ಬೆಂಗಳೂರು: ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಹೇಳುತ್ತಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. #ಲಿಂಗಾಯತವಿರೋಧಿಬಿಜೆಪಿ ಹ್ಯಾಶ್‍ಟ್ಯಾಗ್ ಬಳಸಿ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.
‘ಲಿಂಗಾಯತ ನಾಯಕರನ್ನು ತುಳಿಯುತ್ತಿರುವ ಬಿಜೆಪಿ ವಿರುದ್ಧ ತಿರುಗಿಬಿದ್ದ ಲಿಂಗಾಯತರ ಕಿವಿ ಮೇಲೆ ಹೂವಿಡಲು ಲಿಂಗಾಯತರನ್ನೇ ಸಿಎಂ ಮಾಡುತ್ತೇವೆ ಎನ್ನುತ್ತಿದ್ದಾರೆ ಬಿಜೆಪಿಗರು. ಆದರೆ ಮುಂದೆಯೂ ಬಸವರಾಜ್ ಬೊಮ್ಮಾಯಿಯವರೇ ಸಿಎಂ ಅಭ್ಯರ್ಥಿ ಎಂದು ಹೇಳುತ್ತಿಲ್ಲವೇಕೆ? ಇದರರ್ಥ ಬೊಮ್ಮಾಯಿಯವರನ್ನೂ ಮೂಲೆಗೆ ತಳ್ಳುವುದು ನಿಶ್ಚಿತ’ವೆಂದು ಕಾಂಗ್ರೆಸ್ ಟೀಕಿಸಿದೆ.
ಲಿಂಗಾಯತ ನಾಯಕರನ್ನು ತುಳಿಯುತ್ತಿರುವ ಬಿಜೆಪಿ ವಿರುದ್ಧ ತಿರುಗಿಬಿದ್ದ ಲಿಂಗಾಯತರ ಕಿವಿ ಮೇಲೆ ಹೂವಿಡಲು ಲಿಂಗಾಯತರನ್ನೇ ಸಿಎಂ ಮಾಡುತ್ತೇವೆ ಎನ್ನುತ್ತಿದ್ದಾರೆ ಬಿಜೆಪಿಗರು.
ಆದರೆ
ಮುಂದೆಯೂ @BSBommai ಅವರೇ ಸಿಎಂ ಅಭ್ಯರ್ಥಿ ಎಂದು ಹೇಳುತ್ತಿಲ್ಲವೇಕೆ? ಇದರರ್ಥ ಬೊಮ್ಮಾಯಿಯವರನ್ನೂ ಮೂಲೆಗೆ ತಳ್ಳುವುದು ನಿಶ್ಚಿತ.#ಲಿಂಗಾಯತವಿರೋಧಿಬಿಜೆಪಿ— Karnataka Congress (@INCKarnataka) April 18, 2023
ಇದನ್ನೂ ಓದಿ: ಹ್ಯಾಟ್ರಿಕ್ ಶಾಸಕ ನರೇಂದ್ರ 17 ಕೋಟಿ ಒಡೆಯ: ಮಗನಿಗಿದೆ 1.7 ಲಕ್ಷ ಸಾಲ
ಬಿಜೆಪಿಯ ಲಿಂಗಾಯತ ವಿರೋಧಿ ನೀತಿ ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರವಲ್ಲ, ಅದು ಮನುವಾದ vs ಬಸವ ತತ್ವದ ಸೈದ್ದಂತಿಕ ಸಂಘರ್ಷದ ದ್ವೇಷ.
ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ಪ್ರಧಾನಿ @narendramodi ಅವರಿಗೆ ಸಿದ್ದಗಂಗಾ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಬರಲು ಸಮಯವಿರಲಿಲ್ಲವೇ?#ಲಿಂಗಾಯತವಿರೋಧಿಬಿಜೆಪಿ
— Karnataka Congress (@INCKarnataka) April 18, 2023
‘ಬಿಜೆಪಿಯ ಲಿಂಗಾಯತ ವಿರೋಧಿ ನೀತಿ ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರವಲ್ಲ, ಅದು ಮನುವಾದ vs ಬಸವ ತತ್ವದ ಸೈದ್ದಂತಿಕ ಸಂಘರ್ಷದ ದ್ವೇಷ. ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ಪ್ರಧಾನಿ ಮೋದಿಯವರಿಗೆ ಸಿದ್ದಗಂಗಾ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಬರಲು ಸಮಯವಿರಲಿಲ್ಲವೇ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲೂ ಕುಟುಂಬ ರಾಜಕಾರಣದ ಕೂಸಿಗೆ ಆರೈಕೆ ಮಾಡಿ ಬೆಳೆಸಲಾಗಿದೆ.
ವಂಶಪಾರಂಪರ್ಯದ ಹಕ್ಕು ಎಂಬಂತೆ ಟಿಕೆಟ್ ಹಂಚಿಕೆ ಮಾಡಿ ಇತರ ಪಕ್ಷಗಳತ್ತ ಬೆರಳು ತೋರಿಸುವುದು @BJP4Karnataka ಬಂಡತನಕ್ಕೆ ಸಾಕ್ಷಿ.
ಅಭ್ಯರ್ಥಿಗಳ ಆಯ್ಕೆಗೆ ಕಾರ್ಯಕರ್ತರ ಮತದಾನ ಮಾಡಿಸಿದ್ದು ಒಂದು ಡೋಂಗಿ ನಾಟಕವಲ್ಲವೇ @nalinkateel?
— Karnataka Congress (@INCKarnataka) April 18, 2023
‘ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿಯಲ್ಲೂ ಕುಟುಂಬ ರಾಜಕಾರಣದ ಕೂಸಿಗೆ ಆರೈಕೆ ಮಾಡಿ ಬೆಳೆಸಲಾಗಿದೆ. ವಂಶಪಾರಂಪರ್ಯದ ಹಕ್ಕು ಎಂಬಂತೆ ಟಿಕೆಟ್ ಹಂಚಿಕೆ ಮಾಡಿ ಇತರ ಪಕ್ಷಗಳತ್ತ ಬೆರಳು ತೋರಿಸುವುದು ಬಿಜೆಪಿ ಬಂಡತನಕ್ಕೆ ಸಾಕ್ಷಿ. ಅಭ್ಯರ್ಥಿಗಳ ಆಯ್ಕೆಗೆ ಕಾರ್ಯಕರ್ತರ ಮತದಾನ ಮಾಡಿಸಿದ್ದು ಒಂದು ಡೋಂಗಿ ನಾಟಕವಲ್ಲವೇ ನಳೀನ್ ಕುಮಾರ್ ಕಟೀಲ್ ಅವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: Karnataka Assembly Election: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.