ರಾಪಿಡೋ ಚಾಲಕನಿಂದ ಹಸ್ತಮೈಥುನ, ಮೆಸೇಜ್ ಮಾಡಿ ಕಿರುಕುಳ: ಟ್ವೀಟ್ ಮಾಡಿ ದೂರಿದ ಮಹಿಳೆ

ಒಂದು ಕೈನಲ್ಲಿ ಬೈಕ್ ಚಾಲನೆ ಮಾಡಿಕೊಂಡು ಮತ್ತೊಂದು ಕೈಯಿಂದ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಆದರೆ ಭಯದಿಂದಲೇ ಮನೆ ತಲುಪಬೇಕಾದ ಕಾರಣಕ್ಕೆ ಮೌನವಾಗಿದ್ದೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ.

Written by - VISHWANATH HARIHARA | Edited by - Krishna N K | Last Updated : Jul 22, 2023, 09:36 PM IST
  • ರಾಪಿಡೋ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ.
  • ಟ್ವೀಟ್‌ ಮೂಲಕ ಅಳಲು ತೋಡಿಕೊಂಡ ಮಹಿಳೆ.
  • ಮಹಿಳೆಯ ಟ್ವೀಟ್‌ಗೆ ಸ್ಪಂದಿಸಿರುವ ಬೆಂಗಳೂರು ಪೊಲೀಸರು.
ರಾಪಿಡೋ ಚಾಲಕನಿಂದ ಹಸ್ತಮೈಥುನ, ಮೆಸೇಜ್ ಮಾಡಿ ಕಿರುಕುಳ: ಟ್ವೀಟ್ ಮಾಡಿ ದೂರಿದ ಮಹಿಳೆ title=

ಬೆಂಗಳೂರು : ರಾಪಿಡೋ ಚಾಲಕ ತನಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ. ಅತೀರಾ ಪುರುಷೋತ್ತಮನ್ ಎಂಬ ಮಹಿಳೆ ಅಳಲು ತೋಡಿಕೊಂಡಿದ್ದು, ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ  ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ನಂತರ ಟೌನ್ ಹಾಲ್‌ನಿಂದ ಮನೆಗೆ ತೆರಳಲು ಬುಕ್ ಮಾಡಿದ ಹಲವು ಕ್ಯಾಬ್, ಆಟೋಗಳು ಕ್ಯಾನ್ಸಲ್ ಆದ ಕಾರಣ ನಾನು ಅನಿವಾರ್ಯವಾಗಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದೆ.

ರೈಡರ್ ಆ್ಯಪ್‌ನಲ್ಲಿ ನೋಂದಾಯಿಸಿದ ಬೈಕ್‌ ಬಿಟ್ಟು ಬೇರೆ ಬೈಕ್‌ ಬಂದಿತ್ತು. ಈ ಬಗ್ಗೆ ನಾನು ಕೇಳಿದಾಗ ರಾಪಿಡೋದಲ್ಲಿ ನೋಂದಾಯಿಸಲಾದ ಬೈಕ್ ಸರ್ವಿಸ್ ಬಿಡಲಾಗಿದೆ ಎಂದು ರಾಪಿಡೋ ಚಾಲಕ ಹೇಳಿದ್ದಾನೆ. ಮನೆ ತಲುಪಬೇಕೆಂಬ ಉದ್ದೇಶದಿಂದ ಸಂತ್ರಸ್ಥೆ ಬೈಕ್ ಏರಿದ್ದಾರೆ. ಈ ವೇಳೆ ಒಂದು ಕೈನಲ್ಲಿ ಬೈಕ್ ಚಾಲನೆ ಮಾಡಿಕೊಂಡು ಮತ್ತೊಂದು ಕೈಯಿಂದ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಆದರೆ ಭಯದಿಂದಲೇ ಮನೆ ತಲುಪಬೇಕಾದ ಕಾರಣಕ್ಕೆ ಮೌನವಾಗಿದ್ದೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.

No description available.

ಇದನ್ನೂ ಓದಿ: ಬಿಜೆಪಿ ನಾಯಕರು ಮನೆಯಲ್ಲಿ ಕಂಬಳಿ ಹೊದ್ದು ಮಲಗುವುದು ಒಳಿತು: ಕಾಂಗ್ರೆಸ್ ವ್ಯಂಗ್ಯ

No description available.

ಇನ್ನೂ ನನ್ನ ಮನೆಯ ತೋರಿಸಬಾರದು ಎಂಬ ಕಾರಣಕ್ಕೆ 200 ಮೀಟರ್ ದೂರದಲ್ಲೇ ಡ್ರಾಪ್ ಮಾಡಲು ತೆಗೆದುಕೊಂಡೆ. ಆದರೆ ರಾಪಿಡೋ ಚಾಲಕ ಪದೇ ಪದೇ ತನಗೆ ಕರೆ ಮಾಡಿ, ಸಂದೇಶ ಕಳುಹಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಸಂದೇಶ ಕರೆ ಬಂದ ನಂಬರ್ ಬ್ಲಾಕ್ ಮಾಡಿದ್ರೂ ಸಹ ಬೇರೆ ಬೇರೆ ನಂಬರ್‌ಗಳಿಂದ ಕರೆಗಳು ಬಂದಿವೆ. ಹೀಗಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಗೆ ಟ್ಯಾಗ್ ಮಾಡಿದ್ದಾರೆ. ಮಹಿಳೆಯ ಟ್ವೀಟ್‌ಗೆ ಸ್ಪಂದಿಸಿರುವ ಬೆಂಗಳೂರು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲು ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News