ಬಿಜೆಪಿ ಮುಕ್ತ ಮಾಡಲು ಕನ್ನಡಿಗರೇ ಶಪಥ ಮಾಡಿದ್ದಾರೆ: ಕಾಂಗ್ರೆಸ್

Karnataka Assembly Election 2023: ದುರಾಡಳಿತ, ಭ್ರಷ್ಟಾಚಾರದಿಂದ ಮಡುಗಟ್ಟಿದ್ದ ಜನಾಕ್ರೋಶ ಈಗ ಹೊರಬರುತ್ತಿದೆ. ಬಿಜೆಪಿ ಮುಕ್ತ ಮಾಡಲು ಕನ್ನಡಿಗರೇ ಶಪಥ ಮಾಡಿಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ​

Written by - Zee Kannada News Desk | Last Updated : Apr 18, 2023, 08:01 PM IST
  • ದಿನದಿನಕ್ಕೂ ಕಾಂಗ್ರೆಸ್ ಪರ ಬೆಂಬಲ ಹೆಚ್ಚುತ್ತಿದ್ದು, ಪ್ರತಿ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಪರ ಅಲೆ ಹೆಚ್ಚುತ್ತಿದೆ.
  • ಬಿಜೆಪಿಯ ಭ್ರಷ್ಟಾಚಾರ, ಹುದ್ದೆಗಳ ಮಾರಾಟ, ಕಮಿಷನ್ ಲೂಟಿ, ನಿರುದ್ಯೋಗದಿಂದ ಜನರು ಬೇಸತ್ತಿದ್ದಾರೆ
  • ಬೆಲೆ ಏರಿಕೆಯಂತಹ ಜನವಿರೋಧಿ ಆಡಳಿತಕ್ಕೆ ಬೇಸತ್ತ ಕನ್ನಡಿಗರಿಗೆ ಕಾಂಗ್ರೆಸ್ ಭರವಸೆಯಾಗಿದೆ
ಬಿಜೆಪಿ ಮುಕ್ತ ಮಾಡಲು ಕನ್ನಡಿಗರೇ ಶಪಥ ಮಾಡಿದ್ದಾರೆ: ಕಾಂಗ್ರೆಸ್  title=
ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ದುರಾಡಳಿತ, ಭ್ರಷ್ಟಾಚಾರದಿಂದ ಮಡುಗಟ್ಟಿದ್ದ ಜನಾಕ್ರೋಶ ಈಗ ಹೊರಬರುತ್ತಿದೆ. ಬಿಜೆಪಿ ಮುಕ್ತ ಮಾಡಲು ಕನ್ನಡಿಗರೇ ಶಪಥ ಮಾಡಿಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಂಜಾರ ಸಮುದಾಯ ತಮ್ಮ ಊರುಗಳಲ್ಲಿ ಬಿಜೆಪಿ ಪ್ರವೇಶ ನಿಷೇಧಿಸಿದೆ. ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಮುತ್ತಿಗೆ ಹಾಕಲಾಗಿದೆ. ಕಡೂರು ತಾಲೂಕಿನ ಗ್ರಾಮದ ಜನ ಬಿಜೆಪಿ ಪ್ರವೇಶ ನಿಷೇಧಿಸಿದ್ದಾರೆ’ ಎಂದು ಟೀಕಿಸಿದೆ.

‘ದಿನದಿನಕ್ಕೂ ಕಾಂಗ್ರೆಸ್ ಪರ ಬೆಂಬಲ ಹೆಚ್ಚುತ್ತಿದೆ, ಪ್ರತಿ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಪರ ಅಲೆ ಹೆಚ್ಚುತ್ತಿದೆ. ಬಿಜೆಪಿಯ ಭ್ರಷ್ಟಾಚಾರ, ಹುದ್ದೆಗಳ ಮಾರಾಟ, ಕಮಿಷನ್ ಲೂಟಿ, ನಿರುದ್ಯೋಗ, ದ್ವೇಷದ ವಾತಾವರಣ, ಬೆಲೆ ಏರಿಕೆಯಂತಹ ಜನವಿರೋಧಿ ಆಡಳಿತಕ್ಕೆ ಬೇಸತ್ತ ಕನ್ನಡಿಗರಿಗೆ ಕಾಂಗ್ರೆಸ್ ಭರವಸೆಯಾಗಿದೆ’ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಮೀಸಲಾತಿ ಹೆಚ್ಚಳದ ವಿಚಾರ: ಸುಪ್ರೀಂಗೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಅಫಿಡವಿಟ್ ಸಲ್ಲಿಸಲು ವಿಫಲ-ಕಾಂಗ್ರೆಸ್ ಕಿಡಿ 

‘ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ಜಗಜ್ಯೋತಿ ಬಸವಣ್ಣರನ್ನು ಅವಮಾನಿಸಿದ್ದೂ ಅಲ್ಲದೆ ಅಕ್ಕಮಹಾದೇವಿ ಸೇರಿದಂತೆ ಶರಣರ ವಚನಗಳನ್ನು ಪಠ್ಯದಿಂದ ಕೈಬಿಟ್ಟು ಅವಮಾನಿಸಿತ್ತು #ಲಿಂಗಾಯತವಿರೋಧಿಬಿಜೆಪಿ. ಸಮಾನತೆ, ಸಾಮರಸ್ಯವನ್ನು ಸಾರುವ ಲಿಂಗಾಯತ ತತ್ವವೆಂದರೆ ಬಿಜೆಪಿಗೆ ಮೊದಲಿಂದಲೂ ಅಸಹನೆ ಇದೆ. ಈಗ ಆ ಅಸಹನೆ ರಾಜಕೀಯ ನಾಯಕರ ಮೇಲೆ ತಿರುಗಿದೆ’ ಎಂದು ಕಾಂಗ್ರೆಸ್ ಕುಟುಕಿದೆ.

‘ಭೂಮಿ ಮಂಜೂರಾತಿಯಲ್ಲಿನ ತಾರತಮ್ಯ ಬಿಜೆಪಿಯ ಲಿಂಗಾಯತ ವಿರೋಧಿ ನೀತಿಗೆ ಮತ್ತೊಂದು ಸಾಕ್ಷಿಯಾಗಿದೆ. ಜೆಎಸ್‌ಎಸ್ ವಿದ್ಯಾಸಂಸ್ಥೆಗೆ ಶೇ.100ರಷ್ಟು ಹಣ ಪಡೆದು ಭೂಮಿ ಮಂಜೂರು. ಸಂಘಪರಿವಾರದ ರಾಷ್ಟ್ರೋತ್ಥಾನ ಸಂಸ್ಥೆಗೆ ಕೇವಲ 25% ಹಣಕ್ಕೆ ಭೂಮಿ ಮಂಜೂರು. ಲಿಂಗಾಯತ ನಾಯಕರನ್ನಷ್ಟೇ ಅಲ್ಲ ಮಠಮಾನ್ಯಗಳಿಗೂ #ಲಿಂಗಾಯತವಿರೋಧಿಬಿಜೆಪಿ ಅನ್ಯಾಯವೆಸಗಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: Karnataka Assembly Election:ವಿಭಿನ್ನ ರೀತಿಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ : ಯುವಕನ ನಡೆಗೆ ಅಧಿಕಾರಿಗಳಿಂದ ಮೆಚ್ಚುಗೆ !

‘ಗುತ್ತಿಗೆದಾರ ಸಂತೋಷ್ ಪಾಟೀಲ್ ಕಮಿಷನ್ ಕಿರುಕುಳದ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಪ್ರಧಾನಿ ತಿರುಗಿಯೂ ನೋಡಲಿಲ್ಲ. ತನಗಾದ ಅನ್ಯಾಯದ ವಿರುದ್ದದ ಸಂತೋಷ್ ಹೋರಾಟಕ್ಕೆ ಬಿಜೆಪಿ ಸರ್ಕಾರದಲ್ಲಿ ನ್ಯಾಯ ಸಿಗಲಿಲ್ಲ, ಆತ ಲಿಂಗಾಯತ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಆತನನ್ನು ನಿರ್ಲಕ್ಷಿಸಿ ಸಮಾಧಿ ಮಾಡಿತು’ ಎಂದು ಕಾಂಗ್ರೆಸ್ ಕುಟುಕಿದೆ.

ಲಿಂಗಾಯತರ ಮಠಗಳಿಂದ, ಸ್ವಾಮಿಗಳಿಂದ 30% ಕಮಿಷನ್ ಲೂಟಿ ಮಾಡಿದ #ಲಿಂಗಾಯತವಿರೋಧಿಬಿಜೆಪಿ ನಾಯಕರು ಆರೋಪ ಮಾಡಿದ ದಿಂಗಾಲೇಶ್ವರ ಸ್ವಾಮಿಗಳ ವಿರುದ್ಧವೇ ನಾಲಿಗೆ ಹರಿಬಿಟ್ಟಿದ್ದರು. ಬಿಜೆಪಿಯ ಲಿಂಗಾಯತ ವಿರೋಧಿ ಧೋರಣೆ ಯಾರನ್ನೂ ಬಿಟ್ಟಿಲ್ಲ, ಮಠಾಧೀಶರಿಂದ ಹಿಡಿದು ರಾಜಕೀಯ ನಾಯಕರವರೆಗೆ ಲಿಂಗಾಯತ ಸಮುದಾಯವನ್ನು ಹತ್ತಿಕ್ಕಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News