ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ನಿರ್ಮಿಸಿದ ವಿದ್ಯಾರ್ಥಿಗಳು

ಕೋವೀಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವುದು ಅವಶ್ಯಕ.

Last Updated : Apr 25, 2020, 08:32 AM IST
ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ನಿರ್ಮಿಸಿದ ವಿದ್ಯಾರ್ಥಿಗಳು title=

ಹುಬ್ಬಳ್ಳಿ: ಕೊರೋನಾವೈರಸ್ ಕೋವಿಡ್-19 ಸಾಂಕ್ರಾಮಿಕ ವೇಗವಾಗಿ ಹರಡುತ್ತಿದೆ. ಇದರಿಂದ ರಕ್ಷಿಸಿಕೊಳ್ಳಲು ಮಾಸ್ಕ್, ಹ್ಯಾಂಡ್‌ ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗುತ್ತಿದೆ.‌ ಆದರೂ ಕೆಲವೊಮ್ಮೆ ವೈರಸ್ ನಮಗೆ ಅರಿವಿಲ್ಲದೆಯೇ ಹರಡುವ ಸಾಧ್ಯತೆ ಇರುತ್ತದೆ. ಕೋವಿಡ್-19 (Covid-19)  ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವುದು ಅವಶ್ಯಕ. ಇದನ್ನು ಮನಗಂಡ ಕೆ.ಎಲ್.ಇ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ನಿರ್ಮಿಸಿದೆ.

ಇನ್ಮುಂದೆ ರಸ್ತೆಗಳಲ್ಲಿ ಅನವಶ್ಯಕವಾಗಿ ಓಡಾಡುವ ಮುನ್ನ ಎಚ್ಚರ!

ಈಗ ಇರುವ ಹ್ಯಾಂಡ್ ಸೆನಟೈಜರ್ ಬಳಸಲು ನಾವು ಕೈಯಿಂದ ಅವುಗಳನ್ನು ಮಟ್ಟಬೇಕು. ಇನ್ನೂ ಕರೋನಾವೈರಸ್ (Coronavirus)  ಕೋವಿಡ್- 19 ಆಸ್ಪತ್ರೆಗಳಲ್ಲಿ ಪಿ.ಪಿ.ಕೆಟ್ ಧರಿಸಿರುವ ವೈದ್ಯರು ಹಾಗೂ ನರ್ಸ್ ಗಳಿಗೆ ಈ ರೀತಿಯ ಸೆನಟೈಜರ್ ಬಳಸುವುದು ಕಷ್ಟವಾಗುತ್ತದೆ. ಇದನ್ನು ಅರಿತ ವಿದ್ಯಾರ್ಥಿಗಳಾದ ಕಾರ್ತಿಕ್.ವಿ.ಆರ್. ಅಭಿಲಾಷ್ .ಜಿ, ವಿನಾಯಕ, ಪ್ರವೀಣ, ಸಂತೋಷ್,ಅಭಿಲಾಷ್.ಕೆ ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ನಿರ್ಮಿಸಿದ್ದಾರೆ. ಕೆ.ಎಲ್.ಇ. ಮೆಕಾನಿಕಲ್ ವಿಭಾಗ ಪ್ರಾಧ್ಯಾಪಕ ರವಿ ಗುಟ್ಟಾಲ್ ಹಾಗೂ ಕಿಮ್ಸ್ ವೈದ್ಯ ಎಸ್.ವಿ.ಮುಲ್ಕಿಮಠ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. 

COVID-19 ಲಾಕ್‌ಡೌನ್ ನಿಯಮ ಸಡಿಲಿಸಿದ ಕೆಂದ್ರ ಗೃಹ ಸಚಿವಾಲಯ, ತೆರೆಯಲಿದೆ ಈ ಅಂಗಡಿಗಳು

ಈ ಪ್ರಯತ್ನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಆಸ್ಪತ್ರೆ, ಬೃಹತ್ ಕೈಗಾರಿಕೆಗಳು, ಸರ್ಕಾರಿ ಕಚೇರಿ, ಹೋಟೆಲ್, ಲಾಡ್ಜ್, ಸಮುದಾಯ ಭವನ ಇತರೆಡೆಗಳಲ್ಲೂ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ಬಳಕೆಗೆ ಯೋಗ್ಯವಾಗಿದೆ ನಯುದ್ ತಿಳಿಸಿದ ವಿದ್ಯಾರ್ಥಿಗಳು ತಾವು ತಯಾರಿಸಿರುವ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ಅನ್ನು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿಯವರಿಗೆ ಹಸ್ತಾಂತರಿಸಿದರು.

Trending News