Actor Darshan

Actor Darshan Cricket: ಕಿಚ್ಚ ಸುದೀಪ್ ಅವರ ಎರಡು ದಿನಗಳ ಟೂರ್ನಮೆಂಟ್, ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಇತ್ತೀಚೆಗೆಯಷ್ಟೇ ಕೊನೆಗೊಂಡಿದೆ. ಆದರೆ ಈ ಟೂರ್ನಿಯಲ್ಲಿ ನಟ ಯಶ್ ಹಾಗೂ ದರ್ಶನ್ ಭಾಗಿಯಾಗಿರಲಿಲ್ಲ. ಇದಕ್ಕೆ ಸುದೀಪ್ ಜೊತೆಗೆ ಹೊಂದಾಣಿಕೆ ಇಲ್ಲದಿರರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇವೆಲ್ಲದರ ಮಧ್ಯೆ ದಾಸ ತನ್ನ ಅಭಿಮಾನಿಗಳಿಗಾಗಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: Dhruva Sarja: "ಮಾರ್ಟಿನ್" ಗಾಗಿ ಧ್ರುವ ಮಾಡಿದ ಸಾಹಸದ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!!

ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಕೆಸಿಸಿ ಸ್ಥಗಿತಗೊಂಡಿತ್ತು. ಈ ಬಾರಿ ಕಿಚ್ಚ ಸುದೀಪ್ ಪಂದ್ಯಾವಳಿ ಇದೆ ಎಂದು ಘೋಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ಕನ್ನಡ ಇಂಡಸ್ಟ್ರಿಯ ಎಲ್ಲರನ್ನೂ ಈ ಪಂದ್ಯಾವಳಿಯ ಭಾಗವಾಗಲು ಆಹ್ವಾನಿಸುತ್ತೀರಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, “ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೇ, ಬೇಡವೇ ಎಂಬುದು ಅವರವರ ಇಚ್ಛೆಗೆ ಬಿಟ್ಟಿದ್ದು” ಎಂದು ಹೇಳಿದ್ದರು.

ಈ ಟೂರ್ನಿಯನ್ನು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಗೌರವಾರ್ಥವಾಗಿ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಪ್ರತಿಯೊಂದು ತಂಡಗಳ ಜೆರ್ಸಿಯಲ್ಲಿ ಅಪ್ಪು ಅವರ ಫೋಟೋವನ್ನು ಮುದ್ರಿಸಲಾಗಿತ್ತು.

ಇದನ್ನೂ ಓದಿ: Ram Charan: ತಮ್ಮ  ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿಗಳಿಗೆ ತೆರೆ ಎಳೆದ  ರಾಮ್ ಚರಣ್ ಪತ್ನಿ

ಒಂದೆಡೆ ಕೆಸಿಸಿ ಪಂದ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ದರ್ಶನ್ ಮಡಿಕೇರಿಯಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದು ಸದ್ದು ಮಾಡತೊಡಗಿತು. ದಾಸ ಮೋಜಿನ ಕ್ಷಣಗಳನ್ನು ಕಳೆಯುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿತ್ತು. ಫೆಬ್ರವರಿ 25 ರಂದು ಶೇರ್ ಆದ ವಿಡಿಯೋವನ್ನು ದಚ್ಚು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News