SBI ಗ್ರಾಹಕರೇ ಎಚ್ಚರ! ಜನವರಿ 1, 2019 ರಿಂದ ಈ ಕಾರ್ಡ್ ಕೆಲಸ ಮಾಡುವುದಿಲ್ಲ

ಜನವರಿ 1, 2019 ರಿಂದ ಕೇವಲ ಇಎಂವಿ ಚಿಪ್ ಕಾರ್ಡುಗಳು ಮಾತ್ರ ಕಾರ್ಯನಿರ್ವಹಿಸುತ್ತವೆ.

Last Updated : Dec 18, 2018, 08:06 AM IST
SBI ಗ್ರಾಹಕರೇ ಎಚ್ಚರ! ಜನವರಿ 1, 2019 ರಿಂದ ಈ ಕಾರ್ಡ್ ಕೆಲಸ ಮಾಡುವುದಿಲ್ಲ title=

ನವದೆಹಲಿ: ಸಾರ್ವಜನಿಕ ವಲಯದಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಗ್ರಾಹಕರು  ಹಳೆಯ ಮ್ಯಾಜಿಸ್ಟ್ರೇಟ್ (ಮ್ಯಾಗ್ನೆಟಿಕ್) ಕಾರ್ಡನ್ನು ಇನ್ನೂ ಬಳಸುತ್ತಿದ್ದರೆ ಡಿಸೆಂಬರ್ 31, 2018 ಕ್ಕೆ ಮೊದಲು ಅದನ್ನು ಬದಲಿಸಿ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. ಏಕೆಂದರೆ, ಜನವರಿ 1, 2019 ರಿಂದ ಹಳೆಯ ಡೆಬಿಟ್ ಕಾರ್ಡುಗಳಿಂದ ಯಾವುದೇ ವಹಿವಾಟನ್ನು ಮಾಡಲಾಗುವುದಿಲ್ಲ. ಬದಲಾಗಿ, ಬ್ಯಾಂಕ್ ಹೊಸ ಚಿಪ್ ಇಎಂವಿ ಕಾರ್ಡ್​ನ್ನು  ನೀಡುತ್ತಿದೆ.

ಹೊಸ ಇಎಂವಿ ಚಿಪ್ ಕಾರ್ಡುಗಳನ್ನೂ ಪಡೆಯಲು ಇನ್ನೂ ಎರಡು ವಾರಗಳ ಅವಕಾಶವಿದೆ. ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ ಚಿಪ್ ಆಧಾರಿತ ಮತ್ತು ಪಿನ್ ಹೊಂದಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ನೀಡುವಂತೆ ಬ್ಯಾಂಕ್ ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. 

ಹೊಸ ಕಾರ್ಡ್ ಪಡೆಯಲು ಹೀಗೆ ಮಾಡಿ: 
ಡಿಸೆಂಬರ್ 31, 2018 ರೊಳಗಾಗಿ ಇಎಂವಿ ಚಿಪ್ ಕಾರ್ಡ್ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಹೊಸ ಡೆಬಿಟ್ ಕಾರ್ಡ್ ಪಡೆಯಲು ಎಸ್ಬಿಐನ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವೇ ಬ್ಯಾಂಕಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 2017 ರಿಂದ ಬ್ಯಾಂಕ್ ಕೆಲವು ಹಳೆಯ ಕಾರ್ಡ್ ಅನ್ನು ಸ್ಥಗಿತಗೊಳಿಸಿದೆ. ಡಿಸೆಂಬರ್ 31, 2018 ರಿಂದ ಹಳೆಯ ಕಾರ್ಡ್ ಗಳು ಸಂಪೂರ್ಣವಾಗಿ ಬಂದ್ ಆಗಲಿವೆ.

ಇವಿಎಂ ಚಿಪ್ ಆಧಾರಿತ ಕಾರ್ಡುಗಳು ನಕಲಿ ಕಾರ್ಡುಗಳ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುತ್ತದೆ. ವಂಚನೆ, ಕಾರ್ಡು ಕಳೆದುಹೋಗುವುದು ಹಾಗೂ  ವಂಚನೆಯಾಗುವುದನ್ನು ಇಎಂವಿ ಚಿಪ್ ಆಧಾರಿತ ಕಾರ್ಡುಗಳು ರಕ್ಷಿಸಿ ಪಿನ್ ಸಂಖ್ಯೆಯನ್ನು ರಕ್ಷಿಸುತ್ತದೆ.

ಹೊಸ ಕಾರ್ಡ್​ಗಳನ್ನು ಪಡೆಯಲು ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ. ಬದಲಾಗಿ ಹಳೆಯ ಕಾರ್ಡ್​​ನ್ನು ನೀಡಿ ಹೊಸ ಇಎಂವಿ ಚಿಪ್ ಇರುವ ಡೆಬಿಟ್​ ಕಾರ್ಡ್​ನ್ನು ಪಡೆಯಬಹುದಾಗಿದೆ. ಗ್ರಾಹಕನು ಇಂಟರ್​ನೆಟ್​ ಬ್ಯಾಂಕಿಂಗ್ ಮೂಲಕ ಕಾರ್ಡ್​ ಬದಲಿಸಲು ಇಚ್ಛಿಸಿದರೆ ಅದಕ್ಕೂ ಅವಕಾಶ ನೀಡಲಾಗಿದೆ. SBIನ ಅಧಿಕೃತ ವೆಬ್​ಸೈಟ್​ನಲ್ಲಿ ಲಾಗಿನ್ ಆಗಿ ಇ-ಸರ್ವೀಸ್​ ಟ್ಯಾಬ್​ನ್ನು ಕ್ಲಿಕ್​ ಮಾಡಬೇಕಾಗುತ್ತದೆ. ಇಲ್ಲಿ ನೀಡಲಾಗಿರುವ ಮಾರ್ಗಸೂಚಿಗಳ ಅನುಸಾರ ಎಟಿಎಂ ಕಾರ್ಡ್​ನ್ನು ಬದಲಾಯಿಸಿಕೊಳ್ಳಬಹುದು.
 

Trending News