Karnataka Elections 2023 Voting Day : ಮತದಾನ ಮುಕ್ತಾಯ.. ಸ್ಟ್ರಾಂಗ್ ರೂಮ್ ಸೇರಿದ ಅಭ್ಯರ್ಥಿಗಳ ಭವಿಷ್ಯ!

Karnataka Elections 2023 Voting Day Live Updates: ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮೇ 13 ರಂದು ಚುನಾವಣಾ ರಿಸಲ್ಟ್‌ ಲಭ್ಯವಾಗಲಿದೆ. ಅಭ್ಯರ್ಥಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ತಮ್ಮ ಅಮೂಲ್ಯ ಮತ ಚಲಾಯಿಸಿದ್ದಾರೆ.

Written by - Chetana Devarmani | Last Updated : May 10, 2023, 06:10 PM IST
Karnataka Elections 2023 Voting Day : ಮತದಾನ ಮುಕ್ತಾಯ.. ಸ್ಟ್ರಾಂಗ್ ರೂಮ್ ಸೇರಿದ ಅಭ್ಯರ್ಥಿಗಳ ಭವಿಷ್ಯ!
Live Blog

Karnataka Assembly Polls 2023 ​: ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮೇ 13 ರಂದು ಚುನಾವಣಾ ರಿಸಲ್ಟ್‌ ಲಭ್ಯವಾಗಲಿದೆ. ಮತದಾನ ಪ್ರಕ್ರಿಯೆ ಇದೀಗ ಮುಕ್ತಾಯವಾಗಿದೆ. ಅಭ್ಯರ್ಥಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ತಮ್ಮ ಅಮೂಲ್ಯ ಮತ ಚಲಾಯಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. 224 ಕ್ಷೇತ್ರಗಳಲ್ಲಿ 2615 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ಇಂದು ನಡೆಯಿತು. ಮತಗಟ್ಟೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಸುಮಾರು 5.3 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಇಂದು ಮುಂಜಾನೆಯಿಂದಲೇ ಮತದಾರರು ಬಹಳ ಉತ್ಸಾಹದಿಂದ ಬಂದು ಮತದಾನದಲ್ಲಿ ಪಾಲ್ಗೊಂಡರು.

ಮುಂಜಾನೆಯಿಂದಲೇ ಮತಗಟ್ಟೆಗೆ ಮತದಾರರು ಆಗಿಮಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ಮೂಲಕ ತನ್ನ ನೆಚ್ಚಿನ ನಾಯಕ ಅಥವಾ ನಾಯಕಿಗೆ ತಮ್ಮ ಅಮೂಲ್ಯ ಮತವನ್ನು ನೀಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿತ್ತು. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು.

 

10 May, 2023

  • 17:51 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: 6 ಗಂಟೆಗೆ ಮತಗಟ್ಟೆಗಳ ಗೇಟ್ ಕ್ಲೋಸ್

    6 ಗಂಟೆ ನಂತರ ಬರುವ ಮತದಾರರಿಗೆ ಮತದಾನಕ್ಕಿಲ್ಲ ಅವಕಾಶ. ಬೂತ್ ನ ಒಳಗೆ ಇರುವ ಮತದಾರರಿಗೆ ಮಾತ್ರ ಮತದಾನಕ್ಕೆ ಅವಕಾಶ. ಬೆಳ್ಳಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಅವಕಾಶ ನೀಡಿದ್ದ ಚುನಾವಣೆ ಆಯೋಗ. ಒಟ್ಟು 11 ಗಂಟೆಗಳ ಕಾಲ ಅವಕಾಶ ನೀಡಿರುವ ಆಯೋಗ

  • 17:44 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: 5 ಗಂಟೆಯವರೆಗೆ 65.69% ರಷ್ಟು ಮತದಾನ

    ಸಂಜೆ 5 ಗಂಟೆಯವರೆಗೆ 65.69% ರಷ್ಟು ಮತದಾನವಾಗಿದ್ದು, ಇನ್ನೂ ಅರ್ಧ ಗಂಟೆ ಬಾಕಿಯಿದೆ. ಸಂಜೆಯಾದಂತೆ ಜನರು ಹೆಚ್ಚಿನ ಸಂಕ್ಯೆಯಲ್ಲಿ ಮತಗಟ್ಟೆಗೆ ತೆರಳುತ್ತಿದ್ದಾರೆ. ಕಳೆದ ಬಾರಿ 72.13% ರಷ್ಟು ಮತದಾನವಾಗಿತ್ತು. 1952ರ ನಂತರ ಕಳೆದ ಬಾರಿಯೇ ಹೆಚ್ಚಿನ ಮತದಾನವಾಗಿತ್ತು. 

     

     

     

  • 17:35 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮತದಾನ?

    ಬೆಂಗಳೂರು ಕೇಂದ್ರ - 51.20%

    ಚಾಮರಾಜಪೇಟೆ - 48.68%
    ಚಿಕ್ಕಪೇಟೆ - 52.59%
    ಗಾಂಧಿನಗರ - 53.5%
    ರಾಜಾಜೀನಗರ - 52.83%
    ರಾಜರಾಜೇಶ್ವರಿ ನಗರ - 52.8%
    ಶಾಂತಿ ನಗರ - 46.44%
    ಶಿವಾಜಿನಗರ - 51.57%

    ಬೆಂಗಳೂರು ಅರ್ಬನ್ ವಿಧಾನ ಸಭಾ ಕ್ಷೇತ್ರ - 52.81%

    ಆನೇಕಲ್ - 55.76%
    ಬೆಂಗಳೂರು ಸೌಥ್ - 48.98%
    ಬ್ಯಾಟರಾಯನ ಪುರ - 52.98%
    ದಾಸರಹಳ್ಳಿ - 46.68%
    ಮಹಾದೇವ ಪುರ - 50.21%
    ಯಲಹಂಕ - 57.16%
    ಯಶವಂತ ಪುರ - 57.88%

    ಬೆಂಗಳೂರು ಕೇಂದ್ರ ಉತ್ತರ- 50.20%%

    ಸಿವಿ ರಾಮನ್‌ನಗರ - 44.01%
    ಹೆಬ್ಬಾಳ - 51.34%
    ಕೆಆರ್ ಪುರಂ - 53.83%
    ಮಹಾಲಕ್ಷ್ಮಿ ಲೇಔಟ್ - 52.49%
    ಮಲ್ಲೇಶ್ವರಂ - 52.68%
    ಪುಲಕೇಶಿ ನಗರ್ - 48.09%
    ಸರ್ವಜ್ಞ ನಗರ್ - 49.01%

    ಬೆಂಗಳೂರು ದಕ್ಷಿಣ- 49.42%

    ಬಿಟಿಎಮ್ ಲೇಔಟ್ - 46.42%
    ಬಸವನಗುಡಿ- 52.73%
    ಬೊಮ್ಮನಹಳ್ಳಿ - 45.19%
    ಗೋವಿಂದ ರಾಜ್ ನಗರ-49.8%
    ಜಯನಗರ - 53.09%
    ಪದ್ಮನಾಭ ನಗರ- 45.39%
    ವಿಜಯನಗರ - 45.39%

  • 17:34 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: ಮತದಾನ ಪ್ರಕ್ರಿಯೆ ಮುಕ್ತಾಯದ ಬಳಿಕ ಸ್ಟ್ರಾಂಗ್ ರೂಮ್ ಗಳಿಗೆ ವಿವಿ ಪ್ಯಾಟ್ ಶಿಫ್ಟ್

    ಪೊಲೀಸ್ ಭದ್ರತೆ ಯಲ್ಲಿ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ ಸೇರಲಿದೆ. ಮೇ 13 ರಂದು ವಿವಿ ಪ್ಯಾಟ್ ಓಪನ್ ಆಗಲಿವೆ. ಈಗಾಗಲೇ ನಿಗದಿ ಮಾಡಿರುವ ಸ್ಟ್ರಾಂಗ್ ರೂಮ್ ಗಳಿಗೆ ರವಾನೆಯಾಗಲಿದೆ. ವಿವಿ ಪ್ಯಾಟ್ ಚೆಕ್ ಮಾಡಿ ಬಳಿಕ ಅವುಗಳನ್ನು ಅಧಿಕಾರಿಗಳು ಸ್ಟ್ರಾಂಗ್ ರೂಮ್ ನಲ್ಲಿ ಇಡಲಿದ್ದಾರೆ. ಸ್ಟ್ರಾಂಗ್ ರೂಮ್ ಗೆ ಮೂರು ಹಂತದ ಭದ್ರತೆ ಕಲ್ಪಿಸಲಾಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ವಿವಿಪ್ಯಾಟ್ ಗಳಿಗೆ 4 ಸ್ಟ್ರಾಂಗ್ ರೂಮ್ ರಚನೆ ಮಾಡಲಾಗಿದೆ. 

    1. ಬೆಂಗಳೂರು ಸೆಂಟ್ರಲ್ - BMS ಕಾಲೇಜ್ ಬಸವನಗುಡಿ

    • RR ನಗರ
    • ಶಿವಾಜಿನಗರ
    • ಶಾಂತಿನಗರ
    • ಗಾಂಧಿನಗರ
    • ರಾಜಾಜಿನಗರ
    • ಚಾಮರಾಜಪೇಟೆ
    • ಚಿಕ್ಕಪೇಟೆ

    2. ಬೆಂಗಳೂರು ದಕ್ಷಿಣ - SSMRV ಕಾಲೇಜ್ ಜಯನಗರ

    • ಗೋವಿದರಾಜ್ ನಗರ 
    • ವಿಜಯನಗರ
    • ಬಸವನಗುಡಿ
    • ಪದ್ಮನಾಭನಗರ
    • ಬಿಟಿಎಮ್ ಲೇಔಟ್ 
    • ಜಯನಗರ
    • ಬೊಮ್ಮನಹಳ್ಳಿ

    3. ಬೆಂಗಳೂರು ಉತ್ತರ - ಮೌಂಟ್ ಕಾರ್ಮಲ್ ಕಾಲೇಜ್ ವಸಂತನಗರ

    • ಕೆ ಅರ್ ಪುರಂ
    • ಮಾಹಾಲಕ್ಷ್ಮಿ ಲೇಔಟ್
    • ಮಲ್ಲೇಶ್ವರಂ
    • ಹೆಬ್ಬಾಳ
    • ಪುಲಕೇಶಿನಗರ
    • ಸರ್ವಜ್ಞನಗರ
    • ಸಿ ವಿ ರಾಮನ್ ನಗರ

    4. ಬೆಂಗಳೂರು - ನಗರ ( Urabn)  ಸೆಂಟ್ ಜೋಷಫ್ ಕಾಲೇಜ್ ವಿಟಲ್ ಮಲ್ಯಾ ರಸ್ತೆ

    • ಯಲಹಂಕ
    • ಬ್ಯಾಟರಾಯನಪುರ
    • ಯಶವಂತಪುರ
    • ದಾಸರಹಳ್ಳಿ
    • ಮಾಹದೇವಪುರ
    • ಬೆಂಗಳೂರು ದಕ್ಷಿಣ
    • ಆನೆಕಲ್

  • 17:25 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: ಮತದಾನಕ್ಕೆ ಒಂದು ಗಂಟೆ ಬಾಕಿ

    ಮತದಾನಕ್ಕೆ ಒಂದು ಗಂಟೆ ಬಾಕಿ. ಆರು ಗಂಟೆಗೆ ಮತದಾನ ಮುಕ್ತಾಯ. ಕೆಲವೆಡೆ ಬಿರುಸಿನ ಮತದಾನ ಶುರು. ಆರು ಗಂಟೆಯ ನಂತರ ಮತದಾನ ಮಾಡೋದಕ್ಕೆ ಅವಕಾಶವಿಲ್ಲ. ಪೊಲೀಸರ ಭದ್ರತೆಯಲ್ಲಿ ಆರು ಗಂಟೆಯ ನಂತರ ಇವಿಎಂ ಮಿಷನ್ ರವಾನೆ. ಈಗಾಗಲೇ ಸೆಂಟರ್ ಗಳನ್ನು ಗುರುತಿಸಲಾಗಿದೆ. 

  • 17:21 PM

    Karnataka Elections 2023 ಮತ ಚಲಾಯಿಸಿದ ಮಂಜಮ್ಮ ಜೋಗತಿ 

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಜಾನಪದ ಕಲಾವಿದರು ಹಾಗೂ ಚುನಾವಣಾ ರಾಯಭಾರಿಯಾದ ಮಂಜಮ್ಮ ಜೋಗತಿ ಅವರು ಮತ ಚಲಾಯಿಸಿದರು. 

     

     

  • 16:42 PM

    Chikkamagaluru Election Live: ಬೂತ್ ಮುಂದೆ ಜಗಳ, ಹೊರಗಡೆ ಬರ್ಥ್ ಡೇ ಆಚರಣೆ
     
    ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಹುಟ್ಟುಹಬ್ಬ ಆಚರಣೆ. ರಸ್ತೆ ಮಧ್ಯೆಯೇ ಹುಟ್ಟು ಹಬ್ಬ ಆಚರಿಸಿದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಘಟನೆ. ಇಂದು ಬಿಜೆಪಿ ಕಾರ್ಯಕರ್ತ ಪೂರ್ಣೇಶ್ ಹುಟ್ಟುಹಬ್ಬ. ಚುನಾವಣಾ ಬ್ಯುಸಿ‌ ಮಧ್ಯೆಯೂ ಎಲ್ಲರೂ ಸೇರಿ ಬರ್ಥ್ ಡೇ ಆಚರಣೆ. ಎಲ್ಲರೂ ಸೇರಿ ಕೇಕ್‌ ಕತ್ತರಿಸಿ, ಕೇಕ್ ತಿನ್ನಿಸಿ ಹುಟ್ಟು ಹಬ್ಬ ಆಚರಣೆ

  • 16:18 PM

    "ನಾನು ಈಗಷ್ಟೇ  ಪ್ರಗತಿಪರ,ಸಮೃದ್ಧ ಮತ್ತು ಶಾಂತಿಯುತ ಕರ್ನಾಟಕಕ್ಕಾಗಿ ಮತ ಹಾಕಿದ್ದೇನೆ"-ಇತಿಹಾಸಕಾರ ರಾಮಚಂದ್ರ ಗುಹಾ 

  • 15:56 PM

    ಬೆಂಗಳೂರಿನ ಜಯನಗರದಲ್ಲಿ ಮತದಾನ ಮಾಡಿದ ನಂತರ ಯುವ ಮತದಾರರಿಗೆ ಸಂದೇಶ ನೀಡಿದ ಸುಧಾ ಮೂರ್ತಿ; "ದಯವಿಟ್ಟು ನಮ್ಮನ್ನು ನೋಡಿ. ನಾವು ವಯಸ್ಸಾದವರು ಆದರೆ ನಾವು 6 ಗಂಟೆಗೆ ಎದ್ದು ಇಲ್ಲಿಗೆ ಬಂದು ಮತ ಚಲಾಯಿಸಿ. ದಯವಿಟ್ಟು ನಮ್ಮಿಂದ ಕಲಿಯಿರಿ. ಮತದಾನ ಪ್ರಜಾಪ್ರಭುತ್ವದ ಪವಿತ್ರ ಭಾಗ..." ಎಂದು ಹೇಳಿದರು.

  • 15:49 PM

    ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದಾದ್ಯಂತ ಶೇ.52.03ರಷ್ಟು ಮತದಾನವಾಗಿದೆ.

  • 15:38 PM

    Bengaluru Election Live: 95 ವರ್ಷದ ಸೀತಮ್ಮ ಅವರಿಂದ ಮತದಾನ 

    ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಅವರ ತಾಯಿ 95 ವರ್ಷದ ಸೀತಮ್ಮ ಅವರು ಮತದಾನ ಮಾಡುವ ಮೂಲಕ ಮಾದರಿಯಾದರು. ಬಿಟಿಎಂ ಲೇಔಟ್‌ನ ಮತಗಟ್ಟೆ ಸಂಖ್ಯೆ 202ರ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೊಠಡಿ ಸಂಖ್ಯೆ 1ರಲ್ಲಿ ಮತದಾನ ಮಾಡಿದರು. 
     

     

  • 15:36 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: ಅಧಿಕಾರಿಗಳ ವಿರುದ್ಧ ಆಕ್ರೋಶ

    ಹತ್ತು ವರ್ಷದ ಹಿಂದೆ ಮೃತರಾಗಿರುವ ತಂದೆಯ ಹೆಸ್ರು ವೋಟರ್ ಲಿಸ್ಟ್ ನಲ್ಲಿದೆ. ಆದರೆ ಮಗನ ಹೆಸ್ರು ಮಿಸ್ಸಿಂಗ್. ಅಧಿಕಾರಿಗಳ ವಿರುದ್ಧ ಆಕ್ರೋಶ. ಬದುಕಿರುವವರ ಹೆಸರು ಡಿಲೀಟ್ ಆಗುತ್ತೆ, ಸತ್ತವರ ಹೆಸ್ರು ಇರುತ್ತೆ ಅಂತಾ ಆಕ್ರೋಶ. ಜಯನಗರದ ಮತಗಟ್ಟೆಯಲ್ಲಿ ಘಟನೆ. 

  • 15:21 PM

    ಬಸವನ ಬಾಗೇವಾಡಿ ಮತಕ್ಷೇತ್ರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಂಕರ ನಗರ ಕೂಡಗಿ ಎಲ್ ಟಿ ಯ ಲಂಬಾಣಿ ಜನಾಂಗದ ಮಾದರಿಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ವಯೋವ್ರುದ್ಧೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

     

  • 15:19 PM

    Bengaluru Election Live: ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

    ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ. ಬಿಟಿಎಂ ಲೇಔಟ್ ವಿಧಾನಸಭೆಯ ಲಕ್ಕಸಂದ್ರ ವಾರ್ಡ್ ನಲ್ಲಿ ಗಲಾಟೆ. ಮತದಾನದ ಚೀಟಿ ಬರೆದುಕೊಡುವ ವಿಚಾರವಾಗಿ ಗಲಾಟೆ

  • 15:07 PM

    ನಿವೃತ್ತ ಅಂತರಾಷ್ಟ್ರೀಯ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಅವರು ಮೈಸೂರಿನ ಕುವೆಂಪು ನಗರದಲ್ಲಿ ಮತ ಚಲಾಯಿಸಿದರು.

  • 14:45 PM

    ಕಲಘಟಗಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 105 ಥೀಮ್ ಆಧಾರಿತ ಮತದಾನ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಲಂಬಾಣಿ ವೇಷ ಭೂಷಣ ಧರಿಸಿ ವಿಶೇಷ ರೀತಿಯಲ್ಲಿ ಮತದಾರರನ್ನು ಆಕರ್ಷಿಸುವ ಕೆಲಸ ಮಾಡಿದ್ದಾರೆ.

  • 14:41 PM

    ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಬೇತೂರು ಹಳ್ಳಿಯಲ್ಲಿ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬಕ್ಕೆ ಮೆರಗು ತಂದಿದ್ದಾರೆ.

  • 14:40 PM

    Bengaluru Election Live:  ಮತದಾನ ಮಾಡಿದವರಿಗೆ ಫ್ರೀ ದೋಸೆ ಆಫರ್

    ನಿಸರ್ಗ ಹೊಟೇಲ್ ನಲ್ಲಿ ಮತದಾನ ಮಾಡಿದವರಿಗೆ ಫ್ರೀ ದೋಸೆ ಆಫರ್ ನೀಡಲಾಗಿದೆ. ಮತದಾರರು ವೋಟ್ ಹಾಕಿ ಬೆಣ್ಣೆ ದೋಸೆ ಸವಿದರು. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೊಟೇಲ್. ಮತದಾನ ಮಾಡಿದವರಿಗೆ ಬೆಣ್ಣೆದೋಸೆ, ಮೈಸೂರ್ ಪಾಕ್ ಆಫರ್. ಮೊದಲು ಬಂದ 100 ಯುವ ಮತದಾರರಿಗೆ ಫಿಲ್ಮಂ ಟಿಕೆಟ್ ಆಫರ್. ಮತದಾನ ಉತ್ತೇಜಿಸಲು ಈ ಆಫರ್ ನೀಡಿದ್ದ ಹೊಟೇಲ್. ಮತದಾನ ಮಾಡಿ ಹೊಟೇಲ್ ನತ್ತ ಮುಖಮಾಡ್ತಿರೋ ಮತದಾರರು. 

  • 14:36 PM

    ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆ ವರೆಗೆ 6,86,318 ಜನ ಮತ ಚಲಾಯಿಸಿದ್ದು, ಶೇ.30.94 ರಷ್ಟು ಮತದಾನ

  • 14:31 PM

    ಕಡೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 101 ರಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವಕ ಯುವತಿಯರಿಗೆ ಚುನಾವಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳ ವತಿಯಿಂದ ಸರ್ಟಿಫಿಕೇಟ್ಸ್ ನೀಡಲಾಯಿತು.

  • 14:29 PM

    Karnataka Assembly Election 2023: ಈವರೆಗೆ ರಾಜ್ಯದಲ್ಲಿ ಎಷ್ಟು ಮತದಾನವಾಗಿದೆ? 

    ಬೆಂಗಳೂರು ಕೇಂದ್ರ 29.41%, ಬೆಂಗಳೂರು ಉತ್ತರ 29.90%, ಬೆಂಗಳೂರು ದಕ್ಷಿಣ 30.68%, ಬಾಗಲಕೋಟೆ 40.87%, ಬೆಂಗಳೂರು ಗ್ರಾಮಾಂತರ, 40.16% ಬೆಂಗಳೂರು ನಗರ, 31.54%, ಬೆಳಗಾವಿ 37.48%, ಬಳ್ಳಾರಿ 39.74%, ಬೀದರ್ 37.11%, ವಿಜಯಪುರ 36.55%, ಚಾಮರಾಜನಗರ 30.63%, ಚಿಕ್ಕಬಳ್ಳಾಪುರ 40.15%, ಚಿಕ್ಕಮಗಳೂರು 41.00%. ಚಿತ್ರದುರ್ಗ 36.41%, ದಕ್ಷಿಣ ಕನ್ನಡ 44.17%, ದಾವಣಗೆರೆ 38.64%, ಧಾರವಾಡ 36.14%, ಗದಗ 38.98%,  ಕಲಬುರಗಿ 32.69%, ಹಾಸನ 40.84%, ಹಾವೇರಿ 36.74%, ಕೊಡಗು 45.64%, ಕೋಲಾರ 36.87%, ಕೊಪ್ಪಳ 39.94, ಮಂಡ್ಯ 39.38, ಮೈಸೂರು 36.73%, ರಾಯಚೂರು 38.20%, ರಾಮನಗರ 42.52%, ಶಿವಮೊಗ್ಗ 41.02%, ತುಮಕೂರು 40.60%, ಉಡುಪಿ 47.79, ಉತ್ತರ ಕನ್ನಡ ಜಿಲ್ಲೆ 42.43%, ವಿಜಯನಗರ 39.56%, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 35.68ರಷ್ಟು ಮತದಾನವಾಗಿದೆ. 

  • 14:28 PM

    ಮಂಡ್ಯ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ರೈತ ಸಂಘದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

  • 14:27 PM

    Chikkaballapur Election Live: ಮಧ್ಯಾಹ್ನ 1:00 ಗಂಟೆವರೆಗೆ ಚಿಕ್ಕಬಳ್ಳಾಪುರ ಮತದಾನ ವಿವರ

    ಗೌರಿಬಿದನೂರು - 38.87%
    ಬಾಗೇಪಲ್ಲಿ - 43.37%
    ಚಿಕ್ಕಬಳ್ಳಾಪುರ - 42.77%
    ಶಿಡ್ಲಘಟ್ಟ - 37.97%
    ಚಿಂತಾಮಣಿ - 42.00%
    ಒಟ್ಟು -  40.35% 

  • 14:25 PM

    ನಾಗಮಂಗಲದಲ್ಲಿ ಒಕ್ಕಲಿಗ ಮಠದ ನಾಯಕ ನಿರ್ಮಲಾನಂದನಾಥ ಸ್ವಾಮೀಜಿ ಮತ ಚಲಾಯಿಸಿದರು.

  • 14:24 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: ಬೆಂಗಳೂರಿನ ಶೇಕಾಡವಾರು ಮತದಾನ‌ 

    ಬೆಂಗಳೂರು ಕೇಂದ್ರ  - 29.65
    ಚಾಮರಾಜಪೇಟೆ - 28.33%
    ಚಿಕ್ಕಪೇಟೆ - 30.84%
    ಗಾಂಧಿನಗರ - 28.65%
    ರಾಜಾಜೀನಗರ - 32.41%
    ರಾಜರಾಜೇಶ್ವರಿ ನಗರ - 31.72%
    ಶಾಂತಿ ನಗರ - 25.86%
    ಶಿವಾಜಿನಗರ - 29.75%
    ಬೆಂಗಳೂರು ಉತ್ತರ - 30.00%
    ಸಿವಿ ರಾಮನ್‌ನಗರ - 26.85%
    ಹೆಬ್ಬಾಳ - 32.96%
    ಕೆಆರ್ ಪುರಂ - 29.43%
    ಮಹಾಲಕ್ಷ್ಮಿ ಲೇಔಟ್ - 34.26₹
    ಮಲ್ಲೇಶ್ವರಂ - 32.08%
    ಪುಲಕೇಶಿ ನಗರ್ - 28.65%
    ಸರ್ವಜ್ಞ ನಗರ್ - 25.08

  • 14:22 PM

    ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ ಚಲಾಯಿಸಿದರು.

  • 14:22 PM

    ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ ಚಲಾಯಿಸಿದರು.

  • 14:21 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: ವೋಟಿಂಗ್ ಬೂತ್ ಎದುರಲ್ಲೇ ಮಾರಾಮಾರಿ

    ಪದ್ಮನಾಭನಗರ ವೋಟಿಂಗ್ ಬೂತ್ ಎದುರಲ್ಲೇ ಮಾರಾಮಾರಿ. ಪದ್ಮನಾಭನಗರ ಕ್ಷೇತ್ರದ ಪಾಪಯ್ಯ ಗಾರ್ಡನ್ 28, 29 ಬೂತ್ ಬಳಿ ಘಟನೆ. ಎರಡು ಗುಂಪುಗಳ ನಡುವೆ ಗಲಾಟೆ. ಗಾಂಜಾ ಏಟಲ್ಲಿ ಬಂದಿದ್ದ ಸುಮಾರು 30 ಯುವಕರಿಂದ ಹಲ್ಲೆ ಆರೋಪ. ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿರುವ ಗ್ಯಾಂಗ್. ಮಹಿಳೆಯರ ಮೇಲೂ ಹಲ್ಲೆ ನಡೆಸಿರೊ ಪುಂಡರ ಗ್ಯಾಂಗ್‌. ಕಬ್ಬಾಳ್ ಉಮೇಶ್ ಹುಡುಗರನ್ನ ಕರೆಸಿ ಹಲ್ಲೆ ನಡೆಸಿರೊ ಆರೋಪ. ಕಬ್ಬಳ್ ಉಮೇಶ್ ಮಾಜಿ ಕಾರ್ಪೋರೇಟರ್ ಲಕ್ಷ್ಮೀ ಪತಿ. ಮೀನಮ್ಮ ಮತ್ತು ಚನ್ನಪ್ಪ ಎಂಬುವವರಿಂದ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು. ದೂರುಗಳನ್ನು ಪಡೆದು ಪರಿಶೀಲನೆ ನಡೆಸುತ್ತಿರುವ ಪೊಲೀಸರು. ವಿಡಿಯೋ ಫೋಟೇಜ್ ಪಡೆದು ತನಿಖೆ ನಡೆಸ್ತಿರೊ ಪೊಲೀಸರು.

  • 14:18 PM

    " ತಮ್ಮ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಬೇಕು. ನಾನು ಸೆಲೆಬ್ರಿಟಿಯಾಗಿ ಇಲ್ಲಿಗೆ ಬಂದಿಲ್ಲ, ನಾನು ಭಾರತೀಯನಾಗಿ ಇಲ್ಲಿಗೆ ಬಂದಿದ್ದೇನೆ ಮತ್ತು ಇದು ನನ್ನ ಜವಾಬ್ದಾರಿ" ಎಂದು ನಟ ಕಿಚ್ಚ ಸುದೀಪ್ ಮತ ಚಲಾಯಿಸಿದ ನಂತರ ಹೇಳಿದರು.

  • 14:16 PM

    ಸಿದ್ದರಾಮನಹುಂಡಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಿದ್ದರಾಮಯ್ಯ 

  • 13:52 PM

    1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಮತ ಚಲಾಯಿಸುತ್ತ ಬಂದಿರುವ RWA ಸದಸ್ಯೆಯಾದ ವಯೋವ್ರುದ್ಧೆಯೊಬ್ಬರು ಇಂದು ಮತ ಚಲಾಯಿಸಿದ್ದು ಪ್ರಶಂಸನೀಯ.

  • 13:49 PM

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ಹೊಸ ಜೋಡಿ ಮತ ಚಲಾಯಿಸಿದ ಕ್ಷಣ.

  • 13:47 PM

    ಪುಟ್ಟೇನಹಳ್ಳಿ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ ಕಿಚ್ಚ ಸುದೀಪ್

    ಕಿಚ್ಚ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು

  • 13:46 PM

    88 ವರ್ಷದ ನಾಡೋಜ ದಂಪತಿಗಳಾದ ಪ್ರೊಫೆಸರ್ ಕಮಲಾ ಹಂಪನಾ ಮತ್ತು ಹಂಪನಾ ಅವರು ಇಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

  • 13:44 PM

    ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿನ ಮತಗಟ್ಟೆ 212 ರಲ್ಲಿ ಮತದಾನ ಚಲಾವಣೆ ಮಾಡಿದ್ದಾರೆ.

     

  • 13:40 PM

    ಮಧ್ಯಾಹ್ನ  1 ಗಂಟೆ ವೇಳೆಗೆ ಬೆಂಗಳೂರಿನ ವಿಧಾನ ಸಭಾ ಕ್ಷೇತ್ರಗಳ ಶೇಕಾಡವಾರು ಮತದಾನ‌ಪ್ರಮಾಣ - 

    ಬೆಂಗಳೂರು  ಉತ್ತರ 30.00

    ಸಿವಿ ರಾಮನ್‌ನಗರ - 26.85%
    ಹೆಬ್ಬಾಳ - 32.96%
    ಕೆಆರ್ ಪುರಂ - 29.43%
    ಮಹಾಲಕ್ಷ್ಮಿ ಲೇಔಟ್ - 34.26₹
    ಮಲ್ಲೇಶ್ವರಂ - 32.08%
    ಪುಲಕೇಶಿ ನಗರ್ - 28.65%
    ಸರ್ವಜ್ಞ ನಗರ್ - 25.08

  • 13:34 PM

    ಕರ್ನಾಟಕ ವಿಧಾನಸಭೆ ಚುನಾವಣೆ Live: ಮಹದೇವಪುರದಲ್ಲಿ ಕೈಕೊಟ್ಟ ಮತಯಂತ್ರ 

    ಮಹದೇವಪುರ ಕ್ಷೇತ್ರದ ಜ್ಯೋತಿಪುರ ಗ್ರಾಮದ ಮತಗಟ್ಟೆ ಸಂಖ್ಯೆ  3 ರಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾರರು ಪರದಾಡುವಂತಾಯಿತು. 150ಕ್ಕು ಹೆಚ್ಚು ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಮತಯಂತ್ರ ದೋಷದಿಂದ ಬಿಸಿಲಿನಲ್ಲಿ ಮತದಾರರು ಕಾಯುವಂತಾಯಿತು. 

  • 13:22 PM

    Vijayapura Election Live: ಮತಯಂತ್ರಗಳನ್ನ ಒಡೆದು ಪುಡಿ ಪುಡಿ ಮಾಡಿದ ಗ್ರಾಮಸ್ಥರು

    ಗ್ರಾಮಸ್ಥರು ಮತಯಂತ್ರಗಳನ್ನ ಒಡೆದು ಪುಡಿ ಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. EVM ಮಷಿನ್ ಹಾಗೂ ವಿವಿಪ್ಯಾಟ್ ಮಷಿನ್‌ಗಳನ್ನ ಒಡೆದು ಹಾಕಿದ್ದಾರೆ. ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ್ದಾರೆ. ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗಳಿಗೂ ಥಳಿಸಿದ್ದು, ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. 

  • 13:13 PM

    Karnataka Assembly Elections: ಗೋಪಾಲಯ್ಯ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಟನೆ

    ಗೋಪಾಲಯ್ಯ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಕಾರ್ಯಕರ್ತರು ಹಣ ಹಂಚಿದ್ದಾರೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದ್ದಾರೆ. ಣ ಹಂಚಿರುವ ಹಿನ್ನಲೆ‌ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಕ್ರೋಶ ಹೊರಹಾಕಿದ್ದಾರೆ. ಕುರುಬರಹಳ್ಳಿ ದೊಡ್ಡಮ್ಮನ ದೇವಸ್ಥಾನ ಬಳಿ ಹಣ ಹಂಚಿರುವ ಆರೋಪ ಕೇಳಿಬಂದಿದೆ. 

  • 13:09 PM

    Vijayanagar Election Live:  ವೋಟ್ ಹಾಕಲು ಕಾದು ಸುಸ್ತಾದ ಮತದಾರರು

    ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್ ನಲ್ಲಿ ವೋಟ್ ಹಾಕಲು ಕಾದು ಕಾದು ಮತದಾರರು ಸುಸ್ತಾಗಿದ್ದಾರೆ. ವೀವರ್ಸ್ ಕಾಲೋನಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತದಾನ ನಡೆಯುತ್ತಿದೆ. 1 ಗಂಟೆ ಕಾದರೂ ಮತದಾನ ಪ್ರಕ್ರಿಯೆ ಚುರುಕು ಕಾಣದ ಹಿನ್ನೆಲೆ ಮತದಾರರು ಹೈರಾಣಾಗಿದ್ದಾರೆ. ದು ಬೂತ್ ನಲ್ಲಿ 900 ಮಂದಿ, ಮತ್ತೊಂದು ಬೂತ್ ನಲ್ಲಿ 1,500 ಮತದಾರರು ಇರುವ ಹಿನ್ನೆಲೆ ಮತದಾನ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. 

  • 13:06 PM

    Hasan Election Live: ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿ ಸಾವು

    ಹಾಸನ : ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಹಕ್ಕು ಚಲಾಯಿಸಿ ಹೊರಗೆ ಬಂದ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಜಯಣ್ಣ (49) ಸಾವನ್ನಪ್ಪಿದ ದುರ್ದೈವಿ. ಮತ ಕೇಂದ್ರದ ಆವರಣದಲ್ಲೇ ಕೊನೆಯುಳಿರೆಳೆದ ಜಯಣ್ಣ. 

  • 13:02 PM

    Kolar Election Live: ಬಳ್ಳಾರಿ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ 19.01% ಮತದಾನ ನಡೆದಿದೆ. ತಾಲೂಕಾವಾರು ಮತದಾನ ಹೀಗಿದೆ

    ಶ್ರೀನಿವಾಸಪುರ ಶೇ. 22
    ಮುಳಬಾಗಿಲು – ಶೇ. 15.45
    ಕೆಜಿಎಫ್ – ಶೇ. 22.5
    ಬಂಗಾರಪೇಟೆ -ಶೇ. 20.12
    ಕೋಲಾರ -ಶೇ. 16.45
    ಮಾಲೂರು -ಶೇ. 18.11

  • 13:00 PM

    Gadag Election Live: ಬಳ್ಳಾರಿ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ 19.4% ಮತದಾನ ನಡೆದಿದೆ. ತಾಲೂಕಾವಾರು ಮತದಾನ ಹೀಗಿದೆ

    ಶಿರಹಟ್ಟಿ- ಶೇ. 16.2
    ಗದಗ- ಶೇ. 15.64
    ರೋಣ- ಶೇ. 22.04
    ನರಗುಂದ -ಶೇ. 23.72

  • 12:54 PM

    Bengaluru Election 2023: ಮತದಾನ ಮಾಡಲು ಆ್ಯಂಬುಲೆನ್ಸ್ ನಲ್ಲಿ ತೆರಳಿದ ರೋಗಿ

    ಮತದಾನ ಮಾಡಲು ರೋಗಿಯೊಬ್ಬರು ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ತಿಲಕ್ ನಗರದ ಸಾಗರ್ ಆಸ್ಪತ್ರೆಯಿಂದ ಆರ್.ಆರ್ ನಗರಕ್ಕೆ ಮತದಾನ ಮಾಡಲು ತೆರಳಿ ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದಾರೆ. ಆರ್ ಆರ್ ನಗರ ನಿವಾಸಿಯಾಗಿರುವ ಶೇಷಾದ್ರಿ (40) ಕಿಡ್ನಿ ಸಮಸ್ಯೆಯಿಂದ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

  • 12:43 PM

    ಕರ್ನಾಟಕ ವಿಧಾನಸಭೆ ಚುನಾವಣೆ Live : ವಾಕಿಂಗ್ ಸ್ಟಿಕ್ ಹಿಡಿದು ಬರುತ್ತಿರುವ ವಯೋವೃದ್ದ ಮತದಾರರು

    ವಾಕಿಂಗ್ ಸ್ಟಿಕ್ ಹಿಡಿದು ವಯೋವೃದ್ದ ಮತದಾರರು ಮತಗಟ್ಟೆ ಕಡೆ ಬರುತ್ತಿದ್ಧಾರೆ. ಯುವಕರು ನಾಚುವಂತೆ ಸ್ಟಿಕ್ ಹಿಡಿದು ವೃದ್ಧ ಮತದಾರರು ಬರುತ್ತಿದ್ದಾರೆ. ಬಿಬಿಎಂಪಿ  ಹತ್ತಕ್ಕೂ ಹೆಚ್ಚು ವೀಲ್ ಚೇರ್ ವ್ಯವಸ್ಥೆ ಮಾಡಿದೆ. ವೀಲ್ ಚೇರ್ ಗಳಲ್ಲಿ ಬಂದು ಬಹಳ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. 

  • 12:41 PM

    Bangalore Election Live: ಬೆಂಗಳೂರು ವಿಧಾನಸಭಾ ಕ್ಷೇತ್ರ ಶೇಕಡ 20 ರಷ್ಟು ಮತದಾನ

    ಆನೇಕಲ್ ವಿಧಾನ ಸಭಾ ಕ್ಷೇತ್ರ ಶೇಕಡ 20 ರಷ್ಟು ಮತದಾನ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಶೇಕಡಾ 20ರಷ್ಟು ಮತದಾನ. ಬೆಂಗಳೂರು ವಿಧಾನಸಭಾ ಕ್ಷೇತ್ರ ಶೇಕಡ 20 ರಷ್ಟು ಮತದಾನ

  • 12:38 PM

    Hasan Election Live: ಹಾಸನ ಜಿಲ್ಲೆಯಲ್ಲಿ 11.30 ರವರೆಗೆ ಶೇ.20.92% ರಷ್ಟು ಮತದಾನ ನಡೆದಿದೆ. ತಾಲೂಕಾವಾರು ಮತದಾನ ಹೀಗಿದೆ

    ಶ್ರವಣಬೆಳಗೊಳ- 21.93%
    ಅರಸೀಕೆರೆ- 20.79%
    ಬೇಲೂರು- 18.99%
    ಹಾಸನ- 20.85%
    ಹೊಳೆನರಸಿಪುರ- 22.21%
    ಅರಕಲಗೂಡು- 19.16%
    ಸಕಲೇಶಪುರ- 22.57%

  • 12:35 PM

    Kalaburagi Election 2023: ಮಲ್ಲಿಕಾರ್ಜುನ ಖರ್ಗೆ ಮತದಾನ 

    ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಮತ ಚಲಾಯಿಸಿದರು. "ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದಿಂದ ಗೆಲ್ಲುತ್ತದೆ. 130-135ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ" ಎಂದಿದ್ದಾರೆ.

     

     

Trending News