ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸೂಪರ್ ಸಿಎಂ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಆರೋಪ ಮಾಡಿಕೊಂಡು ಬಂದಿದ್ದಾರೆ. ಇದೀಗ ಅದಕ್ಕೆ ಸಾಕ್ಷಿ ಎಂದು ಒಂದು ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಮರಿಸ್ವಾಮಿ ಎಂಬುವವರು ಬಿ.ವೈ ವಿಜಯೇಂದ್ರ(BY Vijayendra) ಅವರನ್ನು ಸೂಪರ್ ಸಿಎಂ ಎಂದು ಕರೆದಿರುವ ವಿಡಿಯೋವನ್ನು ಯತ್ನಾಳ್ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಜಯೇಂದ್ರ ಸೂಪರ್ ಸಿಎಂ ಎಂಬ ಆರೋಪಕ್ಕೆ ಇದು ಸಾಕ್ಷಿ ಎಂದು ಹೇಳಿಕೊಂಡಿದ್ದಾರೆ.
Uddhav Thackeray: ಮತ್ತೆ ಕನ್ನಡಿಗರ ಸ್ವಾಭಿಮಾನ ಕೆಣಕಿದ ಮಹಾ ಸಿಎಂ ಉದ್ಧವ್ ಠಾಕ್ರೆ..!
'ಇಷ್ಟು ದಿನ ವಿಜಯೇಂದ್ರ ಸೂಪರ್ ಸಿ.ಎಮ್ ಎಂದು ನಾನು ಹೇಳಿದ್ದು ಇಂದು ವಿಜಯೇಂದ್ರನೆ ಒಪ್ಪಿಕೊಂಡಂತಾಗಿದೆ. ಯಡಿಯೂರಪ್ಪ(BS Yediyurappa) ನವರ ರಕ್ತ ಸಂಬಂಧಿ, ವಿಜಯೇಂದ್ರ ಭಂಟ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಮರಿಸ್ವಾಮಿ ವಿಜಯೇಂದ್ರನ ಸಮ್ಮುಖದಲ್ಲೇ ವಿಜಯೇಂದ್ರ ಸೂಪರ್ ಸಿ.ಎಮ್ ಅಂತಾ ಹೇಳಿದ್ದು ವೇದಿಕೆಯಲ್ಲೇ ಇದ್ದ ವಿಜಯೇಂದ್ರ ಸಮ್ಮತಿ ಸೂಚಿಸಿದ್ದು, ಇಡೀ ರಾಜ್ಯದ ಜನತೆಯ ಮುಂದೆ ನನ್ನ ಹೇಳಿಕೆ ಸತ್ಯವಾಗಿ ಹೊರಹೊಮ್ಮಿದೆ' ಎಂದು ವಿಡಿಯೋಗೆ ಒಕ್ಕಣೆಯನ್ನು ಸೇರಿಸಿದ್ದಾರೆ.
RainFall: ಗುಡುಗು-ಮಿಂಚಿನಿಂದ ಕೂಡಿದ ವಾತಾವರಣ: ಉ-ಕ ಹಲವು ಭಾಗದಲ್ಲಿ ಮಳೆ!
ವಿಜಯೇಂದ್ರ ವಿರುದ್ಧ ಯತ್ನಾಳ್(Basanagouda Patil Yatnal) ಸರಣಿ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ್ದ ಅವರು ವಿಜಯೇಂದ್ರ ಬಿಹಾರ ಚುನಾವಣೆಗೆ ಕಾಂಗ್ರೆಸ್ ಹಾಗೂ ಆರ್‌ಜೆಡಿಗೆ ಹಣ ನೀಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಪಕ್ಷದ ಪ್ರಮುಖರ ವಿರುದ್ಧದ ಆರೋಪಕ್ಕೆ ಯತ್ನಾಳ್‌ಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇದಕ್ಕೆ ಉತ್ತರವನ್ನೂ ನೀಡಿದ್ದಾರೆ. ಆದರೆ ಮತ್ತೆ ಆರೋಪ ಮುಂದುವರಿಸಿದ್ದಾರೆ.
Narayana Gowda: ಸಚಿವ ನಾರಾಯಣಗೌಡಗೆ ಎದುರಾಗಿದೆ ಸಂಕಷ್ಟ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.