ಭಾರತೀಯ ಅರ್ಥವ್ಯವಸ್ಥೆಯ ಕುರಿತು IMF ಹೇಳಿದ್ದೇನು?

ಭಾರತೀಯ ಅರ್ಥವ್ಯವಸ್ಥೆ ಸದ್ಯ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದು, ಇದನ್ನು ಸುಧಾರಿಸಲು ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ವ್ಯಾಪಕ ಬದಲಾವಣೆ ತರುವ ಅಗತ್ಯತೆ ಇದೆ.   

Written by - Nitin Tabib | Last Updated : Dec 24, 2019, 01:33 PM IST
ಭಾರತೀಯ ಅರ್ಥವ್ಯವಸ್ಥೆಯ ಕುರಿತು IMF ಹೇಳಿದ್ದೇನು? title=

ವಾಷಿಂಗ್ಟನ್:ಭಾರತೀಯ ಅರ್ಥವ್ಯವಸ್ಥೆ ಸದ್ಯ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದು, ಇದನ್ನು ಸುಧಾರಿಸಲು ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ವ್ಯಾಪಕ ಬದಲಾವಣೆ ತರುವ ಅಗತ್ಯತೆ ಇದೆ. ಈ ಕುರಿತು ಸೋಮವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಅರ್ಥವ್ಯವಸ್ಥೆಯಲ್ಲಿ  ಭಾರಿ ವಿಸ್ತರಣೆಯಾಗಿದ್ದು, ಇದು ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದೆ. ಆದರೆ, 2019ರ ಮೊದಲ ಆರು ತಿಂಗಳಲ್ಲಿ ವಿಭಿನ್ನ ಕಾರಣಗಳಿಂದ ಭಾರತೀಯ ಅರ್ಥವ್ಯವಸ್ಥೆ ಸುಸ್ತು ಹೊಡೆದಿದೆ ಎಂದು ವರದಿ ಹೇಳಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ IMFನ ಏಷ್ಯಾ-ಪೆಸಿಫಿಕ್ ವಿಭಾಗದ ಭಾರತೀಯ ಮುಖ್ಯಸ್ಥ ರಾನೀಲ್ ಸಲಗಾದೋ, "ಭಾರತೀಯ ಅರ್ಥವ್ಯವಸ್ಥೆಯಲ್ಲಿನ ಸುಸ್ತಿ ನಮ್ಮ ಮುಖ್ಯ ವಿಚಾರವಾಗಿದ್ದು, ಈ ಸುಸ್ತಿ ರಚನಾತ್ಮಕವಾಗಿರದೇ, ಆವರ್ತಕವಾಗಿದೆ. ಆರ್ಥಿಕ ಕ್ಷೇತ್ರಗಳಲ್ಲಿನ ಸಂಕಟಗಳು ಇದಕ್ಕೆ ಕಾರಣ. ನಾವು ಮೊದಲು ಅಂದುಕೊಂಡಷ್ಟು ಇದರಲ್ಲಿ ಸುಧಾರಣೆಯಾಗಿಲ್ಲ ಎಂಬುದು ಪ್ರಮುಖ ವಿಷಯ" ಎಂದಿದ್ದಾರೆ. ಇದೇ ವೇಳೆ IMF ಭಾರತದ ಕುರಿತು ತನ್ನ ವಾರ್ಷಿಕ ವರದಿಯನ್ನೂ ಸಹ ಬಿಡುಗಡೆಗೊಳಿಸಿದೆ.

ಭಾರತದ ದೃಷ್ಟಿಯಿಂದ ಈ ಪರಿದೃಶ್ಯ ಕೆಳಕ್ಕೆ ಜಾರುತ್ತಿದ್ದು, ಘನ ಮತ್ತು ಸ್ಥೂಲ ಆರ್ಥಿಕ ನಿರ್ವಹಣೆಗೆ IMF ನಿರ್ದೇಶಕರು ಒತ್ತುನೀಡಿದ್ದಾರೆ. ಬಲವಾದ ಜನಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಭಾರತ ಸರ್ಕಾರಕ್ಕೆ ಸುಧಾರಣೆಗಳನ್ನು ಮುಂದುವರೆಸಲು ಇದು ಉತ್ತಮ ಅವಕಾಶ ಎಂಬುದಾಗಿನಿರ್ದೇಶಕರು ಭಾವಿಸಿದ್ದಾರೆ ಎಂದು ವರದಿ ಹೇಳಿದೆ. ಅಷ್ಟೇ ಅಲ್ಲ ಇದು ಆಂತರಿಕ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿರುವ ಸಲಗಾದೋ ಭಾರತ ಸದ್ಯ ಗಂಭೀರ ಸುಸ್ತಿಯನ್ನು ಎದುರಿಸುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ(GDP) ವೃದ್ಧಿಯ ದರ 4.5ಕ್ಕೆ ಕುಸಿದಿದ್ದು, ಇದು ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕೆಳಮಟ್ಟದ ದರವಾಗಿದೆ. ಆರ್ಥಿಕ ವೃದ್ಧಿಯ ಅಂಕಿ-ಅಂಶಗಳ ಪ್ರಕಾರ ಈ ತ್ರೈಮಾಸಿಕದಲ್ಲಿ ದೇಶೀಯ ಬೇಡಿಕೆ ಕೇವಲ ಶೇ.1 ರಷ್ಟು ಹೆಚ್ಚಾಗಿದೆ.

ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಸಾಲ ನೀಡುವಿಕೆಯಲ್ಲಿ  ಕಡಿಮೆಯಾಗುವುದೇ ಇದಕ್ಕೆ ಕಾರಣ ಎಂದು ಸಲಗಾದೋ ಹೇಳಿದ್ದಾರೆ. ಇದಲ್ಲದೆ, ಸಾಲ ನೀಡುವಿಕೆಗೆ ಸಂಬಂಧಿಸಿದ ಪರಿಸ್ಥಿತಿಗಳೂ ಕೂಡ ಕಠಿಣವಾಗಿವೆ. ಜೊತೆಗೆ ಆದಾಯ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿನ ಆದಾಯ ಕುಸಿದಿದ್ದು, ಇದರಿಂದ ವೈಯಕ್ತಿಕ ಲಾಭ ಕುಸಿತವಾಗಿದೆ ಎಂದು ಅವರು ಹೇಳಿದ್ದಾರೆ.

Trending News