UAPA ಕಾನೂನು ಎಂದರೇನು ? ದೇಶವಿರೋಧಿ ಶಕ್ತಿಗಳು ಈ ಕಾನೂನಿಗೆ ಏಕೆ ಭಯ ಪಡುತ್ತಾರೆ ?

Written by - Zee Kannada News Desk | Last Updated : Sep 29, 2022, 03:19 PM IST
  • UAPA ಕಾಯಿದೆಯ ಪೂರ್ಣ ಹೆಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ.
  • ಅಂದರೆ ಪ್ರಮುಖವಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಈ ಕಾನೂನನ್ನು ತರಲಾಗಿದೆ.
UAPA ಕಾನೂನು ಎಂದರೇನು ? ದೇಶವಿರೋಧಿ ಶಕ್ತಿಗಳು ಈ ಕಾನೂನಿಗೆ ಏಕೆ ಭಯ ಪಡುತ್ತಾರೆ ? title=
ಸಾಂದರ್ಭಿಕ ಚಿತ್ರ

ಕೇಂದ್ರ ಸರ್ಕಾರ ದೇಶದಾದ್ಯಂತ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಇಸ್ಲಾಮಿಕ್ ತೀವ್ರವಾದಿ ಸಂಘಟನೆ ಪಿಎಫ್‌ಐನ ಮೇಲೆ 5 ವರ್ಷಗಳ ನಿಷೇಧ ಹೇರುವ ಮೂಲಕ ದೇಶವಿರೋಧಿ, ಮತೀಯ ಗಲಭೆ ತರಹದ ಕೃತ್ಯಗಳಲ್ಲಿ ತೊಡಗಿಕೊಂಡರೆ ಉಳಿಗಾಲವಿಲ್ಲ ಎಂಬ ಸಂದೇಶ ರವಾನೆ ಮಾಡಿದೆ.

ಹಾಗಾದರೆ ಈ ಯುಎಪಿಎ ಕಾಯ್ದೆ ಎಂದರೇನು ? ಈ ಕಾಯ್ದೆಯಡಿ ಕೇಂದ್ರ ಗೃಹ ಇಲಾಖೆಗೆ ಇರುವ ಅಧಿಕಾರಗಳೇನು ? ದೇಶದಲ್ಲಿ ಗಲಭೆಗಳಿಗೆ ಕಾರಣವಾಗುವ ವಿಚಿದ್ರಕಾರಿ ಶಕ್ತಿಗಳಿಗೆ ಇದು ಹೇಗೆ ಭಯ ಹುಟ್ಟಿಸುತ್ತಿದೆ ? ಎಂಬುದಕ್ಕೆ ನಾವು ಈ ವರದಿಯಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.

ಯುಎಪಿಎ ಕಾನೂನು ಎಂದರೇನು?

UAPA ಕಾಯಿದೆಯ ಪೂರ್ಣ ಹೆಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ. ಅಂದರೆ ಪ್ರಮುಖವಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಈ ಕಾನೂನನ್ನು ತರಲಾಗಿದೆ. ಈ ಕಾನೂನಿನ ಅಡಿಯಲ್ಲಿ, ಭಯೋತ್ಪಾದಕರು ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ, ಭಯೋತ್ಪಾದಕರ ಮೇಲೆ ಸಹನಾಭೂತಿ ಹೊಂದಿರುವಂತಹ ಶಂಕಿತರ ವಿರುದ್ಧ ಇದರಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಯೋತ್ಪಾದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಅಧಿಕಾರಗಳನ್ನು ಹೊಂದಿದೆ. ಈ ಕಾನೂನಿನ ಅಡಿಯಲ್ಲಿ, ಎನ್‌ಐ ಶಂಕಿತ ಅಥವಾ ಆರೋಪಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಈ ಕಾನೂನನ್ನು 1967 ರಲ್ಲಿ ತರಲಾಯಿತು. ಸಂವಿಧಾನದ ಪರಿಚ್ಛೇದ 19(1)ರ ಅಡಿಯಲ್ಲಿ ನೀಡಿರುವ ಮೂಲಭೂತ ಹಕ್ಕುಗಳ ಮೇಲೆ ಸಮಂಜಸವಾದ ಮಿತಿಗಳನ್ನು ಹಾಕಲು ಈ ಕಾನೂನನ್ನು ತರಲಾಗಿದೆ. ಇದಕ್ಕೆ 2019ರಲ್ಲಿ ಅಮೂಲಾಗ್ರ ಬದಲಾವಣೆ ತರುವ ಮೂಲಕ ಕೇಂದ್ರ ಸರ್ಕಾರ ವಿನಾಶಕಾರಿ ಶಕ್ತಿಗಳ ಮೇಲೆ ಗದಾಪ್ರಹಾರ ಮಾಡಲು ಆರಂಭಿಸಿದೆ.

ಇದನ್ನೂ ಓದಿ: ಸಾಧು ಹೇಳಿದ ಅಂತಾ 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕುಳಿತ ಭೂಪ: ಮುಂದೇನಾಯ್ತು ಗೊತ್ತಾ?

2019 ರಲ್ಲಿ ಕಾನೂನಿನಲ್ಲಿ ತರಲಾದ ಪ್ರಮುಖ ಬದಲಾವಣೆಗಳು :

ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪೋಟಾ ಮತ್ತು ಟಾಡಾದಂತಹ ಕಾನೂನುಗಳನ್ನು ರದ್ದುಗೊಳಿಸಿದ ನಂತರ, ಕೇಂದ್ರ ಸರ್ಕಾರವು 2019 ರಲ್ಲಿ ಈ ಕಾನೂನಿನಲ್ಲಿ ಅನೇಕ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದನ್ನು ಮೊದಲಿಗಿಂತ ಬಲಿಷ್ಠಗೊಳಿಸಲಾಗಿದೆ, ಈ ಬದಲಾವಣೆಯ ನಂತರ, ಸರ್ಕಾರವು ಯಾವುದೇ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬಹುದು. ಈ ಕಾನೂನು ದೇಶದಾದ್ಯಂತ ಅನ್ವಯಿಸುತ್ತದೆ. ಈ ಕಾನೂನಿನ ಅಡಿಯಲ್ಲಿ, ಪೊಲೀಸರು ಅಥವಾ ತನಿಖಾ ಸಂಸ್ಥೆಯು ಒಬ್ಬ ವ್ಯಕ್ತಿಯನ್ನು ಅನುಮಾನದ ಆಧಾರದ ಮಾತ್ರದಿಂದಲೇ ಭಯೋತ್ಪಾದಕ ಎಂದು ಘೋಷಿಸಬಹುದು. ಇದಕ್ಕಾಗಿ ಆ ಶಂಕಿತನಿಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲೇಬೇಕು ಎಂಬುದಿಲ್ಲ, ತಾನು ಭಯೋತ್ಪಾದಕನಲ್ಲ, ತನ್ನನ್ನು ಭಯೋತ್ಪಾದಕ ಹಣೆಪಟ್ಟಿಯಿಂದ ತೆಗೆದುಹಾಕಲು ಆ ವ್ಯಕ್ತಿಗಳು ಸರ್ಕಾರ ರಚಿಸಿರುವ ಪರಿಶೀಲನಾ ಸಮಿತಿಗೆ ಹೋಗಬೇಕು. ಆದಾಗ್ಯೂ ಪರಿಶೀಲನಾ ಸಮಿತಿಯ ನಿರ್ಧಾರ ತೃಪ್ತಿಕರವಾಗಿಲ್ಲದಿದ್ದರೆ ನಂತರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಈ ಕಾನೂನು ಎಷ್ಟು ಪ್ರಬಲವಾಗಿದೆ ?

ಈ ಕಾನೂನಿನಲ್ಲಿ ಎನ್‌ಐಎಯ ತನಿಖಾಧಿಕಾರಿಯು ಎನ್‌ಐಎ ಡಿಜಿ ಅವರ ಅನುಮತಿಯೊಂದಿಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿದೆ. ಈ ಕಾನೂನು ಎನ್ಐಎಗೆ ಅನಿಯಮಿತ ಅಧಿಕಾರವನ್ನು ನೀಡುತ್ತದೆ. ಯುಎಪಿಎ ಸೆಕ್ಷನ್-16(ಎ) ಪ್ರಕಾರ ಭಯೋತ್ಪಾದಕ ಚಟುವಟಿಕೆಯ ಸಂದರ್ಭದಲ್ಲಿ ಯಾವುದೇ ಕಾರಣದಿಂದ ಯಾವುದೇ ಸಾವು ಸಂಭವಿಸಿದರೆ, ಗರಿಷ್ಠ ಮರಣದಂಡನೆ ಇರುತ್ತದೆ. ಇಲ್ಲವೇ ಜೀವಾವಧಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದರೊಂದಿಗೆ ದಂಡವನ್ನೂ ವಿಧಿಸಬಹುದು.

ಯುಎಪಿಎಯಲ್ಲಿ ಸೆಕ್ಷನ್ 18, 16, 19, 20, 38 ಮತ್ತು 39 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಆರೋಪಿಯು ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ವಿಷಯವು ಮುನ್ನೆಲೆಗೆ ಬಂದಾಗ ಸೆಕ್ಷನ್ 38 ಅನ್ನು ಅನ್ವಯಿಸಲಾಗುತ್ತದೆ. ಅದೇ ಸಮಯದಲ್ಲಿ, ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡಿದ್ದರೆ ಸೆಕ್ಷನ್ 39 ಅನ್ನು ಅನ್ವಯಿಸಲಾಗುತ್ತದೆ. ಈ ಕಾಯಿದೆಯ ಸೆಕ್ಷನ್ 43D (2) ಒಬ್ಬ ವ್ಯಕ್ತಿಯ ಪೊಲೀಸ್ ಕಸ್ಟಡಿ ಅವಧಿಯನ್ನು ದ್ವಿಗುಣಗೊಳಿಸಲು ಬಳಗುಸುತ್ತದೆ. ಇತರ ಕಾನೂನುಗಳಿಗೆ ಹೋಲಿಸಿದರೆ ಈ ಕಾಯಿದೆಯಡಿ ನ್ಯಾಯಾಂಗ ಬಂಧನವು 90 ದಿನಗಳಾಗಿದೆ. ಯುಎಪಿಎ ಕಾಯಿದೆಯ ನಿಬಂಧನೆಗಳ ವ್ಯಾಪ್ತಿ ಇತರೆ ಕಾನೂನಿಗಳಿಗೆ ಹೋಲಿಸಿದರೆ ತುಂಬಾ ವಿಸ್ತಾರವಾಗಿವೆ.

ಇದನ್ನೂ ಓದಿ: IOCL ನಲ್ಲಿ 1500 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ಪರಿಶೀಲಿಸಿ

ಈ ಕಾಯ್ದೆಯಡಿ ಬಂಧಿಸಲಾದ 8,371 ವ್ಯಕ್ತಿಗಳ ಪೈಕಿ ಐದು ವರ್ಷಗಳ ಅವಧಿಯಲ್ಲಿ ಕೇವಲ 235 ಮಂದಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಡೇಟಾದಿಂದ ತಿಳಿದುಬರುತ್ತದೆ. 2015 ಮತ್ತು 2020 ರ ನಡುವೆ ಯುಎಪಿಎ ಶಿಕ್ಷೆಯ ಪ್ರಮಾಣವು ಪ್ರಕರಣಗಳ ಸಂಖ್ಯೆಯ ಆಧಾರದ ಮೇಲೆ 27.57% ಆಗಿದೆ. ಆದರೆ ಬಂಧನಗಳ ಆಧಾರದ ಮೇಲೆ ಲೆಕ್ಕ ಹಾಕಿದಾಗ ಅದು 2.8% ಕ್ಕೆ ಇಳಿಯುತ್ತದೆ. ಇದರಿಂದ ಹಲವಾರು ಪ್ರಗತಿಪರರು, ಸಾಮಾಜಿಕ ಹೋರಾಟಗಾರರು ಎಂದು ಗುರುತಿಸಿಕೊಳ್ಳುವವರು ಇದೊಂದು ಧ್ವನಿಗಳನ್ನು ಅಡಗಿಸಲು ಕೇಂದ್ರ ಸರ್ಕಾರ ನಿರ್ಮಿಸಿಕೊಂಡಿರುವ ಅಸ್ತ್ರ ಎಂದು ಟೀಕಿಸುತ್ತಾರೆ ಮತ್ತು ಈ ಕಾಯ್ದೆಯ ಹಲವು ಕಲಂಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದ್ದು ಇನ್ನೂ ವಿಚಾರಣೆಯ ಹಂತದಲ್ಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News