ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ!: ಕಾಂಗ್ರೆಸ್ ವ್ಯಂಗ್ಯ

ಲಕ್ಷ್ಮಣ ಸವದಿ ಹೇಳಿಕೆಯನ್ನು ಟೀಕಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಿಜಾಬ್ ಗಲಾಟೆ, ವ್ಯಾಪಾರ ಬಹಿಷ್ಕಾರ, ಕೋಮು ಬೆಂಕಿ ಹಚ್ಚುವಾಗ ಇಲ್ಲದ ಪ್ರೀತಿ ಈಗ ಬಂದಿದೆ! ಎಂದು ಕುಟಿಕಿದೆ.

Written by - Puttaraj K Alur | Last Updated : Mar 19, 2023, 09:04 PM IST
  • ಮುಸ್ಲಿಂ ಸಮಾಜದವರು ನನ್ನ ಹೃದಯದಲ್ಲಿದ್ದಾರೆಂಬ ಲಕ್ಷ್ಮಣ ಸವದಿ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯ
  • ಈಗ ಬಿಜೆಪಿಯ ಒಬ್ಬೊಬ್ಬರೇ ನಾಯಕರು ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ!
  • ಬಿಜೆಪಿ ಇದು ನಿಮ್ಮ ಓಲೈಕೆ ರಾಜಕಾರಣದ ವ್ಯಾಖ್ಯಾನದೊಳಗೆ ಬರುವುದಿಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನೆ
ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ!: ಕಾಂಗ್ರೆಸ್ ವ್ಯಂಗ್ಯ   title=
ಲಕ್ಷ್ಮಣ ಸವದಿ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯ!

ಬೆಂಗಳೂರು: ‘ಮುಸ್ಲಿಂ ಸಮಾಜದವರು ನನ್ನ ಹೃದಯದಲ್ಲಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕೆ ಅವರ ಅಭಿಪ್ರಾಯವೂ ಮುಖ್ಯ’ ಎಂಬ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಲಕ್ಷ್ಮಣ ಸವದಿ ಹೇಳಿಕೆಯನ್ನು ಟೀಕಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಿಜಾಬ್ ಗಲಾಟೆ, ವ್ಯಾಪಾರ ಬಹಿಷ್ಕಾರ, ಕೋಮು ಬೆಂಕಿ ಹಚ್ಚುವಾಗ ಇಲ್ಲದ ಪ್ರೀತಿ ಈಗ ಬಂದಿದೆ!’ ಎಂದು ಕುಟಿಕಿದೆ.

ಇದನ್ನೂ ಓದಿ: Randeep Surjewala : 'ನಾಳೆ ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ'

‘ಈಗ ಬಿಜೆಪಿಯ ಒಬ್ಬೊಬ್ಬರೇ ನಾಯಕರು ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ! ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ! ಬಿಜೆಪಿ ಇದು ನಿಮ್ಮ ಓಲೈಕೆ ರಾಜಕಾರಣದ ವ್ಯಾಖ್ಯಾನದೊಳಗೆ ಬರುವುದಿಲ್ಲವೇ?’ ಎಂದು ಪ್ರಶ್ನಿಸಿದೆ.

'ನನಗೆ ಯಾವಾಗಲೂ ಬೆಂಬಲವಾಗಿ ನಿಲ್ಲಬೇಕು'

ಅಥಣಿಯಲ್ಲಿ ಶನಿವಾರ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಲಕ್ಷ್ಮಣ ಸವದಿ, ‘ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಹೀಗಾಗಿ ನಾನು ಮಾರ್ಚ್‌ 27ರಂದು ಎಲ್ಲಾ ಸಮುದಾಯದವರ ಒಪ್ಪಿಗೆ ಪಡೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ಮುಸ್ಲಿಂ ಸಮಾಜದವರ ಅಭಿಪ್ರಾಯವೂ ನನಗೆ ಬೇಕು. ನೀವು ನನಗೆ ಯಾವಾಗಲೂ ಬೆಂಬಲವಾಗಿ ನಿಲ್ಲಬೇಕು’ ಎಂದು ಹೇಳಿದ್ದರು.

ಇದನ್ನೂ ಓದಿ: 78 ಯೋಜನೆಗಳ 5298.69 ಕೋಟಿ ರೂ. ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News