ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಎದುರಾಗಿದ್ದು, ಗ್ರಾಮವೊಂದು ಸಂಪೂರ್ಣ ಕೊಚ್ಚಿಹೋಗಿದೆ.
ಕೊಡಗು ಜಿಲ್ಲೆಯ ಕಲ್ಲೂರು ಗ್ರಾಮವೇ ಇಂದು ಹೇಳಹೆಸರಿಲ್ಲದಂತಾಗಿದೆ. ಇಡೀ ಗ್ರಾಮವೇ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಈ ಗ್ರಾಮದ ನಿವಾಸಿಗಳ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಅಲ್ಲದೆ, ಈ ಗ್ರಾಮದಲ್ಲಿ ಮನೆಗಳು ಇದ್ದವು ಎಂದು ಹೇಳುವುದೂ ಕಷ್ಟಸಾಧ್ಯವಾಗಿದೆ. ಆ ರೀತಿಯಲ್ಲಿ ಯಾವುದೇ ಅವಶೇಷಗಳೂ ಇಲ್ಲದಂತೆ ಕಲ್ಲೂರು ಗ್ರಾಮ ಸಂಪೂರ್ಣ ಕೊಚ್ಚಿ ಹೋಗಿದೆ.
ಈ ಗ್ರಾಮದ ಕೆಲ ಛಾಯಾಚಿತ್ರಗಳನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.
Visuals of flood-hit Kallur village in #Karnataka. Most parts of the village have got submerged in the flood water. (17.08.18) pic.twitter.com/kf7peE4ImU
— ANI (@ANI) August 17, 2018
ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇದುವರೆಗೂ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಈ ಮಧ್ಯೆ ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.