ನವದೆಹಲಿ: ಇನ್ಮುಂದೆ ನೀವು ನಿಮ್ಮ ಲ್ಯಾಂಡ್ ಲೈನ್ ನಂಬರ್ ನಿಂದ ಮೊಬೈಲ್ ನಂಬರ್ ಗೆ ಕರೆ ಮಾಡಲು ಸಂಖ್ಯೆ ಮೊದಲು ಶೂನ್ಯ(0) ನಮೂದಿಸುವುದು ಅನಿವಾರ್ಯವಾಗಲಿದೆ.
ಇದನ್ನು ಓದಿ - Broadband ಹೆಸರಿನಲ್ಲಿ ಅರ್ಧಕ್ಕಿಂತ ಕಡಿಮೆ ಸ್ಪೀಡ್ ನೀಡಲಾಗುತ್ತಿದೆಯಂತೆ!
ಮೊಬೈಲ್ ಸಂಖ್ಯೆಯ ಮೊದಲು Zero ನಮೂದಿಸಬೇಕು
ಟೆಲಿಕಾಂ ನಿಯಂತ್ರಕ TRAI ನೀಡಿರುವ ಪ್ರಸ್ತಾಪವನ್ನು ಟೆಲಿಕಾಂ ಇಲಾಖೆ ಸ್ವೀಕರಿಸಿದೆ. ಇದನ್ನು 1 ಜನವರಿ 2021 ರಿಂದ ರಾಷ್ಟ್ರವ್ಯಾಪಿ ಜಾರಿಗೆ ತರಲಾಗುವುದು. 29 ಮೇ 2020 ರಂದು, TRAI ಮೊಬೈಲ್ ಸಂಖ್ಯೆಗೆ ಮೊದಲು ಶೂನ್ಯ ನಮೂದಿಸುವ ಶಿಫಾರಸು ಮಾಡಿತ್ತು. ಟೆಲಿಕಾಂ ಆಪರೇಟರ್‌ಗಳು ಹೆಚ್ಚು ಹೆಚ್ಚು ಹೊಸ ಸಂಖ್ಯೆಗಳನ್ನು ರಚಿಸಲು ಇದು ಸಹಾಯ ಮಾಡುತ್ತದೆ.
ಹೊಸ ಮೊಬೈಲ್ ಸಂಖ್ಯೆಗಳನ್ನು ತಯಾರಿಸಲು ಸಹಾಯ ಮಾಡಲಿದೆ.
ನವೆಂಬರ್ 20 ರಂದು ಹೊರಡಿಸಲಾಗಿರುವ ಸುತ್ತೋಲೆಯಲ್ಲಿ, ದೂರಸಂಪರ್ಕ ಇಲಾಖೆಯು ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಸಂಖ್ಯೆಯನ್ನು ಡಯಲ್ ಮಾಡುವ ವಿಧಾನವನ್ನು ಬದಲಾಯಿಸಲು TRAI ಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದು ಹೇಳಿತ್ತು. ಇದು ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಸೇವೆಗಳಿಗೆ ಸಾಕಷ್ಟು ಸಂಖ್ಯೆಗಳನ್ನು ರಚಿಸಲು ಅನುವು ಮಾಡಿಕೊಡಲಿದೆ.
ಇದನ್ನು ಓದಿ -ಇನ್ಮುಂದೆ ನಿಮ್ಮ ನೆಚ್ಚಿನ ಚಾನಲ್‌ಗಳನ್ನು ಆಯ್ಕೆ ಮಾಡುವುದು ಇನ್ನೂ ಸುಲಭ
ಜನವರಿ 1, 2021ಕ್ಕೆ ಈ ನಿಯಮ ಜಾರಿಗೆ ಬರಲಿದೆ
ಟೆಲಿಕಾಂ ಕಂಪನಿಗಳು ಲ್ಯಾಂಡ್‌ಲೈನ್‌ನ ಎಲ್ಲ ಗ್ರಾಹಕರಿಗೆ ಝೀರೋ ಡಯಲ್ ಮಾಡುವ ಸೌಲಭ್ಯವನ್ನು ಒದಗಿಸಬೇಕಾಗುತ್ತದೆ ಎಂದು ದೂರಸಂಪರ್ಕ ಇಲಾಖೆ (DoT) ತಿಳಿಸಿದೆ. ನಿಮ್ಮ ಪ್ರದೇಶದ ಹೊರಗೆ ಕರೆ ಮಾಡಲು ಈ ಸೌಲಭ್ಯವು ಪ್ರಸ್ತುತ ಲಭ್ಯವಿದೆ. ಈ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಟೆಲಿಕಾಂ ಕಂಪನಿಗಳಿಗೆ ಜನವರಿ 1 ರವರೆಗೆ ಕಾಲಾವಕಾಶ ನೀಡಲಾಗಿದೆ.
ಇದನ್ನು ಓದಿ- MOBILE DATA ಬಳಕೆದಾರರಿಗೊಂದು ಕಹಿ ಸುದ್ದಿ
254 ಕೋಟಿ ಹೊಸ ನಂಬರ್ ಗಳು ಜನರೇಟ್ ಆಗಲಿವೆ
ಈ ನೂತನ ಪದ್ಧತಿ ಟೆಲಿಕಾಂ ಕಂಪನಿಗಳಿಗೆ ಮೊಬೈಲ್ ಸೇವೆಗಳಿಗಾಗಿ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಭವಿಷ್ಯದ ಅಗತ್ಯಗಳನ್ನು ಪೂರೈಸುತ್ತದೆ. ಪರಿಷ್ಕೃತ ರಾಷ್ಟ್ರೀಯ ಸಂಖ್ಯಾ ಯೋಜನೆ (NNP) ಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲು TRAI ಶಿಫಾರಸು ಮಾಡಿದೆ.