ಜೆಡಿಎಸ್ ಪಕ್ಷದ ದಲಿತ ಸಿಎಂ ಅಭ್ಯರ್ಥಿ ಯಾರು?: ಎಚ್‍ಡಿಕೆಗೆ ಬಿಜೆಪಿ ಪ್ರಶ್ನೆ

ರಾಜ್ಯದಲ್ಲಿ ಬಿಜೆಪಿ ಬೆಳೆದು ನಿಂತಿದ್ದು ಸಾಂದರ್ಭಿಕ ಶಿಶುವಿನ ರೀತಿಯಲ್ಲ. ದಶಕಗಳ ಹೋರಾಟದ ಇತಿಹಾಸ ನಮಗಿದೆ ಎಂದು ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದೆ.

Written by - Zee Kannada News Desk | Last Updated : Apr 11, 2022, 03:21 PM IST
  • ಹೊಂದಾಣಿಕೆ ರಾಜಕಾರಣದ ಪಿತಾಮಹರಾದ ನೀವು ಕನ್ನಡಿಗರ ಹೆಸರನ್ನೇಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ?
  • ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ
  • ಹರಕು ಬಾಯಿಯ ಪದಗಳ ಕಾರಣ ಮಂಡ್ಯದ ಕನ್ನಡಿಗರು ನಿಮ್ಮ ಪುತ್ರರತ್ನನಿಗೆ ನೀಡಿದ ಉಡುಗೊರೆ ನೆನಪಿಸಿಕೊಳ್ಳಿ
ಜೆಡಿಎಸ್ ಪಕ್ಷದ ದಲಿತ ಸಿಎಂ ಅಭ್ಯರ್ಥಿ ಯಾರು?: ಎಚ್‍ಡಿಕೆಗೆ ಬಿಜೆಪಿ ಪ್ರಶ್ನೆ  title=
ಎಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ತಿರುಗೇಟು

ಬೆಂಗಳೂರು: ಜೆಡಿಎಸ್‌ ಪಕ್ಷದ ದಲಿತ ಸಿಎಂ ಅಭ್ಯರ್ಥಿ ಯಾರು? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಪ್ರಶ್ನಿಸಿದೆ. ಬಿಜೆಪಿ ಸರ್ಕಾರದ ವಿರುದ್ಧ ಟೀಕಿಸಿದ್ದ ಎಚ್‍ಡಿಕೆಗೆ ಸರಣಿ ಟ್ವೀಟ್ ಮೂಲಕ ಕಮಲ’ ಪಕ್ಷ ತಿರುಗೇಟು ನೀಡಿದೆ.

‘ಮಾಜಿ #LuckyDipCMHDK ಅವರೇ, ಹೊಂದಾಣಿಕೆ ರಾಜಕಾರಣದ ಪಿತಾಮಹರಾದ ನೀವು ಕನ್ನಡಿಗರ ಹೆಸರನ್ನೇಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ? ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ. ಭಾರತೀಯ ಜನತಾ ಪಾರ್ಟಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎನ್ನುವುದನ್ನು ನೆನಪಿಡಿ’ ಎಂದು ಕುಟುಕಿದೆ.

ಇದನ್ನೂ ಓದಿ: ಅತೀಹೆಚ್ಚು ಸುಳ್ಳು ಹೇಳಿದ ಬಿಜೆಪಿ ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್ ಖಚಿತ: ಸಿದ್ದರಾಮಯ್ಯ

‘ರಾಜ್ಯದಲ್ಲಿ ಬಿಜೆಪಿ ಬೆಳೆದು ನಿಂತಿದ್ದು ಸಾಂದರ್ಭಿಕ ಶಿಶುವಿನ ರೀತಿಯಲ್ಲ. ದಶಕಗಳ ಹೋರಾಟದ ಇತಿಹಾಸ ನಮಗಿದೆ. ಮಾಜಿ #LuckyDipCMHDK ಅವರೇ, ಕಿತ್ತು ಹಾಕುತ್ತೇನೆ, ಗುಡ್ಡೆ ಹಾಕುತ್ತೇನೆ ಎಂಬ ಹರಕು ಬಾಯಿಯ ಪದಗಳಿಗಾಗಿ ಮಂಡ್ಯದ ಕನ್ನಡಿಗರು ಪುತ್ರರತ್ನನಿಗೆ ನೀಡಿದ ಉಡುಗೊರೆ ನೆನಪಿಸಿಕೊಳ್ಳಿ. ಉಡಾಫೆ ಮಾತಾಡುವ ಮುನ್ನ ಎಚ್ಚರವಿರಲಿ!’ ಅಂತಾ ಟೀಕಾಪ್ರಹಾರ ನಡೆಸಿದೆ.

‘ಮಾಜಿ #LuckyDipCMHDK ಅವರೇ, ಜೆಡಿಎಸ್‌ ಪಕ್ಷದಲ್ಲಿ ಒಂದು ಕುಟುಂಬದಿಂದ ಎರಡು ಟಿಕೆಟ್‌ ಮಾತ್ರ ಎಂಬ ಘೋಷಣೆ ಮಾಡುವ ಸಾಮರ್ಥ್ಯ ಇದೆಯೇ?, ಜೆಡಿಎಸ್‌ ಪಕ್ಷದ ದಲಿತ ಸಿಎಂ ಅಭ್ಯರ್ಥಿ ಯಾರು? ಅಧಿಕಾರಕ್ಕಾಗಿ #ಕಣ್ಣೀರಧಾರೆ ಸುರಿಸಿ ಈಗ ಈಗ #ಜನತಾಜಲಧಾರೆ ಎಂಬ ನಾಟಕ ಮಾಡುತ್ತಿರುವುದೇಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ.  

ಇದನ್ನೂ ಓದಿ: ಸೈಮನ್ ರಾಜ್‌ಗೆ ಹಣ ಕೊಟ್ಟು ಸುಳ್ಳು ಹೇಳಿಸಿದ್ದಾರೆ: ಜಮೀರ್ ಅಹ್ಮದ್ ಆರೋಪ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News