ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಕೊನೆಯ ದಿನದಂದು ತಮ್ಮ ಪಕ್ಷದ ಎಲ್ಲಾ ಸಂಸದರೂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ (YSR) ಪಕ್ಷ ಹೇಳಿದೆ. ಅಲ್ಲದೆ, ತೆಲುಗು ದೇಶಂ ಪಕ್ಷವನ್ನೂ(ಟಿಡಿಪಿ) ಸಹ ಸಾಮೂಹಿಕ ರಾಜೀನಾಮೆಗೆ ನೀಡಲು ಮನವಿ ಮಾಡಿದೆ.
"ನಮ್ಮ ಪಕ್ಷದ ಸಂಸದರು ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಕೊನೆಯ ದಿನದಂದು ತಮ್ಮ ರಾಜೀನಾಮೆಗಳನ್ನು ಸಲ್ಲಿಸಲಿದ್ದಾರೆ" ಎಂದು YSRCP ಹೇಳಿದೆ.
ಲೋಕಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ 7 ಸ್ಥಾನಗಳನ್ನು ಮತ್ತು ಟಿಡಿಪಿ 11 ಸ್ಥಾನಗಳನ್ನು ಹೊಂದಿದೆ.
ಆಂಧ್ರಪ್ರದೇಶದ ರಾಜಕಾರಣದಲ್ಲಿ ವೈಎಸ್ಆರ್ಸಿಪಿ ಮತ್ತು ಟಿಡಿಪಿ ಎರಡೂ ವಿಶೇಷ ಸ್ಥಾನಮಾನ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿವೇ. ಆದರೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 15 ನೇ ಹಣಕಾಸು ಆಯೋಗದಿಂದ ಇಂತಹ ಬೇಡಿಕೆಗಳನ್ನು ತೆಗೆದುಹಾಕಲಾಗಿದ್ದು, ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಶೇಷ ಸ್ಥಾನಮಾನವು ರಾಜ್ಯ ಸರ್ಕಾರಗಳು ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ಪಡೆಯಲು ಸಾಧ್ಯವಾಗಿತ್ತದೆ. 2014ರಲ್ಲಿ ಟಿಡಿಪಿ-ಬಿಜೆಪಿ ಒಕ್ಕೂಟದ ಚುನಾವಣಾ ಭರವಸೆಯ ಭಾಗವಾಗಿತ್ತು. ಆದರೆ, 2018ರಲ್ಲಿ ಎನ್ದಿಎ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿಯೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಪರಿಣಾಮ ಈ ರಾಜಕೀಯ ಬೆಳವಣಿಗೆಗಳು ಕಂಡುಬಂದಿದೆ.