ಕೊಪ್ಪಳದಲ್ಲಿ ತಾಯಿಯ ಹಸಿವು ನೀಗಿಸಲು ಒಂದು ವಾರದಿಂದ ಭಿಕ್ಷೆ ಬೇಡುತ್ತಿರುವ ಬಾಲಕಿ..!

ಕೊಪ್ಪಳ ಜಿಲ್ಲೆಯ ಆರು ವರ್ಷ ವಯಸ್ಸಿನ ಬಾಲಕಿ ಭಾಗ್ಯಶ್ರೀ ತನ್ನ ತಾಯಿ ದುರ್ಗಮ್ಮಳಿಗೆ ಊಟ ನೀಡುವ ಸಲುವಾಗಿ ಕಳೆದ ಒಂದು ವಾರದಿಂದ ಭಿಕ್ಷೆಗೆ ಮೊರೆಹೊಗಿದ್ದಾಳೆ.ಈಗ ಆ ಬಾಲಕಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : May 28, 2019, 12:56 PM IST
ಕೊಪ್ಪಳದಲ್ಲಿ ತಾಯಿಯ ಹಸಿವು ನೀಗಿಸಲು ಒಂದು ವಾರದಿಂದ ಭಿಕ್ಷೆ ಬೇಡುತ್ತಿರುವ ಬಾಲಕಿ..!   title=
Photo:ANI

ಕೊಪ್ಪಳ: ಕೊಪ್ಪಳ ಜಿಲ್ಲೆಯ ಆರು ವರ್ಷ ವಯಸ್ಸಿನ ಬಾಲಕಿ ಭಾಗ್ಯಶ್ರೀ ತನ್ನ ತಾಯಿ ದುರ್ಗಮ್ಮಳಿಗೆ ಊಟ ನೀಡುವ ಸಲುವಾಗಿ ಕಳೆದ ಒಂದು ವಾರದಿಂದ ಭಿಕ್ಷೆಗೆ ಮೊರೆಹೊಗಿದ್ದಾಳೆ.ಈಗ ಆ ಬಾಲಕಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

"ನನಗೆ ನನ್ನ ತಂದೆ ಇಲ್ಲ, ಮತ್ತು ತಾಯಿ ಆರೋಗ್ಯ ಸರಿಯಿಲ್ಲ ಆದ್ದರಿಂದ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಲು ಭಿಕ್ಷೆ ಬೇಡಬೇಕಾಗಿದೆ. ಅದರಿಂದ ಬಂದ ಹಣದಲ್ಲಿ ನನ್ನ ತಾಯಿಯನ್ನು ಪೋಷಿಸುತ್ತೇನೆ ಎಂದು ಭಾಗ್ಯಶ್ರೀ ಸುದ್ದಿಗಾರರಿಗೆ ತಿಳಿಸಿದರು.ಕುಡಿತದ ಕಾರಣದಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಮಹಿಳೆಯ ಪತಿ ಆಕೆಯನ್ನು ಬಿಟ್ಟು ಇನ್ನೊಂದು ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ ಒಂದು ವಾರದಿಂದ ಆಸ್ಪತ್ರೆಯ ಆವರಣದಲ್ಲಿ ಭಗ್ಯಾಶ್ರೀ ಭಿಕ್ಷೆ ಮಾಡುತ್ತಿದ್ದಾರೆ.ಈ ಮಗು ಮತ್ತು ತಾಯಿಯ ಸ್ಥಿತಿಗತಿ ಬಗ್ಗೆ ಅಲ್ಲಿನ ಆಸ್ಪತ್ರೆಗೆ ತಿಳಿದಿತ್ತು ಎನ್ನಲಾಗಿದೆ. ನಂತರ ಈ ವಿಚಾರವು ಮುಖ್ಯಮಂತ್ರಿ ಕಚೇರಿಗೆ ತಲುಪಿದೆ. ಆಗ ಅದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಆ  ಮಹಿಳೆಗೆ ಉತ್ತಮ ಚಿಕಿತ್ಸೆ ನೀಡುವುದಲ್ಲದೆ ಆ ಬಾಲಕಿಗೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊರಬೇಕು ಎಂದು ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎರೆನಾ ಪಾಂಚಾಲ್ ಹೇಳಿದ್ದಾರೆ.

"ಅವಳು ಆಸ್ಪತ್ರೆಗೆ  ಬಂದಾಗ, ಆಕೆಯ ಪರಿಸ್ಥಿತಿಯು ಉತ್ತಮವಾಗಿರಲಿಲ್ಲ ಮತ್ತು ಅವಳಿಗೆ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ.ಆಕೆಗೆ ಒಬ್ಬ ಮಗನು ಕೂಡ ಇದ್ದು, ಆತನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ.ಆ ಮಹಿಳೆ ಮೂಲತಃ ಕಾರಟಗಿ ಸಿದ್ದಾಪುರದಿಂದ ಬಂದಿದ್ದಾಳೆ.ಈಗ ನಾವು ಇನ್ನು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ನನ್ನ ಜೊತೆಗೆ ಆ ಮಹಿಳೆಯ ಸಹೋದರನಿದ್ದಾನೆ. ನಾವು ಸರ್ಕಾರಿ ಶಾಲೆಯಲ್ಲಿ ಬಾಲಕಿಗೆ ಉಚಿತ ಶಿಕ್ಷಣ ಮತ್ತು ತಾಯಿಗೆ ಉಚಿತ ಚಿಕಿತ್ಸೆಯನ್ನು ಖಾತರಿಪಡಿಸುತ್ತೇವೆ ಎಂದು ಪಂಚಲ್ ಭರವಸೆ ನೀಡಿದ್ದಾರೆ.

Trending News