ಬೆಂಗಳೂರು: ಜೈಲು ಹಕ್ಕಿಯ ಅನುಭವ ಇದೆ ಎಂಬ ಕಾರಣಕ್ಕಾಗಿ ನನ್ನನ್ನು ಬಂಧಿಸಿ, ಬಂಧಿಸಿ ಎನ್ನುತ್ತಿದ್ದೀರಾ? ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar)ಗೆ ಬಿಜೆಪಿ ಪ್ರಶ್ನಿಸಿದೆ. ‘ನನ್ನನ್ನು ಬಂಧಿಸಿ’ ಎಂಬ ಹೇಳಿಕೆ ನೀಡಿದ್ದ ಡಿಕೆಶಿಗೆ ಟ್ವೀಟ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ತಮ್ಮನ್ನು ತಾವೇ ವಿಜೃಂಭಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ನನ್ನನ್ನು ಬಂಧಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಡಿಕೆಶಿಯವರೇ ಇದೇನಿದು, ಸಹಾನುಭೂತಿ ಗಿಟ್ಟಿಸಿಕೊಳ್ಳುವ ಹೊಸ ತಂತ್ರವೇ? ಅಥವಾ ಜೈಲು ಹಕ್ಕಿಯ ಅನುಭವ ಇದೆ ಎಂಬ ಕಾರಣಕ್ಕಾಗಿ ಬಂಧಿಸಿ, ಬಂಧಿಸಿ ಎನ್ನುತ್ತಿದ್ದೀರಾ?’ ಅಂತಾ ವ್ಯಂಗ್ಯವಾಗಿ ಬಿಜೆಪಿ(BJP) ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ತಾವೇ ವಿಜೃಂಭಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ನನ್ನನ್ನು ಬಂಧಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಡಿಕೆಶಿಯವರೇ ಇದೇನಿದು, ಸಹಾನುಭೂತಿ ಗಿಟ್ಟಿಸಿಕೊಳ್ಳುವ ಹೊಸ ತಂತ್ರವೇ?
ಅಥವಾ ಜೈಲು ಹಕ್ಕಿಯ ಅನುಭವ ಇದೆ ಎಂಬ ಕಾರಣಕ್ಕಾಗಿ ಬಂಧಿಸಿ, ಬಂಧಿಸಿ ಎನ್ನುತ್ತಿದ್ದೀರಾ?
— BJP Karnataka (@BJP4Karnataka) February 23, 2022
ಇದನ್ನೂ ಓದಿ: Harsha Murder Case: ಒಟ್ಟು 8 ಆರೋಪಿಗಳನ್ನು ಬಂಧಿಸಿರುವ ಪೊಲೀಸರು
‘ಹರ್ಷ ಕೊಲೆ ಪ್ರಕರಣ(Harsha Murder Case)ದಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಘಟನೆಗೆ ನನ್ನ ಪ್ರಚೋಚನೆ ಇದೆ ಎಂದು ಹೇಳುತ್ತಿರುವುದರಿಂದ ನನ್ನನ್ನು ಬಂಧಿಸಲಿ. ರಾಜಕಾರಣಕ್ಕಾಗಿ ಗಲಾಟೆ ಮಾಡಿದರೆ ಹೂಡಿಕೆದಾರರು ಬರುವುದಿಲ್ಲ. ಹೊರಗಿನಿಂದ ಬಂದವರು ದುಷ್ಕೃತ್ಯ ಮಾಡಿದ್ದಾರೆ ಎನ್ನುತ್ತಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರನ್ನೂ ಬದುಕಿದ್ದ ಹಾಗೆಯೇ ಸಾಯಿಸುತ್ತಿದ್ದಾರೆ. ಯಾರೂ ತಪ್ಪು ಮಾಡಿದರೂ ತಪ್ಪೇ. ಸಚಿವರೇ ನಿಷೇಧಾಜ್ಞೆ ಮುರಿದು ಮೆರವಣಿಗೆ ನಡೆಸಿ ಕಲ್ಲು ಹೊಡೆಸಿದ್ದಾರಲ್ಲ ಅವರ ಮೇಲೆ ಪ್ರಕರಣ ಏಕಿಲ್ಲ. ಇದಕ್ಕೆ ಖಾಕಿ ತೊಟ್ಟವರು ಉತ್ತರಿಸಬೇಕು’ ಎಂಬ ಡಿಕೆಶಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್(Congress) ಟ್ವೀಟ್ ಮಾಡಿತ್ತು.
ಹರ್ಷ ಕೊಲೆಯಲ್ಲಿ ಕೆಲವರನ್ನು ಬಂಧಿ ಸಿದ್ದಾರೆ. ಘಟನೆಗೆ ನನ್ನ ಪ್ರಚೋದನೆ ಇದೆ ಎಂದು ಹೇಳುತ್ತಿರುವುದರಿಂದ ನನ್ನನ್ನು ಬಂಧಿಸಲಿ,
ಸಚಿವರೇ ನಿಷೇಧಾಜ್ಞೆ ಮುರಿದು ಮೆರವಣಿಗೆ ನಡೆಸಿ ಕಲ್ಲು ಹೊಡೆಸಿದ್ದಾರಲ್ಲ ಅವರ ಮೇಲೆ ಪ್ರಕರಣ ಏಕಿಲ್ಲ. ಇದಕ್ಕೆ ಖಾಕಿ ತೊಟ್ಟವರು ಉತ್ತರಿಸಬೇಕು.@DKShivakumar pic.twitter.com/g9FnUyztBX
— Karnataka Congress (@INCKarnataka) February 23, 2022
ಇದನ್ನೂ ಓದಿ: Harsha Murder Case: ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ – ಸಿಎಂ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.