"ಬಿಜೆಪಿಗೆ ಅಧಿಕಾರ ಕೊಟ್ಟರೆ, 40% ಪರ್ಸೆಂಟ್ ಭ್ರಷ್ಠಾಚಾರಕ್ಕೆ ಮತ್ತೇ ಅವಕಾಶ ಮಾಡಿಕೊಟ್ಟಂತೆ"-ರಾಹುಲ್ ಗಾಂಧಿ 

ಬಿಜೆಪಿಗೆ ಅಧಿಕಾರ ಕೊಟ್ಟರೆ, 40% ಪರ್ಸೆಂಟ್ ಭ್ರಷ್ಠಾಚಾರಕ್ಕೆ ಮತ್ತೇ ಅವಕಾಶ ಮಾಡಿಕೊಟ್ಟಂತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.ಅವರು ಕಲಬುರಗಿ ಜಿಲ್ಲೆಯ ಜೇರ್ವಗೀ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು.

Written by - Zee Kannada News Desk | Last Updated : Apr 28, 2023, 05:28 PM IST
  • ಈ ಭಾಗದ ಜನರಿಗೆ ಸಿಗಬೇಕಿದ್ದ ಸುಮಾರು 50,000 ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ.
  • ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 50,000 ಹುದ್ದೆಗಳನ್ನು ಭರ್ತಿ ಮಾಡುತ್ತೇವೆ.
  • ಈ ಭಾಗದಲ್ಲಿ ವಿಶೇಷವಾಗಿ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುತ್ತೇವೆ.
"ಬಿಜೆಪಿಗೆ ಅಧಿಕಾರ ಕೊಟ್ಟರೆ, 40% ಪರ್ಸೆಂಟ್ ಭ್ರಷ್ಠಾಚಾರಕ್ಕೆ ಮತ್ತೇ ಅವಕಾಶ ಮಾಡಿಕೊಟ್ಟಂತೆ"-ರಾಹುಲ್ ಗಾಂಧಿ  title=

ಕಲಬುರಗಿ: ಬಿಜೆಪಿಗೆ ಅಧಿಕಾರ ಕೊಟ್ಟರೆ, 40% ಪರ್ಸೆಂಟ್ ಭ್ರಷ್ಠಾಚಾರಕ್ಕೆ ಮತ್ತೇ ಅವಕಾಶ ಮಾಡಿಕೊಟ್ಟಂತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.ಅವರು ಕಲಬುರಗಿ ಜಿಲ್ಲೆಯ ಜೇರ್ವಗೀ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು.

ಗುಡುಗು ಸಿಡಿಲು ಮಳೆ ಆರ್ಭಟದ ಮಧ್ಯೆಯೂ ಹಳ್ಳಿಗಳಿಂದ ಜನ ಬಂದಿದ್ದಾರೆ. ಅವರಿಗೆ ತೊಂದರೆಯಾಗಿದ್ದು ನಾನು ಮೊದಲು ಅವರಲ್ಲಿ ಕ್ಷಮೆಯಾಚಿಸುತ್ತೇನೆ.ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ. ಇದು ಜನಾಭಿಪ್ರಾಯದ ಮೂಲಕ ಬಂದ ಸರ್ಕಾರವಲ್ಲ. ನಮ್ಮ ಕಾಂಗ್ರೆಸ್ ಶಾಸಕರನ್ನು ವಾಮಾ ಮಾರ್ಗದ ಮೂಲಕ ಖರೀದೀಸಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರದ ಪ್ರತಿಯೊಂದು ಕೆಲಸದಲ್ಲೂ ಬಿಜೆಪಿ ಸರ್ಕಾರ 40% ಭ್ರಷ್ಟಾಚಾರವನ್ನು ಮಾಡಿದೆ. ಇದೇ ಕಾರಣಕ್ಕೆ ಇಡೀ ದೇಶದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ಹೆಸರು ಬಂದಿದೆ. ಗುತ್ತಿಗೆದಾರರ ಸಂಘ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಇದೊಂದು 40% ಕಮಿಷನ್ ಸರ್ಕಾರ ಅಂತ ನೇರವಾಗಿ ಆರೋಪಿಸಿದ್ದಾರೆ. ಆದರೆ ಪ್ರಧಾನಿ ಅವರು ಮಾತ್ರ ಈ ಪತ್ರಕ್ಕೆ ಇದುವರೆಗೂ ಉತ್ತರಿಸಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ನಿಶ್ಚಿತ. ಇದನ್ನು ಯಾರಿಂದಲೂ ಯಾವ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಅವರಿಗೆ 40 ಸಂಖ್ಯೆ ಎಂಬುದು ಬಹಳ ಇಷ್ಟವಾದ ಮತ್ತು ಪ್ರೀತಿಯ ಸಂಖ್ಯೆ. ರಾಜ್ಯದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸೀಟು ಮಾತ್ರ ನೀಡುತ್ತಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ 150 ಸೀಟು ಖಂಡಿತವಾಗಿಯೂ ಕರ್ನಾಟಕದ ಜನತೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೇ.10 ರಂದು ಮತದಾನ ಮಾಡಲು ಕಾರ್ಮಿಕರಿಗೆ ವೇತನ ಸಹಿತ ರಜೆ

ಕಳೆದ ಮೂರು ವರ್ಷಗಳ ರಾಜ್ಯದ ಬಿಜೆಪಿ ಲೂಟಿ ಹೊಡೆತ್ತಿದೆ. ಪ್ರತಿ ಕೆಲಸದಲ್ಲೂ ¬40% ಕಮಿಷನ್ ಪಡೆದಿದ್ದಾರೆ. ನಿಮಗೆ ಗೊತ್ತಿರಬಹುದು 1999 ರಲ್ಲಿ ಆರ್ಟಿಕಲ್ 371J ಗೆ ತಿದ್ದುಪಡಿಯನ್ನು ಮಾಡಕ್ಕೆ ಅಂದಿನ ಉಪಪ್ರಧಾನಿ ಅಡ್ವಾಣೀ ಅವರು ಅಂದು ವಿರೋಧಿಸಿದ್ದರು. ನಮ್ಮ ಸರ್ಕಾರ ಬಂದ ತಕ್ಷಣವೇ ಆರ್ಟಿಕಲ್ 371J ತಿದ್ದುಪಡಿ ಮಾಡಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಅದರಿಂದ ನಾವು ಈ ಭಾಗದಲ್ಲಿ ಸಾವಿರಾರು ಡಾಕ್ಟರ್ಸ್ , ಇಂಜಿನಿಯರ್ಸ್, ವಕೀಲರು ಸೇರಿ ಅನೇಕ ವೃತ್ತಿಪರರಿಗೆ ಬಹಳಷ್ಟು ಉದ್ಯೋಗವಾಕಶಗಳನ್ನು ಸೃಷ್ಟಿ ಮಾಡಿದ್ದೇವೆ. ಆರ್ಟಿಕಲ್ 371J ತಿದ್ದುಪಡಿಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದಂತೆ ಭ್ರಷ್ಟ ಬಿಜೆಪಿ ಸರ್ಕಾರ ಅನುಷ್ಠಾನವನ್ನು ಮಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಜೆಟ್ ನಲ್ಲಿ ನೀಡಿದ್ದ 3000 ಕೋಟಿ ಏನು ಅವರು ಅನುದಾನದಲ್ಲಿ ಅವರು ಕೇವಲ 1100 ಕೋಟಿ ಮಾತ್ರ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Karnataka Election 2023: ಯತ್ನಾಳರ ‘ವಿಷಕನ್ಯೆ’ ಹೇಳಿಕೆಗೆ ಪ್ರಧಾನಿ ಮೋದಿ ಒಪ್ಪಿಗೆ ಇರಬಹುದೇನೋ? ಕಾಂಗ್ರೆಸ್

ಈ ಭಾಗದ ಜನರಿಗೆ ಸಿಗಬೇಕಿದ್ದ ಸುಮಾರು 50,000 ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 50,000 ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈ ಭಾಗದಲ್ಲಿ ವಿಶೇಷವಾಗಿ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುತ್ತೇವೆ. ಈ ಭಾಗದಲ್ಲಿ ಐಐಟಿ  ಮತ್ತು ಐಐಎಂಗಳ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳನ್ನು ಈ ಭಾಗದಲ್ಲಿ ನಾವು ತರುತ್ತೇವೆ.  ಪ್ರತಿ ವರ್ಷ ನಮ್ಮ ಸರ್ಕಾರದಿಂದ ಈ ಭಾಗಕ್ಕೆ 5000 ಕೋಟಿ ರೂ. ಅನುದಾನವನ್ನು ನೀಡುತ್ತೇವೆ. ಪ್ರತಿ ಗ್ರಾಮ ಪಂಚಾಯತಿಗೆ ನಾವು 1 ಕೋಟಿ ಅನುದಾನ ಕೊಟ್ಟು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುತ್ತೇವೆ ಎಂದು ಭರವಸೆ ನೀಡಿದರು.

ನಮ್ಮ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ನಾವು ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ.  ಈಗಾಗಲೇ ಕಾಂಗ್ರೆಸ್ ಪಕ್ಷ  ಗೃಹಜ್ಯೋತಿ - 200 ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ - ಪ್ರತಿ ಮನೆ ಯಜಮಾನಿಗೆ ಮಾಸಿಕ 2000 ರೂ., ಅನ್ನಭಾಗ್ಯ- ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಯುವ ನಿಧಿ - ಪದವೀಧರರಿಗೆ 3000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ, ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುತ್ತೇವೆ. ಈ ಐದೂ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುತ್ತದೆ. ಕಾಂಗ್ರೆಸ್ ಬಿಟ್ರೆ ಬೇರೆ ಯಾರಿಗೂ ಈ ಆಶ್ವಾಸನೆಯನ್ನು ಈಡೇರಿಸಲು ಸಾಧ್ಯವಿಲ್ಲ. ನಮ್ಮ ಪಕ್ಷ ದೀನದಲಿತರ , ಬಡವರ, ರೈತರ ಮತ್ತು ಅಲ್ಪಸಂಖ್ಯಾತರ ಮತ್ತು ಹಿಂದುಳಿದವರ ಜನಪರ ಸರ್ಕಾರವಾಗಿರುತ್ತದೆ ಎಂದು ಹೇಳಿದರು 

 ಇದನ್ನೂ ಓದಿ: ದಲಿತರು, ಹಿಂದುಳಿದವರು ಭಿಕ್ಷುಕರೇ?: ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಧಾರಕಾರ ಮಳೆ ಸುರಿಯುತ್ತಿದ್ದರೂ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಹಳ್ಳಿಯಿಂದ ಬಂದ ನಿಮಗೆಲ್ಲರಿಗೂ ನನ್ನ ಕೃತಜ್ಞತೆಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಈ ಬಾರಿಯ ಚುನಾವಣೆಯಲ್ಲಿ 150 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಗೆ ಅಧಿಕಾರ ಕೊಟ್ಟರೆ, 40% ಪರ್ಸೆಂಟ್ ಭ್ರಷ್ಠಾಚಾರಕ್ಕೆ ಮತ್ತೇ ಅವಕಾಶ ಮಾಡಿಕೊಟ್ಟಂತೆ. ಬಿಜೆಪಿ ದುಡ್ಡು, ಆಮಿಷವನ್ನು ಓಡ್ಡುತ್ತಾರೆ. ಆ ಎಲ್ಲ ಆಮಿಷಕ್ಕೆ ನೀವು ಬಲಿಯಾಗಬೇಡಿ. ಸಿಎಂ ಹುದ್ದೆ 2500 ಕೋಟಿಗೆ ಮಾರಾಟಕ್ಕಿದೆ ಎಂದು ಬಿಜೆಪಿ ಶಾಸಕರೊಬ್ಬರು ಹಿಂದೆ ಹೇಳಿದ್ದರು.  ಇದು ಇವರ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ. ತಾವು ಬಿಜೆಪಿ ಅವರಿಗೆ 40 ಸೀಟುಗಳು ಮಾತ್ರ ಗೆಲ್ಲಿಸಿ ಆದರೆ ಕಾಂಗ್ರೆಸ್ ಪಕ್ಷಕ್ಕೆ150 ಸೀಟುಗಳನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇದು ಬಡಜನರ , ರೈತರ, ಬೀದಿವ್ಯಾಪಾರಿಗಳ, ದೀನದಲಿತರ  ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಸರ್ಕಾರವಾಗಿರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3Lw

 

 

 

Trending News