ಬೆಂಗಳೂರು: ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮೋದಿ ಕಳ್ಳ’ ಎಂದಿದ್ದೇ ತಡ ಕಳ್ಳ ಮೋದಿಗಳೆಲ್ಲ ಬಿಲದಿಂದ ಹೊರಬರುತ್ತಿವೆ! ಈ ಕಳ್ಳ ಮೋದಿಗೂ ಬಿಜೆಪಿಗೂ ಅದೇನು ಅವಿನಾಭಾವ ಸಂಬಂಧ?!’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಬಿಜೆಪಿಗೆ ಬಿಸಿ ತುಪ್ಪವಾದ ಒಳಮೀಸಲಾತಿ ಅಸ್ತ್ರ
ಅಶ್ಲೀಲ ಸಿಡಿಗೂ ಬಿಜೆಪಿಗೂ ಏನು ಸಂಬಂಧ?
ಅಶ್ಲೀಲ ಚಿತ್ರ ಮಾಡುವವರೂ ಬಿಜೆಪಿಗರೇ, ನೋಡುವವರೂ ಬಿಜೆಪಿಗರೇ!
ಕರ್ನಾಟಕದ @BJP4Karnataka ನಾಯಕರಿಂದ ಪ್ರೇರಣೆ ಪಡೆದು ತ್ರಿಪುರಾ
ವಿಧಾನಸಭೆಯಲ್ಲೂ ಬಿಜೆಪಿ ಶಾಸಕರೊಬ್ಬರು ಪೋರ್ನ್ ವೀಕ್ಷಣೆ ಮಾಡಿದ್ದಾರೆ.ಆ ಮಟ್ಟಿಗೆ @BJP4Karnataka ದೇಶಕ್ಕೆ ಮಾದರಿಯಾಗಿದೆ!
ಅಶ್ಲೀಲ ಸಿಡಿಗೂ ಬಿಜೆಪಿಗೂ ಏನು ಈ ಬಾಂಧವ್ಯ, ಏನು ಈ ಸಂಬಂಧ! pic.twitter.com/fPD9p1R6TC
— Karnataka Congress (@INCKarnataka) March 30, 2023
‘ಅಶ್ಲೀಲ ಚಿತ್ರ ಮಾಡುವವರೂ ಬಿಜೆಪಿಗರೇ, ನೋಡುವವರೂ ಬಿಜೆಪಿಗರೇ! ಕರ್ನಾಟಕದ ಬಿಜೆಪಿ ನಾಯಕರಿಂದ ಪ್ರೇರಣೆ ಪಡೆದು ತ್ರಿಪುರಾ ವಿಧಾನಸಭೆಯಲ್ಲೂ ಬಿಜೆಪಿ ಶಾಸಕರೊಬ್ಬರು ಪೋರ್ನ್ ವೀಕ್ಷಣೆ ಮಾಡಿದ್ದಾರೆ. ಆ ಮಟ್ಟಿಗೆ ಬಿಜೆಪಿ ದೇಶಕ್ಕೆ ಮಾದರಿಯಾಗಿದೆ! ಅಶ್ಲೀಲ ಸಿಡಿಗೂ ಬಿಜೆಪಿಗೂ ಏನು ಈ ಬಾಂಧವ್ಯ, ಏನು ಈ ಸಂಬಂಧ!’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಕಾರ್ಯಕರ್ತರಿಗೇ ಅಸಹ್ಯ ಹುಟ್ಟಿದೆ
◆ಆರ್. ಅಶೋಕ್ ಅವರಿಗೆ - Go back
◆ವಿ. ಸೊಮ್ಮಣ್ಣರಿಗೆ - Go back
◆ಅರುಣ್ ಸೋಮಣ್ಣರಿಗೆ - Go back
◆ನಳಿನ್ ಕಟೀಲರಿಗೆ - Go back
◆ಅರಗ ಜ್ಞಾನೇಂದ್ರರಿಗೆ - ಮನೆ ಮೇಲೆ ದಾಳಿಇದು ಬಿಜೆಪಿ ಕಾರ್ಯಕರ್ತರೇ ಬಿಜೆಪಿ ನಾಯಕರಿಗೆ ತೋರಿದ ಪ್ರೀತಿಯ ನಿದರ್ಶನಗಳು.
ಈ ಚುನಾವಣೆಯಲ್ಲಿ ಬಿಜೆಪಿಯನ್ನು ಅದರ ಕಾರ್ಯಕರ್ತರೇ ಒದ್ದೋಡಿಸುತ್ತಾರೆ!
— Karnataka Congress (@INCKarnataka) March 30, 2023
‘ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಕಾರು ಅಲ್ಲಾಡಿಸಿದ ಬಿಜೆಪಿ ಕಾರ್ಯಕರ್ತರೇ ಈಗ ಚುನಾವಣೆಯಲ್ಲಿ ಬಿಜೆಪಿಯ ಬುಡ ಅಲ್ಲಾಡಿಸುತ್ತಾರೆ. #40PercentSarkaraದ ಮೇಲೆ ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ಅಸಹ್ಯ ಹುಟ್ಟಿದೆ. ಹಲವು ಬಿಜೆಪಿ ಶಾಸಕರ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದು, Go back ಎನ್ನುತ್ತಿರುವುದೇ ಇದಕ್ಕೆ ಉದಾಹರಣೆ’ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: BSY ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿಯ "ಸಂತೋಷ ಕೂಟ"ದ ಕೈವಾಡ: ಕಾಂಗ್ರೆಸ್
ಹಿಂದೆ @nalinkateel ಅವರ ಕಾರು ಅಲ್ಲಾಡಿಸಿದ ಬಿಜೆಪಿ ಕಾರ್ಯಕರ್ತರೇ ಈಗ ಚುನಾವಣೆಯಲ್ಲಿ ಬಿಜೆಪಿಯ ಬುಡ ಅಲ್ಲಾಡಿಸುತ್ತಾರೆ.#40PercentSarkara ದ ಮೇಲೆ ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ಅಸಹ್ಯ ಹುಟ್ಟಿದೆ.
ಹಲವು ಬಿಜೆಪಿ ಶಾಸಕರ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದು, Go back ಎನ್ನುತ್ತಿರುವುದೇ ಇದಕ್ಕೆ ಉದಾಹರಣೆ.#BJPvsBJP
— Karnataka Congress (@INCKarnataka) March 30, 2023
‘ಆರ್.ಅಶೋಕ್ ಅವರಿಗೆ - Go back, ವಿ.ಸೊಮ್ಮಣ್ಣರಿಗೆ - Go back, ಅರುಣ್ ಸೋಮಣ್ಣರಿಗೆ - Go back, ನಳೀನ್ ಕುಮಾರ್ ಕಟೀಲರಿಗೆ - Go back ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರರ ಮನೆ ಮೇಲೆ ದಾಳಿ. ಇದು ಬಿಜೆಪಿ ಕಾರ್ಯಕರ್ತರೇ ಬಿಜೆಪಿ ನಾಯಕರಿಗೆ ತೋರಿದ ಪ್ರೀತಿಯ ನಿದರ್ಶನಗಳು. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಅದರ ಕಾರ್ಯಕರ್ತರೇ ಒದ್ದೋಡಿಸುತ್ತಾರೆ!’ ಎಂದು ಕಾಂಗ್ರೆಸ್ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.