B.C.Patil: 'ನಾವು ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋಗಿದ್ವಿ'

ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲಿ ಕರ್ನಾಟಕದಲ್ಲಿ ಭಯಾನಕ ವಾತಾವರಣ ಇತ್ತು. ನಮ್ಮನ್ನು ಹಿಡಿತಾರೆ, ಹೊಡಿತಾರೆ ಅಂತ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ. ನಮ್ಮದು ಬಾಂಬೆ ಟೀಂ ಅಂತ ಯಾವುದೂ ಇರಲಿಲ್ಲ.

Last Updated : Jan 19, 2021, 05:07 PM IST
  • ನಾವು ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋಗಿದ್ವಿ ಎಂದ ಕೃಷಿ ಸಚಿವ ಬಿ.ಸಿ.ಪಾಟೀಲ್
  • ರೈತರ ಆತ್ಮಹತ್ಯೆಗೆ ವೀಕ್ನೆಸ್ ಆಫ್ ಮೈಂಡ್ ಕಾರಣ. ಮಾನಸಿಕವಾಗಿ ಗಟ್ಟಿಯಾಗಿಲ್ಲದ ಯಾರೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದ ಸಚಿವ, ಮರುಕ್ಷಣವೇ ನಾವು ಭಯದಿಂದ ಬಾಂಬೆಗೆ ಹೋಗಿದ್ದೆವು ಎಂದರು.
  • ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲಿ ಕರ್ನಾಟಕದಲ್ಲಿ ಭಯಾನಕ ವಾತಾವರಣ ಇತ್ತು. ನಮ್ಮನ್ನು ಹಿಡಿತಾರೆ, ಹೊಡಿತಾರೆ ಅಂತ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ. ನಮ್ಮದು ಬಾಂಬೆ ಟೀಂ ಅಂತ ಯಾವುದೂ ಇರಲಿಲ್ಲ.
B.C.Patil: 'ನಾವು ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋಗಿದ್ವಿ' title=

ಮೈಸೂರು: ನಾವು ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋಗಿದ್ವಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್(B.C.Patil), ರೈತರ ಆತ್ಮಹತ್ಯೆಗೆ ವೀಕ್ನೆಸ್ ಆಫ್ ಮೈಂಡ್ ಕಾರಣ. ಮಾನಸಿಕವಾಗಿ ಗಟ್ಟಿಯಾಗಿಲ್ಲದ ಯಾರೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದ ಸಚಿವ, ಮರುಕ್ಷಣವೇ ನಾವು ಭಯದಿಂದ ಬಾಂಬೆಗೆ ಹೋಗಿದ್ದೆವು ಎಂದರು.

BJP: ನೂತನ ಸಚಿವರಿಗೆ ಬಹುತೇಕ ಖಾತೆ ಫೈನಲ್! ನಾಳೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ?

ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲಿ ಕರ್ನಾಟಕದಲ್ಲಿ ಭಯಾನಕ ವಾತಾವರಣ ಇತ್ತು. ನಮ್ಮನ್ನು ಹಿಡಿತಾರೆ, ಹೊಡಿತಾರೆ ಅಂತ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ. ನಮ್ಮದು ಬಾಂಬೆ ಟೀಂ ಅಂತ ಯಾವುದೂ ಇರಲಿಲ್ಲ. ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್‌ಗೆ ಲಿಫ್ಟ್​ನಲ್ಲಿ ಹಾಕೊಂಡು ಹೊಡೆದಿದ್ರು. ಆಮೇಲೆ ಖರ್ಗೆ ಆಫಿಸ್​ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ರು. ನಮಗೆ ಏನಾಗುತ್ತೋ ಅನ್ನುವ ಭಯದಲ್ಲಿ ಹೆದರಿಕೆಯಿಂದ ಬಾಂಬೆಗೆ ಹೋದ್ವಿ ಎಂದರು.

Congress: ರಾಜ್ಯದ ಮಹಿಳೆಯರನ್ನ ಸೆಳೆಯಲು ಕಾಂಗ್ರೆಸ್‌ನಿಂದ 'ಭರ್ಜರಿ ಪ್ಲಾನ್'..!

ಇನ್ನು ನಮ್ಮ ಟೀಂ ಅಲ್ಲಿ ಒಡಕಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಾವು ಬಾಂಬೆ ಟೀಂ ಅಲ್ಲ, ಈಗ ನಾವೆಲ್ಲ ಕರ್ನಾಟಕದಲ್ಲೇ ಇದ್ದೇವೆ. ಮತ್ತೆ ಬಾಂಬೆಗೆ ಹೋಗೋ ಪರಿಸ್ಥಿತಿ ಇಲ್ಲ. ಬಾಂಬೆಗೆ ಹೋಗಿದ್ದ ನಾವೆಲ್ಲ ಸ್ನೇಹಿತರು. ಈಗ ಇನ್ನು 104 ಜನ ಸ್ನೇಹಿತರು ಸಿಕ್ಕಿದ್ದಾರೆ ಎಂದರು.

B.C.Patil: ರೈತರ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಬಿ.ಸಿ.ಪಾಟೀಲ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News