ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಬಿಬಿಎಂಪಿ ಪೌರ ಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಭಾಗ್ಯ ದೊರೆತಿದೆ.
ಘನ ತ್ಯಾಜ್ಯ ನಿರ್ವಹಣೆಯ ವಿವಿಧ ವಿಧಾನಗಳ ಬಗ್ಗೆ ಅಧ್ಯಯನ ನಡೆಸಲು ಅಕ್ಟೋಬರ್ 24ರಿಂದ ನಾಲ್ಕು ದಿನಗಳ ಕಾಲ ಪ್ರವಾಸವನ್ನು ಆಯೋಜಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಂದ 5 ತಂಡಗಳ ಸಿಂಗಾಪುರ ಪ್ರವಾಸ ಈಗಾಗಲೇ ಪೂರ್ಣಗೊಂಡಿದ್ದು, ಸಿಂಗಪೂರಕ್ಕೆ ತೆರಳುತ್ತಿರುವ ಆರನೇ ತಂಡ ಇದಾಗಿದೆ.
ಈ ಪ್ರವಾಸದಲ್ಲಿ ಒಟ್ಟು 39 ಪೌರ ಕಾರ್ಮಿಕರು, ಮೂವರು ಅಧಿಕಾರಿಗಳು ತೆರಳಲಿದ್ದಾರೆ.
ಬಿಬಿಎಂಪಿ, ಪೌರಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿಯವರು ವಿದೇಶ ಪ್ರವಾಸಕ್ಕೆ ಹೊರಟಿರುವ ಪೌರ ಕಾರ್ಮಿಕರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೇಯರ್ ಸಂಪತ್ ರಾಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಚಿವ ಈಶ್ವರ್ ಖಂಡ್ರೆ, ಸಚಿವ ರಮನಾಥ್ ರೈ, ಸರ್ಕಾರದ ಮುಖ್ಯಕಾರ್ಯಧರ್ಶಿ ಸುಭಾಷ್ ಚಂದ್ರ ಕುಂಟೀಯಾ ಉಪಸ್ಥಿತರಿದ್ದರು.