Bird flu: ಚಾಮರಾಜನಗರದಲ್ಲಿ ದಿಢೀರನೇ ಕೋಳಿಗಳ ಸಾವು.. ಹೆಚ್ಚಾಯ್ತು ಹಕ್ಕಿ ಜ್ವರ ಭೀತಿ!

Bird flu: ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ ಸುತ್ತಮುತ್ತಲಿನಲ್ಲಿ ಸಾಕು ಕೋಳಿಗಳು ಸಾಮೂಹಿಕವಾಗಿ ಮೃತವಾಗುತ್ತಿರುವುದರಿಂದ ಹಕ್ಕಿ ಜ್ವರ ಹರಡಿರಬಹುದು ಎಂಬ ಆತಂಕ ಎದುರಾಗಿದೆ. ಗ್ರಾಮದಲ್ಲಿ ಅನೇಕರು ಮನೆಗಳಲ್ಲಿ ನಾಟಿ ತಳಿಯ ಕೋಳಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದರು. 

Written by - Zee Kannada News Desk | Last Updated : Jan 16, 2023, 05:45 PM IST
  • ಚಾಮರಾಜನಗರದಲ್ಲಿ ದಿಢೀರನೇ ಕೋಳಿಗಳ ಸಾವು
  • ಗುಂಡ್ಲುಪೇಟೆಯಲ್ಲಿ ಹೆಚ್ಚಾಯ್ತು ಹಕ್ಕಿ ಜ್ವರ ಭೀತಿ!
Bird flu: ಚಾಮರಾಜನಗರದಲ್ಲಿ ದಿಢೀರನೇ ಕೋಳಿಗಳ ಸಾವು.. ಹೆಚ್ಚಾಯ್ತು ಹಕ್ಕಿ ಜ್ವರ ಭೀತಿ! title=

ಚಾಮರಾಜನಗರ: ನೆರೆಯ ರಾಜ್ಯ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ತಾಲ್ಲೂಕಿನ ಗಡಿಭಾಗದಲ್ಲಿ ಪಶುಪಾಲನಾ ಇಲಾಖೆ ನಿಗಾವಹಿಸಿದ್ದರು ಸಹ ತಾಲ್ಲೂಕಿನ ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ ಸುತ್ತಮುತ್ತಲಿನಲ್ಲಿ ಸಾಕು ಕೋಳಿಗಳು ಸಾಮೂಹಿಕವಾಗಿ ಮೃತವಾಗುತ್ತಿರುವುದರಿಂದ ಹಕ್ಕಿ ಜ್ವರ ಹರಡಿರಬಹುದು ಎಂಬ ಆತಂಕ ಎದುರಾಗಿದೆ.

ಗ್ರಾಮದಲ್ಲಿ ಅನೇಕರು ಮನೆಗಳಲ್ಲಿ ನಾಟಿ ತಳಿಯ ಕೋಳಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಹದಿನೈದು ದಿನಗಳಿಂದ ಕೋಳಿಗಳು ಆರೋಗ್ಯವಾಗಿದ್ದಂತೆ ಕಂಡುಬಂದರೂ ಅಲ್ಲಲ್ಲಿ ಸಾಯುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಸುಮಾರು ಈವರೆಗೆ ನೂರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದೆ.

ಇದನ್ನೂ ಓದಿ : ರಾಜ್ಯದ ರೈತರಿಗೆ ಸಿಹಿ ಸುದ್ದಿ! ತಿಂಗಳಾಂತ್ಯಕ್ಕೆ "ರೈತ ಶಕ್ತಿ ಯೋಜನೆ"ಗೆ ಚಾಲನೆ

ಕೇರಳದಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ 766 ನಲ್ಲಿ ಬರುವಾಗ ಗಡಿಭಾಗ ಮೂಲೆಹೊಳೆ ಚೆಕ್ಪೋಸ್ಟಿನಲ್ಲಿ ವಾಹನಗಳಿಗೆ ಸೋಡಿಯಂ ಹೈಪೋ ಕ್ಲೋರೈಡ್ ಸಿಂಪಡಣೆ ಮಾಡಲಾಗುತ್ತದೆ ಆದರೆ,ರಾಷ್ಟ್ರೀಯ 212 ನಲ್ಲಿ ಕೆಕ್ಕನಹಳ್ಳ ಚೆಕ್ಪೋಸ್ಟಿನ ಕಡೆಯಿಂದ ಬರುವ ಕೇರಳದ ವಾಹನಗಳಿಗೆ ಯಾವುದೇ ತಪಾಸಣೆ ಇರುವುದಿಲ್ಲ.

ಗುಂಡ್ಲುಪೇಟೆ ತಾಲ್ಲೂಕಿನ ಅನೇಕ ವಾಹನಗಳು ಕೇರಳದ ವಿವಿಧ ಭಾಗಗಳಿಗೆ ರಾಷ್ಟ್ರೀಯ ಹೆದ್ದಾರಿ 766 ನಲ್ಲಿ ಹೋಗಿ ಬರುವಾಗ ರಾಷ್ಟ್ರೀಯ 212 ತಮಿಳುನಾಡಿನ ಗುಡಲೂರು ಮಾರ್ಗವಾಗಿ ಬರುತ್ತದೆ. ಇದರಿಂದಾಗಿ ಸೋಂಕು ಹರಡಿರಬಹುದು ಎಂದು ಆತಂಕ ಎದುರಾಗಿದೆ.

ಇದನ್ನೂ ಓದಿ : “ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ”-ಪ್ರಿಯಾಂಕಾ ಗಾಂಧಿ

ಕೋಳಿಯ ಮೃತ ದೇಹವನ್ನು ಗುಂಡ್ಲುಪೇಟೆ ಪಟ್ಟಣದ ಪಶುಸಂಗೋಪನೆ ಇಲಾಖೆಗೆ ತಲುಪಸಿದ್ದಾರೆ. ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಅವರು ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಗಳನ್ನು ಮೈಸೂರಿನ ಲ್ಯಾಬ್ ಗೆ ಕಳುಸಿದ್ದಾರೆ. ಈ ಸಂಬಂಧ ಮಾತನಾಡಿ ವರದಿ ಬಂದ ನಂತರ ಮಾಹಿತಿ ಸಿಗುತ್ತದೆ ಎಂದರು. ಒಟ್ಟಿನಲ್ಲಿ ಕೇರಳದ ಹಕ್ಕಿ ಜ್ವರ ಕಾಲಿಟ್ಟ ಭೀತಿ ಆರಂಭವಾಗಿದ್ದು ಕೋಳಿ ಸಾಕಾಣಿದಾರರಲ್ಲಿ ಆತಂಕ ಎದುರಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News