ಲೋನ್ EMI ಪಾವತಿಸಲು 3 ತಿಂಗಳ ಕಾಲಾವಕಾಶ, ನಿಮಗೆಷ್ಟು ಹಾನಿ ..ಇಲ್ಲಿದೆ ಡಿಟೇಲ್ಸ್

ಒಂದು ವೇಳೆ ನೀವೂ ಕೂಡ ಯಾವುದೇ ರೀತಿಯ ಟರ್ಮ್ ಸಾಲವನ್ನು ತೆಗೆದುಕೊಂಡಿದ್ದರೆ, ನೀವು ಅದರ ಇಎಂಐ ಅನ್ನು 3 ತಿಂಗಳವರೆಗೆ ಪಾವತಿಸುವುದನ್ನು ತಪ್ಪಿಸಬಹುದು.

Last Updated : Apr 9, 2020, 09:11 PM IST
ಲೋನ್ EMI ಪಾವತಿಸಲು 3 ತಿಂಗಳ ಕಾಲಾವಕಾಶ, ನಿಮಗೆಷ್ಟು ಹಾನಿ ..ಇಲ್ಲಿದೆ ಡಿಟೇಲ್ಸ್  title=

ಇತ್ತೀಚೆಗೆ, ಲಾಕ್‌ಡೌನ್‌ನಿಂದಾಗಿ ಮಧ್ಯಮ ವರ್ಗದ ಜನರಿಗೆ ರಿಸರ್ವ್ ಬ್ಯಾಂಕ್ ಪರಿಹಾರ ನೀಡಿತು. ವಾಸ್ತವವಾಗಿ, ಸಾಲದ ಮೇಲಿನ ಇಎಂಐ ಪಾವತಿಸಲು 3 ತಿಂಗಳ ಕಾಲಾಕಾಶ ನೀಡುವಂತೆ ಆರ್‌ಬಿಐ ಬ್ಯಾಂಕ್ ಗಳಿಗೆ ನಿರ್ದೇಶನಗಳನ್ನೂ ನೀಡಿದೆ. ಆರ್‌ಬಿಐನ ಅಂಶವನ್ನು ಪರಿಗಣಿಸಿ, ಬಹುತೇಕ ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರ ಮುಂದೆ 3 ತಿಂಗಳ ಕಾಲಾವಕಾಶ ನೀಡುವುದನ್ನು ಪ್ರಸ್ತಾಪಿಸಿವೆ. ಇದರರ್ಥ ನೀವು ಯಾವುದೇ ರೀತಿಯ ಟರ್ಮ್ ಸಾಲವನ್ನು ತೆಗೆದುಕೊಂಡಿದ್ದರೆ, ನೀವು ಅದರ ಇಎಂಐ ಅನ್ನು 3 ತಿಂಗಳವರೆಗೆ ಪಾವತಿಸುವುದನ್ನು ತಪ್ಪಿಸಬಹುದು.

ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಇಲ್ಲ
ಈ ಅವಧಿಯಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಹಾಗೂ ಬ್ಯಾಂಕುಗಳು ಸಹ ಇಎಂಐ ನೀಡಲು ಯಾವುದೇ ಒತ್ತಡವನ್ನು ಹೇರುವಂತಿಲ್ಲ. ಆದರೆ ನಿಮ್ಮ ಇಎಂಐ ಕ್ಷಮಿಸಲಾಗುವುದು ಎಂದು ಇದರ ಅರ್ಥವಲ್ಲ. ನೀವು 3 ತಿಂಗಳ ನಂತರ ಇಎಂಐ ಪಾವತಿಸಬೇಕು. ಅಂತಹ ಪರಿಸ್ಥಿತಿಯಲ್ಲಿ, ನೀವು 3 ತಿಂಗಳು ಇಎಂಐ ನೀಡದಿದ್ದರೆ, ಅದು ನಿಮಗೆ ಲಾಭದಾಯಕ ವ್ಯವಹಾರವಾಗಲಿದೆಯೇ ಅಥವಾ ನಷ್ಟದ ವ್ಯವಹಾರವಾಗಲಿದೆಯೇ ಎಂಬುದರ ಕ್ಯಾಲ್ಕುಲೆಶನ್ ಇಲ್ಲಿದೆ.

SBI ಉದಾಹರಣೆಯ ಮೂಲಕ ಇದನ್ನು ತಿಳಿಯೋಣ
ಈ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಲು, ನಾವು ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ಎಸ್‌ಬಿಐನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಮುಂದೂಡುವಿಕೆಯ ಅವಧಿಯಲ್ಲಿ ಬಾಕಿ ಉಳಿದಿರುವ ನಿಮ್ಮ ಸಾಲದ ಹಣದ ಮೇಲೆ ಬಡ್ಡಿ ಏರಿಕೆಯಾಗುತ್ತಲೇ ಇರುತ್ತದೆ. ಮೂರು ತಿಂಗಳ ಮುಂದೂಡಿಕೆ ಆಯ್ಕೆ ಮಾಡುವ ಸಾಲಗಾರರಿಂದ ಹೆಚ್ಚುವರಿ ಇಎಂಐಗಳ ಮೂಲಕ ಈ ಹೆಚ್ಚುವರಿ ಬಡ್ಡಿಯನ್ನು ವಿಧಿಸಲಾಗುವುದು.

ಒಂದು ವೇಳೆ 30 ಲಕ್ಷ ಸಾಲ ಇದ್ದರೆ ಲೆಕ್ಕಾಚಾರ ಹೇಗೆ?
ಎಸ್‌ಬಿಐ ಇದನ್ನು ವಿವರವಾಗಿ ವಿವರಿಸಿದೆ. ಉಮೇಶ್ 30 ಲಕ್ಷ ರೂ.ಗಳ ಗೃಹ ಸಾಲವನ್ನು ತೆಗೆದುಕೊಂಡಿದ್ದಾರೆ ಮತ್ತು ಮರುಪಾವತಿ ಅವಧಿ 15 ವರ್ಷಗಳು ಎಂದು ಭಾವಿಸೋಣ. ಇಂತಹ ಪರಿಸ್ಥಿತಿಯಲ್ಲಿ, ಉಮೇಶ್ ಮೂರು ತಿಂಗಳ ಮುಂದೂಡುವ ಅವಧಿಯನ್ನು ಆಯ್ಕೆ ಮಾಡಿದರೆ ನಂತರ ಅವರು 8 ಇಎಂಐಗಳಿಗೆ ಸಮಾನವಾದ 2.34 ಲಕ್ಷ ರೂ.ಗಳ ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಒಂದು ವೇಳೆ ಆರು ಲಕ್ಷದ ಕಾರ್ ಲೋನ್ ಇದ್ದರೆ ಲೆಕ್ಕಾಚಾರ ಹೇಗೆ?
ಇದೆ ರೀತಿ, ಸುನೀಲ್ ಅವರು 6 ಲಕ್ಷ ರೂಪಾಯಿಗಳ ಕಾರು ಸಾಲವನ್ನು ತೆಗೆದುಕೊಂಡಿದ್ದಾರೆ ಮತ್ತು ಅದನ್ನು ಮರುಪಾವತಿಸಲು 54 ತಿಂಗಳುಗಳು ಉಳಿದಿವೆ ಎಂದು ಭಾವಿಸೋಣ. ಸುನೀಲ್ ಈ ಗ್ರೇಸ್ ಅವಧಿಯ ವಿಕಲ್ಪವನ್ನು ಆಯ್ಕೆ ಮಾಡಿದರೆ ಅವರು ಸುಮಾರು 19,000 ರೂ.ಗಳ ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ, ಇದು 1.5 ಹೆಚ್ಚುವರಿ ಇಎಂಐಗಳಿಗೆ ಸಮಾನವಾಗಿರುತ್ತದೆ. ಅದೇ ಸಮಯದಲ್ಲಿ, ಉಮೇಶ್ ಮತ್ತು ಸುನೀಲ್ ಇಎಂಐ ಪಾವತಿಸುವುದನ್ನು ಮುಂದುವರಿಸಲು ಬಯಸಿದರೆ, ಅವರು ಏನನ್ನೂ ಮಾಡಬೇಕಾಗಿಲ್ಲ. ಅವನು ಮೊದಲಿನಂತೆ ತನ್ನ ಕಂತುಗಳನ್ನು ಪಾವತಿಸಬಹುದು ಮತ್ತು ಅವನು ಯಾವುದೇ ರೀತಿಯ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿಲ್ಲ.

Trending News