ಇತ್ತಿಚೀನ ಪ್ರೀತಿ ಪ್ರೇಮಕ್ಕೆ ಗ್ಯಾರಂಟಿನೂ ಇಲ್ಲಾ, ವಾರೆಂಟಿನೂ ಇಲ್ಲಾ. ಇದರ ನಡುವೆ ಬೇರೆ ಜಾತಿಯವರನ್ನು ಲವ್ ಮಾಡಿದ್ರೆ ಮದುವೆ ಕಷ್ಟ-ಕಷ್ಟ. ಇನ್ನೂ ಅನ್ಯಕೋಮಿನವರನ್ನು ಲವ್ ಮಾಡಿದ್ರೆ. ಅಷ್ಟೇ ಕಥೆ. ಈಗ ಅನ್ಯೋಮಿನ ಯುವಕನನ್ನು ಪ್ರೀತಿಸಿದ್ದ ಯುವತಿಯನ್ನು ಮತಾಂತರ ಆಗುವಂತೆ ಯುವಕ ಒತ್ತಾಯಿಸಿರುವ ಆರೋಪ ಕೇಳಿ ಬಂದಿದೆ. ಏನಿದು ಲವ್ ಜಿಹಾದ್ ಸ್ಟೋರಿ. ಹೇಳ್ತಿವಿ ನೋಡಿ.
ಅವರೆಲ್ಲ ಒಟ್ಟಿಗೆ ಇರ್ತಾ ಇದ್ದ ಸ್ನೇಹಿತರು. ಸಂಜೆ ಆದ್ರೆ ಸಾಕು ಕೆಲಸ ಮುಗಿಸಿ ಒಂದೇ ಕಡೆ ಸೇರ್ತಾ ಇದ್ರು. ಒಂದೇ ಕಡೆ ಸೇರಿದ್ರೆ ಸುಮ್ನೆ ಇರ್ತಾರ ಕೈಯಲ್ಲಿ ಬಾಟಲ್ ಹಿಡ್ಕೊಂಡು ರಾತ್ರಿಯಿಡೀ ಎಂಜಾಯ್ ಮಾಡ್ತಿದ್ರು. ಹೀಗೆ ಪಾರ್ಟಿ ಮಾಡುವಾಗ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗಿದೆ. ನಶೆ ಇಳಿದ ಬಳಿಕ ಬಂಧಿಸಲು ಹೋದ ಪೊಲೀಸರಿಗೆ ನಾವು ಕೊಲೆ ಮಾಡಿದ್ವಾ ಅಂತಾ ಆರೋಪಿಗಳೇ ಪ್ರಶ್ನಿಸಿದ್ದಾರೆ.
ಅದು ಕಿಲಾಡಿ ಗ್ಯಾಂಗ್. ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡಿತ್ತು. ಯಾರಾದ್ರೂ ಸಿಕ್ರೆ ಹೆಚ್ಚು ಹಣದ ಆಸೆ ತೋರಿಸಿ ಮಂಕುಬೂದಿ ಎರಚುತ್ತಿದ್ದರು. ಸದ್ಯ ಈ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಪುಡಿರೌಡಿಗಳ ಹಾವಳಿ ಹೆಚ್ಚಾಗ್ತಿದೆ. ಸಣ್ಣಪುಟ್ಟ ಕಾರಣಕ್ಕೂ ತಾವೇ ದೊಡ್ಡ ಡಾನ್ ಗಳು ಎಂಬತೆ ವರ್ತಿಸುತ್ತಾರೆ. ಇಲ್ಲೂ ಸಹ ಅದೇ ಆಗಿದ್ದು, ಸಿಸಿಲಿಯಲ್ಲಿ ಪುಂಡರ ಅಟ್ಟಹಾಸ ಎದ್ದು ಕಾಣುತ್ತಿದೆ.
ಅವನಿಗೆ ಅದಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದವು. ಆದ್ರೂ ಮತ್ತೊಬ್ಬಳ ಮೇಲೆ ಲವ್ ಆಗಿ ಹೇಗೋ ಯಾಮಾರಿಸಿ ಆಕೆಯನ್ನು ಮದುವೆಯಾಗಿದ್ದ. ವೆಸ್ಟ್ ಬೆಂಗಾಲ್ ನಲ್ಲಿ ಶುರುವಾದ ಗಡಿಬಿಡಿ ಗಂಡನ ಡಬಲ್ ಲವ್ ಮ್ಯಾರೇಜ್ ಸ್ಟೋರಿ ಸಿಲಿಕಾನ್ ಸಿಟಿಯಲ್ಲಿ ಕೊಲೆಯಲ್ಲಿ ಅಂತ್ಯವಾಗಿದೆ.
Bangaluru Traffic violations : ಬೆಂಗಳೂರು ವಾಹನ ಸವಾರರಿಗೊಂದು ಗುಡ್ ನ್ಯೂಸ್ ಇದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಮಯ ಉಲಂಘಿಸಿ ದಂಡ ಕಟ್ಟಬೇಕಿದ್ದರೇ, ಈಗಲೇ ದಂಡ ಕಟ್ಟೋದು ಉತ್ತಮ. ಏಕೆಂದರೇ, ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಬಟ್ಟೆ ಅಂಗಡಿಗಳಂತೆ ಫೈನ್ ಕಟ್ಟಲು ಆಫರ್ ಕೊಟ್ಟಿದ್ದಾರೆ. ಇದ್ರ ಜೊತೆಗೆ ಸಿಎಂ ಸಿದ್ದರಾಮಯ್ಯನವರೂ ಈ ದಂಡ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ.
ಅವರೆಲ್ಲಾ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರು.. ಕೆಲಸ ಅರಿಸಿ ಬೆಂಗಳೂರಿಗೆ ಬಂದವರು ತೆಪ್ಪಗೆ ಕೆಲಸ ಮಾಡಿಕೊಂಡು ಇರಬೇಕಿತ್ತು. ಆದ್ರೆ ಹಣದಾಸೆಗೆ ಬಿದ್ದು ಕೆಲಸ ಬಿಟ್ಟು ಹಿಂದೂ ದೇವರ ವಿಗ್ರಹಗಳನ್ನೇ ಟಾರ್ಗೆಟ್ ಮಾಡಿ ಕದಿಯೋಕೆ ಶುರು ಮಾಡಿದ್ರು. ಸದ್ಯ ಪೊಲೀಸರು ಚಾಲಾಕಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಸಿಲಿಕಾನ್ ಸಿಟಿಯನ್ನು ಡ್ರಗ್ ಮುಕ್ತ ಮಾಡಬೇಕು ಅಂತಾ ಪೊಲೀಸ್ರು ಸಾಕಷ್ಟು ವರ್ಕ್ ಮಾಡುತ್ತಿದ್ದಾರೆ. ದುನಿಯಾ ವಿಜಯ್ ಭೀಮಾ ಸಿನಿಮಾದಲ್ಲಿ ಕಡಿಮೆ ಬೆಲೆಯ ಡ್ರಗ್ ಎಷ್ಟರ ಮಟ್ಟಿಗೆ ಹರಡುತ್ತೆ ಎಂಬುದನ್ನು ತೋರಿಸಿದ್ರು. ಸದ್ಯ ಅದೇ ತರ ಡ್ರಗ್ ಬೆಂಗಳೂರಲ್ಲಿ ಹರಿದಾಡುತ್ತಿರುವುದು ಬಟಬಯಲಾಗಿದೆ.
ಅವರು ಬದುಕು ಕಟ್ಟಿಕೊಳ್ಳಬೇಕು ಅಂತಾ ದೂರದ ಉತ್ತರ ಪ್ರದೇಶದಿಂದ ನಗರಕ್ಕೆ ಬಂದಿದ್ದ ದಂಪತಿ. ಪುಟ್ಟ ಕೆಲಸ ಹುಡುಕಿಕೊಂಡು ಜೀವನ ನಡೆಸ್ತಿದ್ದ ಅವರ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಆಗ್ತಿತ್ತು. ಇಬ್ಬರ ಜಗಳ ತಾರಕಕ್ಕೇರಿದ್ದು, ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಬೆಂಗಳೂರಿನ ದಿಗಂತದ ವಿರುದ್ಧ ಭವ್ಯವಾಗಿ ಮೇಲೇರುತ್ತಿರುವ ಶಿವೋಹಂ ಶಿವ ದೇವಾಲಯವು ಭಾರತದ ಕಾಲಾತೀತ ಆಧ್ಯಾತ್ಮಿಕ ಪ್ರಯಾಣದ ಶಾಶ್ವತ ಸಾಕ್ಷಿಯಾಗಿದ್ದು, 'ಶಿವೋಹಂ - ನಾನು ಶಿವ' ಎಂಬ ಆಳವಾದ ಬಹಿರಂಗಪಡಿಸುವಿಕೆಯ ಮೂಲಕ ಅನ್ವೇಷಕರನ್ನು ಜ್ಞಾನೋದಯದ ಕಡೆಗೆ ಮಾರ್ಗದರ್ಶನ ಮಾಡುತ್ತದೆ. ಈ ದೇವಾಲಯವು ತನ್ನ 65 ಅಡಿ ಶಿವ ವಿಗ್ರಹಕ್ಕೆ ಗಮನಾರ್ಹವಾಗಿದೆ. ನಗರದಲ್ಲಿ ಅತಿ ಎತ್ತರದ ಮತ್ತು ಅದರ ಭವ್ಯವಾದ ಗಣೇಶ ವಿಗ್ರಹ, 32 ಅಡಿ ಎತ್ತರ, ಮತ್ತು ಇದನ್ನು AiR - ರವಿಯಲ್ಲಿ ಆತ್ಮ - ಜಾಗೃತ ಆತ್ಮ, ಲೋಕೋಪಕಾರಿ ಮತ್ತು ಶ್ರೇಷ್ಠ ಆಧ್ಯಾತ್ಮಿಕ ಶಿಕ್ಷಕನ ದೃಷ್ಟಿಕೋನದಿಂದ ರಚಿಸಲಾಗಿದೆ.
ಕಳೆದ ಎರಡು ತಿಂಗಳಿನಿಂದ ಶಾಲಾ ಬಸ್ ನಿಂತಲ್ಲೇ ನಿಂತ್ತಿತ್ತು. ನಿನ್ನೆ ರಾತ್ರಿ ಇದಕ್ಕಿಂದ್ದಂತೆ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ನಂದಿಸಿದ ನಂತರ ಬಸ್ ಒಳಗಡೆ ವ್ಯಕ್ತಿಯೊಬ್ಬನ ಮೃತ ದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮತ್ತೊಂದು ಕಡೆ ಮನೆ ಮುಂದೆ ನಿಲ್ಲಿಸಿದ ಬೈಕ್ ಗೆ ಪಟ್ರೋಲ್ ಹಾಕಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಒಬ್ಬ ರೌಡಿ ಮಚ್ಚು ಹಿಡಿದಿದ್ದಾನೆ ಅಂದ್ರೆ ಆತನ ಸಾವು ಕೂಡ ಅದೇ ಮಚ್ಚಿನಿಂದ ಆಗಿರುತ್ತೆ. ಯಾಕೆಂದ್ರೆ ಆತನ ಸಾವಿಗೆ ಇನ್ನೊಬ್ಬ ರೌಡಿ ಮುಹೂರ್ತ ಫಿಕ್ಸ್ ಮಾಡಿರ್ತಾನೆ ಅಂತಾ ಅರ್ಥ. ಇಲ್ಲಿಯೂ ಸಹ ಒಂದು ಬೆಚ್ಚಿ ಬೀಳಿಸುವ ಕೊಲೆಯಾಗಿದ್ದು, ಆ ಕೊಲೆ ಇದೀಗ ರಾಜಕೀಯ ನಾಯಕರ ಕೊರಳಿಗೆ ಸುತ್ತಿಕೊಳ್ಳುತ್ತಿದೆ..
ಮಕ್ಕಳು ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ರು. ಕಟ್ಟಡದ ಒಳಗೆ ಹೋಗ್ತಿದ್ದಂತೆ ಚೀರಿಕೊಂಡು ಹೊರಬಂದಿದ್ರು. ಗಾಬರಿಗೊಂಡು ಬಂದು ನೋಡಿದ ಶಿಕ್ಷರು ಇಡೀ ಶಾಲೆಗೆ ರಜೆ ಘೋಷಿಸಿ ಬಿಟ್ಟಿದ್ರು. ಹಾಗಾದ್ರೆ ಆ ಶಾಲೆಯಲ್ಲಿ ಅಂಥದ್ದೇನು ನಡೀತು.. ಅದನ್ನೇ ತೋರಿಸ್ತೀವಿ ನೋಡಿ.
ಅವರಿಬ್ಬರು ದೂರದ ಸಂಬಂಧಿಗಳು ಮೂರು ವರ್ಷ ಲವ್ ಮಾಡಿದ್ರು. ಮಾಜಿ ಸಚಿವರ ಮನೆಯಲ್ಲಿ ಸಂಧಾನ ಕೂಡ ನಡೆಸಿದ್ರು. ಇದೀಗ ಸ್ಕೂಲ್ ಡಾಕ್ಯುಮೆಂಟ್ ನೋಡಿ ಮದುವೆಯಾದ ಜೋಡಿಗೆ ಭಾಗ್ಯಲಕ್ಷ್ಮೀ ಬಾಂಡ್ ಮಾರಕವಾಗಿದೆ.
ಸಲೂನ್ ಒಳಗಡೆ ನುಗ್ಗಿದ ಲೇಡಿ ಗ್ಯಾಂಗ್ ಒಂದು ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಹಲ್ಲೆ ಮಾಡಿ ಕಿಡ್ನಾಪ್ ಮಾಡಿದ್ದಾರೆ. ಸುಮಾರು ಮೂರು ನಾಲ್ಕು ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿಸಿ ಬೆದರಿಕೆ ಹಾಕಿದ್ದಾರೆ .ಈ ಲೇಡಿ ಗ್ಯಾಂಗ್ ಅಟ್ಟಹಾಸ ಹೇಗಿತ್ತು ಅನ್ನೋದನ್ನ ತೋರಿಸ್ತಿವಿ ನೋಡಿ.
ಪ್ರೀತಿ, ಪ್ರೇಮದ ಹೆಸರಲ್ಲಿ ಸುತ್ತಾಡಿದವನು ನಂಬಿಸಿ ಮೋಸ ಮಾಡಿದ್ದಾನೆ. ಗರ್ಭಿಣಿ ಮಾಡಿದ ಅಸಾಮಿ ಕೈ ಕೊಟ್ಟು ಎಸ್ಕೇಪ್ ಆಗಿದ್ದಾನೆ. ನೊಂದ ಯುವತಿ ಗಂಡ ಬೇಕೆಂದು ಠಾಣೆ ಮೆಟ್ಟಿಲೇರಿದ್ದಾಳೆ. ಏನಿದು ಕಹಾನಿ..? ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ..
ನಂಬಿಕೆ ಅದು ಹತ್ತು ವರ್ಷದ ನಂಬಿಕೆ. ಎಷ್ಟರ ಮಟ್ಟಿಗೆ ಇತ್ತು ಅಂದ್ರೆ ಹಿಂದೆಮುಂದೆ ನೋಡದೆ ಒಂದುವರೆ ಕೋಟಿಯನ್ನು ಕೊಟ್ಟು ಕಳಿಸುವಷ್ಟು. ಆದ್ರೆ ಕಿಲಾಡಿ ಕೆಲಸಗಾರ ಒಂದುವರೆ ಕೋಟಿ ಸಹಿತ ಎಸ್ಕೇಪ್ ಆಗಿದ್ದ. ಏನಿದು ಒಂದುವರೆ ಕೋಟಿ ಕಥೆ ಅಂತಿರಾ ತೋರಿಸ್ತಿವಿ ನೋಡಿ.
ಶಿವಮೊಗ್ಗ, ಉಡುಪಿ, ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಕೇಸ್ ಗಳು ವರದಿ ಆಗ್ತಿದ್ವು. ಈಗ ಬೆಂಗಳೂರಿನಲ್ಲೂ ಕೂಡ ನಾಲ್ಕೈದು ಜನ ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಅರೆಸ್ಟ್ ಆಗಿದ್ದಾರೆ. ತಮ್ಮ ಪಾಡಿಗೆ ತಾವು ಹೋಗೋದು ಬಿಟ್ಟು ಯುವಕ ಯುವತಿಯನ್ನ ಪ್ರಶ್ನೆ ಮಾಡಿ, ತಾವೇ ವಿಡಿಯೋ ಮಾಡಿ ವೈರಲ್ ಮಾಡಿ ತಾವೇ ಅರೆಸ್ಟ್ ಆಗಿದ್ದಾರೆ.
ಕೆಲವೊಂದು ಏರಿಯಾಗಳಲ್ಲಿ ಗ್ಯಾಂಗ್ ವಾರ್ ನಡೀತಾನೇ ಇರುತ್ತೆ. ನಮ್ದೇ ಹವಾ.ನಮ್ದೆ ಖದರ್ ಅಂತಾ ಕೆಲ ಲೋಕಲ್ ರೌಡಿಗಳು ಕಿತ್ತಾಡ್ತಿರ್ತಾರೆ. ಹೀಗೆ ನಮ್ದೇ ಹವಾ. ನಾವು ಅಂದ್ರೆ ಭಯಾ ಇಲ್ವಾ ಅಂತಾ ಇಬ್ಬರು ಪುಡಿರೌಡಿಗಳ ಮನೆಗೆ ನುಗ್ಗಿ ರೌಡಿಶೀಟರ್ ಗ್ಯಾಂಗ್ ದಾಂಧಲೆ ಮಾಡಿದೆ.. ಅಷ್ಟಕ್ಕೂ ಏನಿದು ಗ್ಯಾಂಗ್ ವಾರ್.. ಎಲ್ಲಿ ಆಗಿದ್ದು ಅಂತೀರಾ ಹೇಳ್ತೀವಿ ನೋಡಿ.
ಕಲರ್ ಫುಲ್ ಆಗಿ ಆಗಿ ಆಚರಣೆ ಮಾಡುವ ಹೋಳಿ ಹಬ್ಬ. ಸಿಟಿ ಜನ ಖುಷಿ ಖುಷಿಯಿಂದ ಬಣ್ಣ ಹಚ್ಚಿ ಸಂಭ್ರಮಿಸ್ತಿದ್ರು. ಆದ್ರೆ ಅದೇ ಹೋಳಿ ಹಬ್ಬದ ದಿನ ಲಾಲ್ ಬಾಗ್ ನಲ್ಲಿ ಪರಿಸ್ಥಿತಿ ಬೇರೆಯದ್ದೇ ಆಗಿತ್ತು.ರಂಗಿನ ಜೊತೆಗೆ ರಕ್ತದೋಕುಳಿ ಕೂಡ ಹರಿದಿತ್ತು. ಕನ್ನಡಿಗನ ಮೇಲೆ ಹಲ್ಲೆ ಮಾಡಿ ನೇಪಾಳಿ ಯುವಕರು ಅಟ್ಟಹಾಸ ಮೆರೆದಿದ್ರು. ಈಗ ನೇಪಾಳಿಗಳು ಅಂದರ್ ಆಗಿದ್ದಾರೆ.