ಬೆಂಗಳೂರು : ಪ್ರತಿ ಗಂಟೆಗೂ ಹೆಚ್ಚೆಚ್ಚು ದಾಖಲೆಗಳು ಸಿಗುತ್ತಿವೆ. ಇಡೀ ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಗೆ ಸಂಭಂದಿಸಿದಂತೆ ಪ್ರತಿಕ್ರಿಯಿಸಿದ ಸುರ್ಜೆವಾಲಾ, ಇನ್ನೂ ಬಿಬಿಎಂಪಿ ಕಮಿಷನರ್ ವಿರುದ್ಧ ಯಾಕೆ ಎಫ್ಐಆರ್ ದಾಖಲಾಗಿಲ್ಲ? ಮೊದಲ ಮುಖ್ಯ ಆರೋಪಿ ಸಿಎಂ ಬೊಮ್ಮಾಯಿ ಹಾಗೂ ಕಮಿಷನರ್ ಎರಡನೇ ಆರೋಪಿ. ಸಿಎಂ ಒಂದು ಕಡೆ ಇದು ಸುಳ್ಳು ಆರೋಪ ಅಂತಾರೆ. ಇನ್ನೊಂದು ಕಡೆ ತನಿಖೆ ಮಾಡಿಸುತ್ತೇವೆ ಎನ್ನುತ್ತಾರೆ. ಯಾವುದಾದರೂ ಪೊಲೀಸ್ ಆಫೀಸರ್ ಸಿಎಂ ವಿರುದ್ಧ ಹೋಗುತ್ತಾರಾ? ಈ ವಿಚಾರದಲ್ಲಿ ಕನ್ನಡಿಗರನ್ನು ದಾರಿ ತಪ್ಪಿಸಲಾಗುತ್ತಿದೆ. ಚಿಲುಮೆ ಸಂಸ್ಥೆ ವಿರುದ್ದ ಯಾಕೆ ಎಫ್ಐಆರ್ ಆಗಿಲ್ಲ. ಡಿಎಪಿ ಹೊಂಬಾಳೆ ಹಾಗೂ ಕೃಷ್ಣಪ್ಪ ರವಿಕುಮಾರ್, ಭೈರಪ್ಪ ಶೃತಿ ವಿರುದ್ಧ ಯಾಕೆ ಎಫ್ಐಆರ್ ದಾಖಲಾಗಿಲ್ಲ. ಬಿಬಿಎಂಪಿ ದಾಖಲೆಗಳ ಕಳ್ಳತನ ಆಗಿರುವ ಮಾಹಿತಿ ಎಲ್ಲಿಗೆ ಹೋಗಿದೆ ಅಂತ ಯಾಕೆ ತಿಳಿಸುತ್ತಿಲ್ಲ. ಸಿಎಂ ಬೊಮ್ಮಾಯಿ ಯಾಕೆ ಇದುವರೆಗೆ ಡಿಜಿಟಲ್ ಸಮೀಕ್ಷಾ ಆ್ಯಪ್ ಸೀಜ್ ಮಾಡಿಲ್ಲ? ಸಿಎಂ ಬೊಮ್ಮಾಯಿ ಯಾಕೆ ಉತ್ತರ ಕೊಡುತ್ತಿಲ್ಲ? ಚಿಲುಮೆ ಸಂಸ್ಥೆಗೆ ಯಾರು ಹಣ ನೀಡ್ತಿದ್ದಾರೆ? ಉಚಿತವಾಗಿ ಕೆಲಸ ಮಾಡುವ ಸಂಸ್ಥೆಗೆ ಕೋಟಿ ಕೋಟಿ ಹಣ ಎಲ್ಲಿಂದ ಹರಿದು ಬರುತ್ತಿದೆ? ಚಿಲುಮೆ ಸಂಸ್ಥೆ 15 ಸಾವಿರ ಉದ್ಯೋಗಿಗಳನ್ನ ನೇಮಕ ಹೇಗೆ ಮಾಡಿಕೊಂಡಿದೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಹನಿ ಟ್ರಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡ್ಬೇಕು: ಕಾಂಗ್ರೆಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.