ನಿಮಗೆ ಗೃಹಸಾಲ ಸಿಗಲಿದೆಯೇ ಅಥವಾ ಇಲ್ಲ? ಮನೆಯಲ್ಲಿಯೇ ಕುಳಿತು ಹೀಗೆ ಪತ್ತೆಹಚ್ಚಿ

ಸಾಮಾನ್ಯವಾಗಿ ನೀವು ಮನೆ/ಫ್ಲ್ಯಾಟ್, ಪ್ಲಾಟ್/ಕಟ್ಟಡ ಕಾಮಗಾರಿಗೆ ಗೃಹ ಸಾಲ ಪಡೆಯುತ್ತೀರಿ. ಹಲವು ಬಾರಿ ಮನೆಯ ಅಂತಸ್ತುಗಳನ್ನೂ ಹೆಚ್ಚಿಸಲು/ರಿಪೇರಿ ಮಾಡಿಸಲು ಸಹ ಗೃಹಸಾಲ ಪಡೆಯಲಾಗುತ್ತದೆ.

Written by - Nitin Tabib | Last Updated : Jan 13, 2020, 04:44 PM IST
ನಿಮಗೆ ಗೃಹಸಾಲ ಸಿಗಲಿದೆಯೇ ಅಥವಾ ಇಲ್ಲ? ಮನೆಯಲ್ಲಿಯೇ ಕುಳಿತು ಹೀಗೆ ಪತ್ತೆಹಚ್ಚಿ title=

ನವದೆಹಲಿ:ಮನೆ ಖರೀದಿಸುವ ಮೊದಲು, ಜನರು ತಾವು ಗೃಹ ಸಾಲವನ್ನು ಪಡೆಯಬಹುದೇ ಅಥವಾ ಇಲ್ಲವೇ ಎಂದು ತಿಳಿಯಲು ಬಯಸುತ್ತಾರೆ. ಒಂದು ವೇಳೆ ಸಿಗುತ್ತದೆ ಎಂದಾದಲ್ಲಿ ಎಷ್ಟು? ಮತ್ತು ವಿಶೇಷವಾಗಿ ಮೊದಲ ಬಾರಿಗೆ ಗೃಹ ಸಾಲ ಪಡೆಯುವ ಸಾಲಗಾರರು ಇದನ್ನು ತಿಳಿಯಲು ಬಯಸುತ್ತಾರೆ. ಸಾಮಾನ್ಯವಾಗಿ, ನೀವು ಮನೆ / ಫ್ಲಾಟ್, ಕಟ್ಟಡ ನಿರ್ಮಾಣ / ಕಟ್ಟಡ ನವೀಕರಿಸಲು ನವೀಕರಿಸಲು  ಗೃಹ ಸಾಲವನ್ನು ಪಡೆದುಕೊಳ್ಳುವಿರಿ. ಕೆಲವೊಮ್ಮೆ ಮನೆ ಅಂತಸ್ತುಗಳನ್ನು ಹೆಚ್ಚಿಸಲು ಅಥವಾ ದುರಸ್ತಿ ಕೆಲಸ ಮಾಡಿಸಲೂ ಸಹ ಈ ಸಾಲ ಪಡೆಯಲಾಗುತ್ತದೆ. ಗೃಹ ಸಾಲದ ಬಗ್ಗೆ ಅಗತ್ಯವಿರುವ ಎಲ್ಲ ಮಾಹಿತಿ ನಾವು ಇಲ್ಲಿ ನೀಡುತ್ತಿದ್ದೇವೆ.

ಯಾವ ಕಾರಣಕ್ಕೆ ನೀವು ಗೃಹಸಾಲ ಪಡೆಯುತ್ತೀರಿ ಎಂಬುದನ್ನು ಗಮನಿಸಿ
ಮೊದಲ ಬಾರಿಗೆ ಮನೆ ನಿರ್ಮಾಣ ಅಥವಾ ಖರೀದಿಸುವವರಿಗೆ ಗೃಹಸಾಲದ ಅಗತ್ಯತೆ ಇರುತ್ತದೆ. ಎರಡನೇ ಬಾರಿಗೆ ಮನೆ ಖರೀದಿಸುವ/ ನಿರ್ಮಿಸುವವರಿಗೆ ಬ್ಯಾಂಕ್ ನಿಯಮಗಳು ಬೇರೆಯಾಗಿರುತ್ತವೆ. ಅದಕ್ಕಾಗಿ ನೀವು ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತಿರುವಿರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ನೀವು ಎಷ್ಟು ಗೃಹಸಾಲ ಪಡೆಯಬಹುದು?
ಹೋಂ ಲೋನ್ ಪ್ರಕ್ರಿಯೆ ಆರಂಭಿಸುವ ಮೊದಲು, ನಿಮ್ಮ ವಾರ್ಷಿಕ ಗಳಿಕೆ ಮತ್ತು ಖರ್ಚು ಎಷ್ಟು ಎಂಬುದನ್ನು ಅಂದಾಜಿಸಿ. ಇದನ್ನು ಆಧರಿಸಿ ನಿಮಗೆ ಬ್ಯಾಂಕ್ ಗಳು ಸಾಲ ನೀಡುತ್ತವೆ. ನೀವು ಪಡೆಯುವ ಗೃಹಸಾಲದ ಮೊತ್ತ ನೀವು ಸಾಲವನ್ನು ಮರುಪಾವತಿಸುವ ಕ್ಷಮತೆಯನ್ನು ಆಧರಿಸಿರುತ್ತದೆ. ನಿಮ್ಮ ಮಾಸಿಕ ಆದಾಯ, ಖರ್ಚು ಹಾಗೂ ಯೋಜನೆಗಳ ಆದಾಯ, ಸಂಪತ್ತು, ನಿಮ್ಮ ಮೇಲಿರುವ ಸಾಲ ಹಾಗೂ ಆದಾಯದಲ್ಲಿ ನೀವು ಹೊಂದಿರುವ ಸ್ಥಿರತೆಯ ಮೇಲೆ ಆಧಾರವಾಗಿರುತ್ತದೆ. ನೀವು ನಿಗದಿತ ಸಮಯದಲ್ಲಿ ಸಾಲ ಮರುಪಾವತಿಸಬಹುದೇ ಎಂಬುದರ ಮೇಲೆ ಬ್ಯಾಂಕ್ ಗಳು ಹೆಚ್ಚಿನ ಗಮನ ನೀಡುತ್ತವೆ.

ಎಷ್ಟು ಆದಾಯ, ಅಷ್ಟೇ ಪ್ರಮಾಣದ ಲೋನ್
ಪ್ರತಿ ತಿಂಗಳಿಗೆ ನಿಮ್ಮ ಆದಾಯ ಎಷ್ಟು ಹೆಚ್ಚೋ ಅಷ್ಟೇ ಹೆಚ್ಚಿನ ಪ್ರಮಾಣದಲ್ಲಿ ನಿಮಗೆ ಗೃಹಸಾಲ ಸಿಗುತ್ತದೆ. ಸಾಮಾನ್ಯವಾಗಿ ನಿಮಗೆ ಸಾಲ ನೀಡುವ ಹೆಚ್ಚಿನ ಪ್ರಮಾಣದ ಬ್ಯಾಂಕ್ ಗಳು ಹಾಗೂ ಆರ್ಥಿಕ ಸಂಸ್ಥೆಗಳು, ನಿಮ್ಮ ಮಾಸಿಕ ಆದಾಯದ ಶೇ.50ರಷ್ಟು ಹಣವನ್ನು ಬ್ಯಾಂಕ್ ಕಂತಿನ ರೂಪದಲ್ಲಿ ನೋಡುತ್ತವೆ. ಹೋಂ ಲೋನ್ ಅವಧಿ ಹಾಗೂ ಬಡ್ಡಿದರಗಳು ಕೂಡ ನಿಮ್ಮ ಲೋನ್ ಅಮೌಂಟ್ ಮೇಲೆ ಪರಿಣಾಮ ಬೀರುತ್ತವೆ. ಇವುಗಳನ್ನು ಹೊರತುಪಡಿಸಿ ಸಾಲ ನೀಡಲು ವ್ಯಕ್ತಿಯ ಗರಿಷ್ಟ ವಯೋಮಿತಿಯನ್ನೂ ಸಹ ಬ್ಯಾಂಕ್ ಗಳು ಪರಿಗಣಿಸುತ್ತವೆ.

ನಿಮಗೆ ಎಷ್ಟು ಹೆಚ್ಚುವರಿ ಗೃಹಸಾಲ ಸಿಗಬಹುದು?
ಯಾವುದೇ ಒಂದು ಮನೆ ಅಥವಾ ಫ್ಲ್ಯಾಟ್ ನ ಬೆಲೆಯ ಶೇ.10-20ರಷ್ಟು ಹಣವನ್ನು ಡೌನ್ ಪೇಮೆಂಟ್ ರೂಪದಲ್ಲಿ ಪಡೆಯಲಾಗುತ್ತದೆ. ಬಳಿಕ ನಿಮ್ಮ ಬಳಿ ಇರುವ ಆಸ್ತಿಯ ಬೆಲೆಯ ಶೇ.80 ರಿಂದ ಶೇ.90ರಷ್ಟು ಹಣ ನಿಮಗೆ ಸಾಲದ ರೂಪದಲ್ಲಿ ಸಿಗಲಿದೆ. ಇದರಲ್ಲಿ ರಿಜಿಸ್ಟ್ರೆಷನ್, ಟ್ರಾನ್ಸ್ಫರ್ ಹಾಗೂ ಸ್ಟಂಪ್ ಡ್ಯೂಟಿಗಳೂ ಕೊಡ ಶಾಮೀಲಾಗಿರುತ್ತವೆ. ಆಸ್ತಿ ಖರೀದಿಸುವ ವೇಳೆ ಆದಷ್ಟು ಹೆಚ್ಚು ಡೌನ್ ಪೇಮೆಂಟ್ ಮಾಡಬೇಕು. ಇದರಿಂದ ನಿಮ್ಮ ಮೇಲಿರುವ ಸಾಲದ ಒತ್ತಡ ಕಡಿಮೆಯಾಗುತ್ತದೆ. ಹೋಂ ಲೋನ್ ರೂಪದಲ್ಲಿ ಸಾಲ ನೀಡುವ ಬ್ಯಾಂಕ್ ಗಳು ದೀರ್ಘಾವಧಿಯವರೆಗೆ ನಿಮ್ಮ ಬಳಿಯಿಂದ ಬಡ್ಡಿ ಪಡೆಯುತ್ತವೆ ಎಂಬುದನ್ನು ನೆನಪಿಡಿ.

ಸಾಲ ಪಡೆಯಲು ಯಾವ ಯಾವ ದಾಖಲೆಗಳು ಬೇಕು?
ಹೋಂ ಲೋನ್ ಅಪ್ಲಿಕೇಶನ್ ನಲ್ಲಿ ನೀವು ಸಲ್ಲಿಸಬೇಕಾಗಿರುವ ದಾಖಲೆಗಳ ಪಟ್ಟಿ ಇರುತ್ತದೆ. ಮನೆ ಖರೀದಿಸುವ ಕಾನೂನಾತ್ಮಕ ದಾಖಲೆ ಸೇರಿದಂತೆ ಐಡೆಂಟಿಟಿ ಹಾಗೂ ಸಿಂಧುತ್ವದ ದಾಖಲೆಯ ಜೊತೆಗೆ ನಿಮ್ಮ ಸ್ಯಾಲರಿ ಸ್ಲಿಪ್, ಆದಾಯ ತೆರಿಗೆ ಇಲಾಖೆಯ ಫಾರ್ಮ್ 16, ನಿಮ್ಮ ಬ್ಯಾಂಕ್ ಖಾತೆಯ ಒಂದು ತಿಂಗಳ ಸ್ಟೇಟ್ಮೆಂಟ್ ನೀಡಬೇಕಾಗಲಿದೆ. ಇವುಗಳ ಜೊತೆಗೆ ಕೆಲ ಬ್ಯಾಂಕ್ ಗಳು ನೀವು ಹೊಂದಿರುವ ವಿಮಾ ಪಾಲಸಿ, ಷೇರ್ ಸರ್ಟಿಫಿಕೆಟ್, NSC, ಮ್ಯೂಚುವಲ್ ಫಂಡ್, ಬ್ಯಾಂಕ್ ಡಿಪಾಸಿಟ್ ಅಥವಾ ಇತರೆ ಡಿಪಾಸಿಟ್ ಗಳ ಮಾಹಿತಿ ಕೂಡ ಕೇಳುತ್ತವೆ.

Trending News