DK Shivakumar : ಮೇಕೆದಾಟು ಪಾದಯಾತ್ರೆ ಸೈಡ್ ಲೈನ್ ಆಗುತ್ತಾ ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧದ ಧರಣಿ?

ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸದ್ಯದಲ್ಲೇ ಕೈಬಿಡುವ ಲೆಕ್ಕಾಚಾರವನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಿಂತನೆ ನಡೆಸುತ್ತಿದ್ದಾರೆ. 

Written by - Prashobh Devanahalli | Last Updated : Feb 20, 2022, 12:57 PM IST
  • ಉಭಯ ಸದನಗಳಲ್ಲೂ ಸಚಿವ ಈಶ್ವರಪ್ಪ ಹೇಳಿಕೆ ವಿರೋಧಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ
  • ಅಹೋರಾತ್ರಿ ಧರಣಿ ಸದ್ಯದಲ್ಲೇ ಕೈಬಿಡುವ ಲೆಕ್ಕಾಚಾರ ನಡೆಸುತ್ತಿದ್ದಾರೆ ಡಿಕೆಶಿ
  • ಎಲ್ಲಿ ನಿಂತಿತ್ತೊ ಅಲ್ಲಿಂದಲೆ ಮತ್ತೆ ಪಾದಯಾತ್ರೆಆರಂಭ..!
DK Shivakumar : ಮೇಕೆದಾಟು ಪಾದಯಾತ್ರೆ ಸೈಡ್ ಲೈನ್ ಆಗುತ್ತಾ ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧದ ಧರಣಿ? title=

ಬೆಂಗಳೂರು : ಉಭಯ ಸದನಗಳಲ್ಲೂ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸದ್ಯದಲ್ಲೇ ಕೈಬಿಡುವ ಲೆಕ್ಕಾಚಾರವನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಿಂತನೆ ನಡೆಸುತ್ತಿದ್ದಾರೆ. 

ಅರ್ಧಕ್ಕೆ ಮುಂದೂಡಿದ ಮೇಕೆದಾಟು ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ(Mekedatu padayatra) ನಡೆದಿಸಿದ ಕೆಪಿಸಿಸಿ ಈಗ ಫೆ.27 ರಿಂದ ಮರುಪ್ರಾರಂಭ ಆಗಲಿದೆ, ಡಿಕೆಶಿ ಪ್ರತಿಷ್ಠೆಗೆ ಮಾಡಲಾಗುತ್ತಿರುವ ಈ ಪಾದಯಾತ್ರೆ ಮಧ್ಯೆ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ಪ್ರತಿಭಟನೆ ಮಾಡಿದರೆ ಪಾದಯಾತ್ರೆಗೆ ಹೆಚ್ವು ಪ್ರಚಾರ ಸಿಗುವುದಿಲ್ಲ ಎಂಬ ಲೆಕ್ಕಾಚಾರ ಹಾಕಿರುವ ಕನಕಪುರ ಶಾಸಕ, ಉಭಯ ಸದನಗಳನ್ನು ಅನಿರ್ದಿಷ್ಟಾವಧಿ ಮುಂದೂಡುವುದುಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಇದನ್ನೂ ಓದಿ : ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಮೊಬೈಲ್ ಸುಲಿಗೆ ಪ್ರಕರಣ: ನಾಲ್ವರು ಆರೋಪಿಗಳು ಬಂಧನ

ಕೆಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ಧರಿಣಿ ಮಾಡುತ್ತಿರುವ ಕಾಂಗ್ರೆಸ್(Congress), ಕೇವಲ ವಿಧಾನಮಂಡಲ ಅಧಿವೇಶನದಲ್ಲಿ ಗದ್ದಲ ಎಬ್ಬಿಸಲು ಹಾಗೂ ಹಿಜಾಬ್ ವಿಚಾರದಿಂದ ಜಾರಿಕೊಳ್ಳಲು ಮಾಡಿರುವ ಪ್ರಯತ್ನ ಎಂಬ ಟೀಕೆಗೆ ಕೈ ಪಾಲಯ ಗುರಿಯಾಗಲಿದೆ.

ವಿಧಾನಮಂಡಲ ಕಲಾಪವನ್ನು ಮುಂದೂಡಿದರೆ, ಮೇಕೆದಾಟು ಪಾದಯಾತ್ರೆಯ ಸಿದ್ಧತೆಗೆ ಸಕಲ ತಯಾರಿ ಮಾಡಬೇಕಿದೆ, ನಮ್ಮ ನೀರು ನಮ್ಮ ಹಕ್ಕು ಎಂದು ‌ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ಆದ್ರೆ ಕೊವೀಡ್(Covid-19) ಹಿನ್ನೆಲೆಯಲ್ಲಿ ಯಾತ್ರೆ ಪೂರ್ಣ ಮಾಡಲು ಆಗಿರಲಿಲ್ಲ. ಈಗ ಕರೋನ ತಗ್ಗಿರುವುದರಿಂದ ಪಾದಯಾತ್ರೆ ಮತ್ತೆ ಆರಂಭವಾಗುತ್ತಿದೆ.

ಎಲ್ಲಿ ನಿಂತಿತ್ತೊ ಅಲ್ಲಿಂದಲೆ ಮತ್ತೆ ಪಾದಯಾತ್ರೆಆರಂಭ..!

ಮೇಕೆದಾಟು ಯೋಜನೆ(Mekedatu Project) ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಮಾಡಿತ್ತು. ಮೇಕೆದಾಟು ಸಂಗಮದಿಂದ ಬೆಂಗಳೂರು ನಗರದವರೆಗೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಕೊವೀಡ್ 3ನೇ ಅಲೆ ಇರುವುದರಿಂದ ಪಾದಯಾತ್ರೆ ಮಾಡಲು ಸಾಕಷ್ಟು ವಿರೋಧವನ್ನು ರಾಜ್ಯ ಸರ್ಕಾರ ಮಾಡಿತ್ತು.ಆದ್ರೆ ಹಠ ಬಿಡದ ಕಾಂಗ್ರೆಸ್ ನಾಯಕರು ಪಾದಯಾತ್ರೆ ಆರಂಭ ಮಾಡಿದ್ರು. ನಾಲ್ಕು ದಿನಗಳವರೆಗೆ ಪಾದಯಾತ್ರೆ ಕೂಡ ಕೈ ಪಡೆ ಮಾಡ್ತು. ಆದ್ರೆ ಕರೋನ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತಿದಂತೆ ಪಾದಯಾತ್ರೆಗೆ ರಾಜ್ಯ ಸರ್ಕಾರ ನಿರ್ಬಂಧ ಹೆರಿತು. ಅನಿವಾರ್ಯವಾಗಿ ರಾಮನಗರದಲ್ಲಿ‌ ಪಾದಯಾತ್ರೆಗೆ ಬ್ರೇಕ್ ಹಾಕಲಾಯಿತು.

ಇದನ್ನೂ ಓದಿ : BS Yediyurappa: ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ ಬಿ.ಎಸ್.ಯಡಿಯೂರಪ್ಪ

ಈಗ ರಾಜ್ಯದಲ್ಲಿ ಕರೋನ ತಗ್ಗಿದೆ. ಒಂದೊಂದೆ ಕ್ಷೇತ್ರಗಳಿಗೆ ವಿನಾಯಿತಿ ಕೂಡ ಸಿಗುತ್ತಿದೆ. ಇದೆ ಇಪ್ಪತ್ತಕ್ಕೆ ಕೊವೀಡ್ ಮಾರ್ಗಸೂಚಿಗಳು ಮುಕ್ತಾಯವಾಗುತ್ತಿವೆ‌. ಹೀಗಾಗಿ ಕಾಂಗ್ರೆಸ್(Congress) ಮತ್ತೆ ಪಾದಯಾತ್ರೆ ಮಾಡಲು ಸಿದ್ದವಾಗಿದೆ. ಇದೆ 27 ರಿಂದ ಪಾದಯಾತ್ರೆ ಆರಂಭಿಸುತ್ತಿದೆ. ರಾಮನಗರದಿಂದ ಬೆಂಗಳೂರುವರೆಗೆ ಐದು ದಿನಗಳ ಕಾಲ ಪಾದಯಾತ್ರೆ ಮಾಡಲಾಗುತ್ತಿದೆ. ಅಲ್ಲದೆ ಪಾದಯಾತ್ರೆ ಮಾರ್ಗಗಳನ್ನು ಕೂಡ ಒಂದಷ್ಟು ಬದಲಾವಣೆ ಮಾಡಿಕೊಳ್ಳಾಗಿದೆ. ಆದರಿಂದ ಕಾಂಗ್ರೆಸ್ ತಮ್ಮ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಪಾದಯಾತ್ರೆಲ್ಲಿ ಭಾಗವಹಿಸುವಂತೆ ಕರೆ ನಿಡಲಾಗುತ್ತಿದೆ.

ಒಟ್ಟಾರೆ ಕಾಂಗ್ರೆಸ್ ಪಕ್ಷ ಹಿಜಾಬ್ ವಿಚಾರದಿಂದ ಜಾರಿಕೊಳ್ಳುತ್ತಿದೆ, ಕೈ ಶಾಸಕರಿಗೆ ಹಿಜಾಬ್(Hijab) ವಿಚಾರವಾಗಿ ಮಾತನ್ನಾಡಿದರೆ ರಾಜಕೀಯ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬಿಜೆಪಿ ಹೇಳಿಕೆಗೆ ಇವರ ಈ ನಿರ್ಧಾರ ಪುಷ್ಟಿ ನೀಡಲಿದೆ. ಕೆಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ಪ್ರತಿಭಟನೆಯನ್ನು ನಿಲ್ಲಿಸಿದರೆ ಬಿಜೆಪಿಯ ಟೀಕೆಗಳಿಗೆ ಕಾಂಗ್ರೆಸ್ ಗುರಿಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News